ಸೊಸೆಗೆ ಮಾವನಿಂದ ಲೈಂಗಿಕ ಕಿರುಕುಳ: ಸುಪಾರಿ ಕೊಟ್ಟು ಕಥೆ ಮುಗಿಸಿದ ಬೀಗರು!

| Updated By: Rakesh Nayak Manchi

Updated on: Dec 04, 2022 | 10:08 PM

ಮಗ ಮೊಮ್ಮಗ ಕೊಡಲಿಲ್ಲ ಎಂದು ಸಿಟ್ಟಾದ ಪಾಪಿ ಮಾವ ರಾತ್ರಿ ವೇಳೆ ಸೊಸೆ ಬಳಿ ಅಶ್ಲೀಲವಾಗಿ ನಡೆದುಕೊಂಡ ಮಾವ ಬರ್ಬರವಾಗಿ ಕೊಲೆಯಾದ ಘಟನೆ ಹಾಸನದಲ್ಲಿ ನಡೆದಿದೆ.

ಸೊಸೆಗೆ ಮಾವನಿಂದ ಲೈಂಗಿಕ ಕಿರುಕುಳ: ಸುಪಾರಿ ಕೊಟ್ಟು ಕಥೆ ಮುಗಿಸಿದ ಬೀಗರು!
ಸೊಸೆಗೆ ಮಾವನಿಂದ ಲೈಂಗಿಕ ಕಿರುಕುಳ: ಸುಪಾರಿ ಕೊಟ್ಟು ಕಥೆ ಮುಗಿಸಿದ ಬೀಗರು!
Follow us on

ಹಾಸನ: ಅದು ಗಂಡ ಹೆಂಡತಿ ಮತ್ತು ಎರಡು ಮಕ್ಕಳ ಸುಂದರ ಸಂಸಾರ. ಮೂರು ವರ್ಷಗಳ ಹಿಂದೆ ಮಡದಿ ತೀರಿಕೊಂಡಾಗ ಹೆಣ್ಣು ದಿಕ್ಕಿಲ್ಲದ ಮನೆಯ ದೀಪ ಬೆಳಗಲಿ ಅಂತಾ ವಿಶೇಷ ಚೈತನ್ಯನಾಗಿದ್ದ ಮಗನಿಗೆ ಮಂಡ್ಯದಿಂದ ಹೆಣ್ಣುತಂದು ಮದುವೆ ಮಾಡಿದ್ದ ಅಪ್ಪ, ಸಂಸಾರ ಬೆಳಗುವ ಕನಸು ಗಂಡಿದ್ದ. ಆದರೆ ಎರಡು ವರ್ಷವಾದರೂ ಮಗ ಮೊಮ್ಮಗನ ಕೊಡಲಿಲ್ಲ ಎಂದು ಸಿಟ್ಟಾದ ಅಪ್ಪ ಮಗನ ಹೆಂಡತಿಗೆ ತಾನೇ ಮಗು ಮಾಡುವ ಹೀನ ಪ್ರಯತ್ನ ಶುರುಮಾಡಿದ್ದಾನೆ. ಮಗ ಸೊಸೆ ರಾತ್ರಿ ನಿದ್ರೆಗೆ ಜಾರುತ್ತಲೆ ಸೊಸೆ ಪಕ್ಕ ಹೋಗ್ತಿದ್ದ. ಈ ವೇಳೆ ಸೊಸೆ ಪ್ರತಿರೋದ ತೋರುತ್ತಿದ್ದಳು. ಆದರೂ ತನ್ನ ನೀಚ ಬುದ್ದಿ ಬಿಡದ ಪಾಪಿ ಮಾವನ ಬಗ್ಗೆ ತನ್ನ ಪೋಷಕರೊಂದಿಗೆ ಮಗಳು ಅಳಲು ತೋಡಿಕೊಂಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ನೊಂದ ಮಗಳ ಪೋಷಕರು, ಮಗಳಿಗೆ ಕಾಟ ಕೊಡಡುತ್ತಿದ್ದ ಬೀಗನನ್ನೇ ಮುಗಿಸಿ ಬಿಡಲು ಸಂಚು ರೂಪಿಸಿ ಐವತ್ತು ಸಾವಿರಕ್ಕೆ ಸುಪಾರಿ ಕೊಟ್ಟು ಕೊಂದು (Father-in-law Murder) ಮುಗಿಸಿ ಏನೂ ಅರಿಯದಂತೆ ನಾಟಕ ಶುರುಮಾಡಿದ್ದರು.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದಲ್ಲಿ ನಡೆದಿದ್ದ ಈ ಹತ್ಯೆ ಪ್ರಕರಣವನ್ನ ಪೊಲೀಸರು ಬೇದಿಸಿದ್ದು, ಸುಪಾರಿ ಕೊಟ್ಟು ಬೀಗನನ್ನೇ ಕೊಲೆಮಾಡಿಸಿದ ಆರೋಪದ ಮೇಲೆ ದಂಪತಿಗಳ ಸಮಪೇತ ನಾಲ್ವರನ್ನ ಪೊಲೀಸರು ಬಂದಿಸಿದ್ದಾರೆ. ನವೆಂಬರ್ 13ರಂದು ಇಲ್ಲಿನ ರಾಗಿಕಾವಲು ಗ್ರಾಮದ ಹೊಸಕೆರೆಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು, ಶವ ಹೊರತೆಗೆದು ನೋಡಿದಾ ದೊಡ್ಡಹಳ್ಳಿಯ ತಮ್ಮೇಗೌಡ(55) ಎಂದು ಗೊತ್ತಾಗಿದೆ.

