ಬೆಂಗಳೂರು: ಇಲ್ಲಿನ ಹೋಟೆಲ್ ಒಂದರಲ್ಲಿ ವಿಷ್ಣು ಭಟ್ ಹಾಗೂ ಡ್ರಗ್ ಮತ್ತು ಬಿಟ್ಕಾಯಿನ್ ಪ್ರಕರಣದ ಆರೋಪಿಯಾಗಿದ್ದ ಶ್ರೀಕೃಷ್ಣ ಎಂಬಾತನ ಪುಂಡಾಟ ಪ್ರಕರಣಕ್ಕೆ ಸಂಬಂಧಿಸಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಇಬ್ಬರೂ ಮಾದಕ ವಸ್ತು ಸೇವಿಸಿರುವುದು ದೃಢವಾಗಿದೆ. ಮಾದಕ ವಸ್ತು ಸೇವನೆ ದೃಢ ಹಿನ್ನೆಲೆಯಲ್ಲಿ ವಿಷ್ಣು ಭಟ್ ಮನೆ ಪರಿಶೀಲನೆ ನಡೆಸಲಾಗಿದೆ. ಇಂದಿರಾನಗರದ ವಿಷ್ಣು ಭಟ್ ಮನೆಯಲ್ಲಿ ಪೊಲೀಸರ ಶೋಧಕಾರ್ಯ ನಡೆದಿದೆ. ಭೀಮಾ ಜ್ಯುವೆಲರ್ಸ್ ಮಾಲೀಕನ ಪುತ್ರನಾಗಿರುವ ವಿಷ್ಣು ಭಟ್ ಮನೆಯಲ್ಲಿ ಪರಿಶೀಲನೆ ಮಾಡಲಾಗಿದೆ.
ಈ ವೇಳೆ, ವಿಷ್ಣು ಭಟ್ ಮನೆಯಲ್ಲಿ ಗಾಂಜಾ ಬೆರೆಸಿದ ಸಿಗರೇಟ್ ಪತ್ತೆ ಆಗಿದೆ. ಮನೆಯಲ್ಲಿ ಗಾಂಜಾ ಬೆರೆಸಿದ ಸಿಗರೇಟ್ ಸೇವಿಸಿರುವುದು ಪತ್ತೆಯಾಗಿದೆ. ವಿಷ್ಣು ಭಟ್ ಮನೆಯಲ್ಲಿ ಪೌಡರ್ ಮಾದರಿಯ ಡ್ರಗ್ಸ್ ಪತ್ತೆಯಾಗಿದೆ. ಹ್ಯಾಕರ್ ಶ್ರೀಕೃಷ್ಣ, ವಿಷ್ಣು ಭಟ್ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎನ್ಡಿಪಿಎಸ್ ಕಾಯ್ದೆಯಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಶ್ರೀಕೃಷ್ಣ, ವಿಷ್ಣು ಭಟ್ ವಿಚಾರಣೆ ಮುಂದುವರಿಸಿದ್ದಾರೆ.
ಹೋಟೆಲ್ನಲ್ಲಿ ವಿಷ್ಣು ಭಟ್, ಶ್ರೀಕೃಷ್ಣನ ಪುಂಡಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಷ್ಣು ಭಟ್, ಶ್ರೀಕೃಷ್ಣ ಮಾದಕ ವಸ್ತು ಸೇವಿಸಿರುವುದು ದೃಢವಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ. ಶರಣಪ್ಪ ಹೇಳಿಕೆ ನೀಡಿದ್ದಾರೆ. ವೈದ್ಯಕೀಯ ತಪಾಸಣೆ ವೇಳೆ ಮಾದಕ ವಸ್ತು ಸೇವನೆ ದೃಢವಾಗಿದೆ. ಇದರ ಬೆನ್ನಲ್ಲೇ ವಿಷ್ಣು ಭಟ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದೆವು. ವಿಷ್ಣು ಭಟ್ ಮನೆಯಲ್ಲಿ ಗಾಂಜಾ, ಮಾದಕ ವಸ್ತು ಸಿಕ್ಕಿದೆ. ಪತ್ತೆಯಾದ ವಸ್ತುವನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಆರೋಪಿಗಳಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಬೇಕಾಗಿದೆ. ಹೀಗಾಗಿ ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸುತ್ತೇವೆ. ಮೊದಲ ಆರೋಪಿ ವಿಷ್ಣು ಭಟ್ ವಶಕ್ಕೆ ನೀಡುವಂತೆ ಮನವಿ ಮಾಡುತ್ತೇವೆ. ಆರೋಪಿಗಳಿಗೆ ಗಾಂಜಾ, ಮಾದಕ ವಸ್ತು ಎಲ್ಲಿಂದ ಬಂದವು? ಯಾರು ಇವರಿಗೆ ಮಾದಕ ವಸ್ತು ಪೂರೈಸಿದ್ದರೆಂದು ವಿಚಾರಣೆ ನಡೆಸುತ್ತೇವೆ. ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀಕಿ, ವಿಷ್ಣು ಭಟ್ ಪುಂಡಾಟ ಪ್ರಕರಣ; ಭೀಮಾ ಜ್ಯುವೆಲರ್ಸ್ ಮಾಲೀಕನ ಮಗ ವಿಷ್ಣು ಬಂಧನ
ಇದನ್ನೂ ಓದಿ: Bitcoin Case: ಬಿಟ್ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಬೆಂಗಳೂರಿನ 5 ಸ್ಟಾರ್ ಹೊಟೇಲಿನಲ್ಲಿ ಬಂಧನ
Published On - 9:33 pm, Sun, 7 November 21