ಕುಂಬಾರ್ ಪೇಟೆಯಲ್ಲಿ ಹವಾಲಾ ದಂಧೆ: ಖಾಕಿ ರೇಡ್ನಲ್ಲಿ ಮೂವರು ಅರೆಸ್ಟ್
ಬೆಂಗಳೂರು: ಕುಂಬಾರ್ ಪೇಟೆಯಲ್ಲಿ ಹವಾಲಾ ದಂಧೆ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಲಸೂರುಗೇಟ್ ಠಾಣೆ ಪೊಲೀಸರಿಂದ ಮೂವರ ಬಂಧನವಾಗಿದೆ. ವಿಪುಲ್, ಮೋಹನ್ ಲಾಲ್ ಹಾಗೂ ಗಣೇಶ್ ಬಂಧಿತ ಆರೋಪಿಗಳು. ಬಂಧಿತರಿಂದ 77 ಲಕ್ಷ ರೂಪಾಯಿ ನಗದನ್ನು ಸಹ ವಶಕ್ಕೆ ಪಡೆಯಲಾಗಿದೆ. ACP ನಜ್ಮಾ ಫಾರೂಕ್, PSI ಮಲ್ಲಿಕಾರ್ಜುನ್ ಮತ್ತು ಸಂತೋಷ್ ತಂಡದಿಂದ ಕುಂಬಾರ್ ಪೇಟೆ ಮುಖ್ಯರಸ್ತೆಯಲ್ಲಿರುವ ಅಂಗಡಿ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಯಿತು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Follow us on