ಇದನ್ನೂ ಓದಿ: ಬೆಂಗಳೂರು: ಹೌಸ್ ಕೀಪಿಂಗ್ ಹುಡುಗರ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯ

ತಲೆಗೆ ಚೀಲ ಹಾಗು ಬಟ್ಟೆ ಸುತ್ತಿ, ಹಗ್ಗ ಕಟ್ಟಿ ಮೃತದೇಹ ಎಸೆದಿದ್ದರಿಂದ ಮೇಲ್ನೋಟಕ್ಕೆ ಇದೊಂದು ಕೊಲೆ ಎಂಬುದು ಗೊತ್ತಾಗಿತ್ತು. ಮೃತದೇಹ ಹೊರ ತೆಗೆದಾಗ ತಲೆಗೆ ಹಲ್ಲೆ ನಡೆಸಿರುವುದು ಕೂಡ ಗೊತ್ತಾಗಿತ್ತು. ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಶುರುಮಾಡಿಕೊಂಡಿದ್ದರು. ತನಿಖೆ ಬೆನ್ನತ್ತಿದಾಗ ತಮಗೇನೂ ಗೊತ್ತೇ ಇಲ್ಲ ಎಂದು ನಾಟಕ ಮಾಡಿದ್ದ ತಮ್ಮೇಗೌಡನ ಬೀಗರಾದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಳೂಕಿನ ತುಳಸಿ ಗ್ರಾಮದ ತಾಯಮ್ಮ ಮೈಲಾರಿಯ ಮೇಲೆ ಕಣ್ಣಿಟ್ಟದ್ದ ಪೊಲೀಸರು ವಿಚಾರಣೆ ನಡೆಸಿದಾಗ ನಡೆದ ಹತ್ಯೆಯ ರಹಸ್ಯ ಬಯಲಾಗಿದೆ.

ಎರಡು ವರ್ಷಗಳ ಹಿಂದೆ ತಮ್ಮೇಗೌಡನ ಮಗ ಕುಮಾರನಿಗೆ ತಮ್ಮಮಗಳು ನಾಗರತ್ನಳನ್ನು ಕೊಟ್ಟು ವಿವಾಹ ಮಾಡಿದ್ದ ತಾಯಮ್ಮ ಮೈಲಾರಿ ದಂಪತಿ ಮಗಳ ಮನೆ ಕಟ್ಟಲು ನೆರವಾಗಿದ್ದರು. ಜಮೀನು ಅಭಿವೃದ್ಧಿಗೂ ಸಹಾಯ ಮಾಡಿದ್ದರು. ಆದರೆ ಮಗನಿಗೆ ಮಕ್ಕಳಾಗುತ್ತಿಲ್ಲ, ಅವನಿಗೆ ಮಗು ಮಾಡಲು ಆಗುತ್ತದೆಯೇ ಇಲ್ಲವೋ ಎಂದು ತಮ್ಮೇಗೌಡ ಚಿಂತಿತನಾಗಿದ್ದ. ಇದೇ ಚಿಂತೆಯಲ್ಲಿದ್ದ ತಮ್ಮೇಗೌಡ ಮಗನ ಮೇಲೆ ಸಿಟ್ಟಾಗಿ ನನ್ನ ಮಗನಿಂದ ಆಗದಿದ್ದರೆ ನನ್ನಿಂದಲೇ ನನ್ನ ವಂಶ ಬೆಳಗಬೇಕು ಎಂದು ಸೊಸೆ ಮೇಲೆಯೇ ಲೈಂಗಿಕ ಕಿರುಕುಳ ಕೊಡಲು ಶುರುಮಡಿದ್ದನಂತೆ.

