ಅಶ್ಲೀಲವಾಗಿ ಎಡಿಟ್ ಮಾಡಿದ್ದ ಫೋಟೋ ತೋರಿಸಿ ಗಣ್ಯರಿಗೆ ಬ್ಲ್ಯಾಕ್ಮೇಲ್: ಕೋಳಿ ಫಾರ್ಮ್ ಓನರ್ ಅರೆಸ್ಟ್
ಬೆಂಗಳೂರು: ನಗರದ ಪ್ರತಿಷ್ಠಿತ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರೊಫೆಸರ್ಗಳ ಫೋಟೋ ಮಾರ್ಫಿಂಗ್ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ವಿಶ್ವಾಸ್ ಬಂಧಿತ ಆರೋಪಿ. ಆರೋಪಿ ವಿಶ್ವಾಸ್ ನಗರದ ಹಲವು ಗಣ್ಯರು ತಮ್ಮ ಫೇಸ್ಬುಕ್, WhatsApp, ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಅಪ್ಲೋಡ್ ಮಾಡ್ತಿದ್ದ ಫೋಟೋಗಳನ್ನು ಮಾರ್ಫಿಂಗ್ ಮಾಡುತ್ತಿದ್ದ. ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬಳಿಕ ಗಣ್ಯರಿಗೆ ಅವುಗಳನ್ನು ತೋರಿಸಿ ಹಣಕ್ಕಾಗಿ ಡಿಮ್ಯಾಂಡ್ ಇಡುತ್ತಿದ್ದನಂತೆ. ದುಡ್ಡು ಕೊಡದಿದ್ದರೆ ಎಡಿಟೆಡ್ ಫೋಟೋವನ್ನು ಸಾಮಾಜಿಕ […]

ಬೆಂಗಳೂರು: ನಗರದ ಪ್ರತಿಷ್ಠಿತ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರೊಫೆಸರ್ಗಳ ಫೋಟೋ ಮಾರ್ಫಿಂಗ್ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ವಿಶ್ವಾಸ್ ಬಂಧಿತ ಆರೋಪಿ.
ಆರೋಪಿ ವಿಶ್ವಾಸ್ ನಗರದ ಹಲವು ಗಣ್ಯರು ತಮ್ಮ ಫೇಸ್ಬುಕ್, WhatsApp, ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಅಪ್ಲೋಡ್ ಮಾಡ್ತಿದ್ದ ಫೋಟೋಗಳನ್ನು ಮಾರ್ಫಿಂಗ್ ಮಾಡುತ್ತಿದ್ದ. ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬಳಿಕ ಗಣ್ಯರಿಗೆ ಅವುಗಳನ್ನು ತೋರಿಸಿ ಹಣಕ್ಕಾಗಿ ಡಿಮ್ಯಾಂಡ್ ಇಡುತ್ತಿದ್ದನಂತೆ. ದುಡ್ಡು ಕೊಡದಿದ್ದರೆ ಎಡಿಟೆಡ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದಾಗಿ ಬೆದರಿಕೆ ಸಹ ಒಡ್ಡುತ್ತಿದ್ದನಂತೆ.
ಅಂದ ಹಾಗೆ, ಈ ಖದೀಮ ಡ್ಯಾಡಿ ಅಬೌವ್ 50 ಅನ್ನೋ WhatsApp ಗ್ರೂಪ್ಗೆ ಎಂಟ್ರಿ ಕೊಟ್ಟು ಅಲ್ಲಿಂದ ಫೋಟೋ ಎಗರಿಸ್ತಿದ್ದ ಎಂದು ಹೇಳಲಾಗಿದೆ. ಐವತ್ತು ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿದ್ದ WhatsApp ಗ್ರೂಪ್ನಲ್ಲಿ ಪ್ರತಿಷ್ಠಿತ ರಾಜಕಾರಣಿ, ಉದ್ಯಮಿಗಳು ಹಾಗೂ ಪ್ರೊಫೆಸರ್ಗಳಿಗೆ ಈ ರೀತಿ ಬ್ಲ್ಯಾಕ್ಮೇಲೆ ಮಾಡೋಕೆ ಮುಂದಾಗಿದ್ದ. ಅಂತೆಯೇ, ನಗರದ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಪ್ರೊಫೆಸರ್ ಒಬ್ಬರ ಪೋಟೋ ಮಾರ್ಫಿಂಗ್ ಮಾಡಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದನಂತೆ.
ವಿಶ್ವಾಸ್ ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ಆತ ಹಾಗೂ ಆತನ ಗ್ಯಾಂಗ್ ವಿರುದ್ಧ ಪ್ರೊಫೆಸರ್ ಒಬ್ಬರು ವೈಟ್ಫೀಲ್ಡ್ ವಿಭಾಗದ CEN ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಆರೋಪಿ ವಿಶ್ವಾಸ್ನನ್ನು ಬಂಧಿಸಿದ್ದಾರೆ. ಅರೋಪಿ ನಗರದ ಹೊರವಲಯದ ಚಿಕ್ಕಜಾಲದ ಸಮೀಪ ಕೋಳಿ ಫಾರಂ ಇಟ್ಟುಕೊಂಡಿದ್ದ ಎಂದು ಸಹ ತಿಳಿದುಬಂದಿದೆ. ಸದ್ಯ ಆರೋಪಿಗೆ ಖಾಕಿ ಪಡೆ ವಿಚಾರಣೆ ನಡೆಸುತ್ತಿದ್ದು ಆತನ ಸಹಚರರರ ಪತ್ತೆಗಾಗಿ ಬಲೆ ಬೀಸಿದ್ದಾರೆ.