ಶಾಸಕನ ಮಗನೆಂದು ನಂಬಿಸಿ, ರೇಪ್ ಮಾಡ್ತಿದ್ದ ಎಂಬಿಎ ಪದವೀಧರ ಸಿಕ್ಕಿಬಿದ್ದ
ಬೆಂಗಳೂರು: ಶಾಸಕನ ಮಗ ಎಂದು ಹೆದರಿಸಿ ರೇಪ್ ಮಾಡಿದ್ದ ಆರೋಪಿಯನ್ನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಹಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಅರೋಪಿ. ಈತ ತಮಿಳುನಾಡಿನ ತಿರುಚ್ಚಿ ಮೂಲದ ಎಂಬಿಎ ಪದವೀಧರ. ಇವನ ವಿರುದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ 6 ಪ್ರಕರಣಗಳು ತಮಿಳುನಾಡು, ಕರ್ನಾಟಕದಲ್ಲಿ ದಾಖಲಾಗಿವೆ. ಈತ ಪ್ರತಿಷ್ಠಿತ ಮಾಲ್, ಹೋಟೆಲ್ಗಳಲ್ಲಿ ಯುವತಿಯರನ್ನು ಭೇಟಿ ಮಾಡಿ, ತಾನು ಮಾಲ್ ಮ್ಯಾನೇಜರ್, ಎಂ.ಡಿ. ಎಂದು ಹೇಳಿ ಪರಿಚಯ ಮಾಡಿಕೊಳ್ಳುತಿದ್ದ. ಬಳಿಕ ಯುವತಿಯರ ಹಿನ್ನೆಲೆ ತಿಳಿದು […]
ಬೆಂಗಳೂರು: ಶಾಸಕನ ಮಗ ಎಂದು ಹೆದರಿಸಿ ರೇಪ್ ಮಾಡಿದ್ದ ಆರೋಪಿಯನ್ನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಹಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಅರೋಪಿ. ಈತ ತಮಿಳುನಾಡಿನ ತಿರುಚ್ಚಿ ಮೂಲದ ಎಂಬಿಎ ಪದವೀಧರ. ಇವನ ವಿರುದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ 6 ಪ್ರಕರಣಗಳು ತಮಿಳುನಾಡು, ಕರ್ನಾಟಕದಲ್ಲಿ ದಾಖಲಾಗಿವೆ.
ಈತ ಪ್ರತಿಷ್ಠಿತ ಮಾಲ್, ಹೋಟೆಲ್ಗಳಲ್ಲಿ ಯುವತಿಯರನ್ನು ಭೇಟಿ ಮಾಡಿ, ತಾನು ಮಾಲ್ ಮ್ಯಾನೇಜರ್, ಎಂ.ಡಿ. ಎಂದು ಹೇಳಿ ಪರಿಚಯ ಮಾಡಿಕೊಳ್ಳುತಿದ್ದ. ಬಳಿಕ ಯುವತಿಯರ ಹಿನ್ನೆಲೆ ತಿಳಿದು ಕೆಲಸ ಕೊಡಿಸುವ ಆಫರ್ ನೀಡಿ, ಹಂತ ಹಂತವಾಗಿ ಯುವತಿಯರನ್ನು ತನ್ನತ್ತ ಸೆಳೆದು ಕೆಲಸ ಕೊಡಿಸುವುದಾಗಿ ನಂಬಿಸುತಿದ್ದ.
ಪ್ರತಿಷ್ಠಿತ ಹೊಟೆಲ್ಗಳಲ್ಲಿ ಕೆಲಸದ ಸಂದರ್ಶನ ಇದೆ ಎಂದು ಕರೆಸಿಕೊಂಡು, ಹೋಟೆಲ್ ರೂಮ್ ಸೇರಿದ ಬಳಿಕ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ಮಾಡಿ, ಯುವತಿಯರ ಬಳಿ ಇದ್ದ ಮೊಬೈಲ್ ಹಣ ಒಡವೆಗಳನ್ನು ದೋಚಿದ ಬಳಿಕ, ತಾನು ಶಾಸಕನ ಮಗ. ಯಾರ ಬಳಿಯೂ ಈ ವಿಷಯವನ್ನು ಹೇಳಬಾರದು ಎಂದು ಹೆದರಿಸುತ್ತಿದ್ದಎಂದು ಪೊಲೀಸರು ತಿಳಿಸಿದ್ದಾರೆ.
Published On - 9:57 am, Fri, 22 November 19