ಕುಮಾರ್ ಹಾಗೂ ನಾಗರತ್ನ ರಾತ್ರಿ ಬೆಡ್​ರೂಮ್​ನಲ್ಲಿ ಮಲಗಿದ್ದಾಗ ತಾನೂ ಅವರ ಮಧ್ಯೆ ಹೋಗಿ ಮಲಗಿ ಇನ್ನಿಲ್ಲದ ಕಾಟ ಕೊಡುತ್ತಾ ನೀಚತನ ಮೆರೆದಿದ್ದಾನೆ. ನಡೆಯುತ್ತಿರುವ ಕೃತ್ಯದ ಬಗ್ಗೆ ಅಪ್ಪ ಅಮ್ಮನಿಗೆ ಹೇಳಿಕೊಂಡಿದ್ದ ನಾಗರತ್ನ ನಾನಿಲ್ಲಿ ಇರಲ್ಲ ಎಂದು ಹಠ ಹಿಡಿದಿದ್ದಾಳೆ. ಹೀಗಾಗಿ ತಮ್ಮೇಗೌಡನನ್ನು ಮುಗಿಸಲು ತಮ್ಮ ಪರಿಚಿತನಾಗಿದ್ದ ಯೋಗೇಶ್ ಎಂಬಾತನಿಗೆ ಐವತ್ತು ಸಾವಿರಕ್ಕೆ ಸುಪಾರಿ ಕೊಟ್ಟ ತಾಯಮ್ಮ ಹಾಗು ಮೈಲಾರಿ ಕೊಲೆಮಾಡಲು ಹೇಳಿದ್ದಾರೆ. ತನ್ನ ಸ್ನೇಹಿತ ಚಂದ್ರೆಗೌಡನ ಜೊತೆ ಸೇರಿದ ಯೋಗೆಶ್ ನವೆಂಬರ್ 12ರಂದು ಕೊಂದು ಕೆರೆಗೆ ಎಸೆದು ಹೋಗಿದ್ದಾನೆ. ಮೊಬೈಲ್ ಲೊಕೇಷನ್ ಆಧರಿಸಿ ತನಿಖೆ ಮಾಡಿದ ಪೊಲೀಸರು ಕೊಲೆ ಆರೋಪದಲ್ಲಿ ಐವರು ಆರೋಪಿಗಳನ್ನ ಬಂದಿಸಿದ್ದಾರೆ.

ಊರ ಹೊರಗೆ ಕಾಲುವೆ ಬಳಿ ಜಮೀನಿನಲ್ಲೇ ಮನೆ ಕಟ್ಟಿಕೊಂಡಿದ್ದ ತಮ್ಮೇಗೌಡ ಊರ ಜನರ ಮಾಲಿಗೆ ಏನೂ ಅರಿಯದ ಮುಗ್ದ ಜೀವಿಯಾಗಿದ್ದ, ತಾನಾಯಿತು ತನ್ನ ಕೆಲಸವಾಯ್ತು ಎಂದು ಜೀವನ ನಡೆಸುತ್ತಿದ್ದವನು. ಎಂದೂ ಯಾರೊಂದಿಗೂ ದುರ್ವರ್ತನೆ ತೋರದ ಒಳ್ಳೇ ಮನುಷ್ಯ. ಆದರೆ ಯಾವಾಗ ಮನೆಯೊಳಗೆ ತನ್ನ ಮಗ ವಿಶೇಷ ಚೇತನ ಅವನಿಂದ ಮಗು ಮಾಡಲು ಆಗುವುದಿಲ್ಲವೇನೋ ಎಂದು ಅನುಮಾನಗೊಂಡು ಮಾಡಬಾರದು ಮಾಡಲು ಮುಂದಾಗಿ ಕೊಲೆಯಾದ. ಊರಿನಲ್ಲಿ ಮಾವನ ಕುಚೇಷ್ಟೇ ಬಗ್ಗೆ ಏನೂ ಅರಿಯದ ಜನರು ನಡೆದಿರುವ ಕೊಲೆಯಿಂದ ಬೆಚ್ಚಿಬಿದ್ದಿದ್ದಾರೆ. ಅಮಾಯಕನನ್ನ ಕೊಂದರಲ್ಲಾ ಎಂದು ಕೊಲೆಗಡುಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಒಟ್ಟಾರೆ ವಂಶ ಬೆಳಗಿಸುತ್ತೇನೆ ಮಗನಿಂದ ಆಗದ್ದನ್ನ ನಾನೇ ಮಾಡಿ ಬಿಡುತ್ತೇನೆ ಎಂದು ಮಗಳ ವಯಸ್ಸಿನ ಸೊಸೆ ಮೇಲೆ ಮೃಗನಂತೆ ಎರಗುತ್ತಾ ನೀಚನಂತಾಡುತ್ತಿದ್ದ ಪಾಪಿಗೆ ಬುದ್ಧಿ ಹೇಳಿ ಬದಲಾಯಿಸಬಹುದಿತ್ತು. ಕಾನೂನು ಮೂಲಕ ಅವನಿಗೆ ಶಿಕ್ಷೆ ಕೊಡಿಸಬಹುದಿತ್ತು. ಆದರೆ ತಾವೇ ಶಿಕ್ಷೆ ಕೊಡಲು ಹೋಗಿ ಈ ದಂಪತಿ ಮಾಡಿದ ಯಡವಟ್ಟು ಒಂದು ಜೀವ ಬಲಿ ಪಡೆದರೆ ಐವರು ಜೈಲು ಸೇರುವಂತೆ ಮಾಡಿದೆ.

ವರದಿ: ಮಂಜುನಾಥ್ ಕೆ.ಬಿ, ಟಿವಿ9 ಹಾಸನ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:08 pm, Sun, 4 December 22