AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುದ್ಧಿ ಹೇಳಿದ ಹಿರಿಯರಿಗೆ ಚಾಕುವಿನಿಂದ ಮನಸ್ಸೊ ಇಚ್ಛೆ ಇರಿದ ಯುವಕರು; ಆಸ್ಪತ್ರೆಯಲ್ಲಿ ಗಾಯಾಳುಗಳ ನರಳಾಟ

ಶಾಂತಿ ಕಾನೂನು ಸುವ್ಯವಸ್ಥೆಗೆ ಹೆಸರುವಾಸಿಯಾದ ಗದಗ ಜಿಲ್ಲೆಯಲ್ಲಿ ಈಗ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಪದೇಪದೇ ಚಾಕುವಿನಿಂದ ಹಲ್ಲೆ‌ ಮಾಡುವ ಟ್ರೆಂಡ್ ಕ್ರಿಯೆಟ್ ಆಗುತ್ತಿದೆ.

ಬುದ್ಧಿ ಹೇಳಿದ ಹಿರಿಯರಿಗೆ ಚಾಕುವಿನಿಂದ ಮನಸ್ಸೊ ಇಚ್ಛೆ ಇರಿದ ಯುವಕರು; ಆಸ್ಪತ್ರೆಯಲ್ಲಿ ಗಾಯಾಳುಗಳ ನರಳಾಟ
ಬುದ್ಧಿ ಹೇಳಿದ ಹಿರಿಯರಿಗೆ ಚಾಕುವಿನಿಂದ ಮನಸ್ಸೊ ಇಚ್ಛೆ ಇರಿದ ಯುವಕರು; ಆಸ್ಪತ್ರೆಯಲ್ಲಿ ಗಾಯಾಳುಗಳ ನರಳಾಟ
Follow us
TV9 Web
| Updated By: Rakesh Nayak Manchi

Updated on:Dec 04, 2022 | 7:34 PM

ಗದಗ: ಶಾಂತಿ ಕಾನೂನು ಸುವ್ಯವಸ್ಥೆಗೆ ಹೆಸರುವಾಸಿಯಾದ ಮುದ್ರಣ ಕಾಶಿ ಜಿಲ್ಲೆಯಲ್ಲೀಗ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಪದೇ ಪದೇ ಚಾಕುವಿನಿಂದ ಹಲ್ಲೆ‌ (Knife attack) ಮಾಡುವ ಟ್ರೆಂಡ್ ಕ್ರಿಯೆಟ್ ಆಗುತ್ತಿದೆ. ಬುದ್ದಿವಾದ ಹೇಳಿದಕ್ಕೆ ಯುಕವರು ಚಾಕುವಿನಿಂದ ಮೂರು ಜನ ಹಿರಿಯರಿಗೆ ಮನಸ್ಸೊ ಇಚ್ಛೆ ಹಲ್ಲೆ ನಡೆಸಿದ್ದಾರೆ. ಕಣ್ಣು, ಮುಖ, ಎದೆ, ಹೊಟ್ಟೆ ಸೇರಿದಂತೆ, ಸಿಕ್ಕ ಸಿಕ್ಕಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಕೃತ್ಯದಿಂದ ಗಂಭೀರ ಗಾಯಗೊಂಡ ಅಮಾಯಕರು ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದಾರೆ. ಪ್ರಕರಣ ಸಂಬಂಧ ರೌಡಿ ಶೀಟರ್‌ ಅಲ್ವಿನ್ ಗ್ಯಾಬ್ರೀಲ್, ಹಾಗೂ ಸಾಧಿಕ್ ಅಕಬರಸಾಬ್, ಯೂನಸ್ ಮೋದಿನಸಾಬ್ ಎಂಬ ಆರೋಪಿಗಳನ್ನು ಗದಗ ಶಹರ ಪೊಲೀಸರು ಬಂಧಿಸಿದ್ದಾರೆ.

ಗದಗ ಬೆಟಗೇರಿ ಅವಳಿ ನಗರದಲ್ಲಿ ಚಾಕು, ಚೂರಿ ಸಂಸ್ಕೃತಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಹದಿಹರಿಯದ ಯುವಕರು ಚಾಕು ಇಟ್ಟುಕೊಂಡು ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸಣ್ಣ ಸಣ್ಣ ಕಾರಣಕ್ಕೆ ಚಾಕುವಿನಿಂದ ಹಲ್ಲೆ ಮಾಡುವ ಪ್ರವೃತ್ತಿ ಕಂಡು ಬರುತ್ತಿದೆ. ಶುಕ್ರವಾರ ರಾತ್ರಿ 12 ಗಂಟೆ ಸಮಯದಲ್ಲಿ ಮೂವರ ಗ್ಯಾಂಗ್ ಗಾಂಜಾ ಹೊಡೆದು, ಮದ್ಯ ಸೇವನೆ ಮಾಡಿ, ಮುಳಗುಂದ ನಾಕಾದಿಂದ, ಜೋಡ ಮಾರುತಿ ದೇವಸ್ಥಾನದಲ್ಲಿ ಗಲಾಟೆ ಮಾಡುತ್ತಾ ಹೋಗುತ್ತಿದ್ದರು. ಈ ವೇಳೆ ಇಲ್ಲಿ ಗಲಾಟೆ ಮಾಡಬೇಡಿ, ಮನೆಗೆ ಹೋಗಿ ಅಂತಾ ಮೂವರು ಬುದ್ಧಿವಾದ ಹೇಳಿದ್ದಾರೆ.

ಇದನ್ನೂ ಓದಿ: ನವಲಗುಂದ: ಬೈಕ್​ನಿಂದ ಇಳಿಯುವಾಗ ಕಾಲು ತಗುಲಿದ್ದಕ್ಕೆ ಬರ್ಬರ ಕೊಲೆ; ಆರೋಪಿಗಳು ಅಂದರ್​

ಇಷ್ಟಕ್ಕೆ ಕೋಪಗೊಂಡ ಆರೋಪಿಗಳು ವಸಂತ ಬಾಕಳೆ, ಗೋಪಾಲ ಖೋಡೆ, ಮಾಧುಸಾ ಬದಿ ಎಂಬುವರ ಮೇಲೆ ತಮ್ಮ ಬಳಿ ಇದ್ದ ಹರಿತವಾದ ಚಾಕುವಿನಿಂದ ಹಲ್ಲೆ‌ ಮಾಡಿದ್ದಾರೆ. ಮನಸ್ಸೋ ಇಚ್ಚೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಗೆ ಹೋಗಿ ಎಂದು ಬುದ್ಧಿವಾದ ಹೇಳಿದಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂದು ಗಾಯಾಗಳು ಗೋಪಾಲ ಅವರು ಹೇಳಿಕೊಂಡಿದ್ದಾರೆ.

ರೌಡಿ ಶೀಟರ್‌ ಅಲ್ವಿನ್ ಗ್ಯಾಬ್ರೀಲ್ ಹಾಗೂ ಸಾಧಿಕ್ ಅಕಬರಸಾಬ್, ಯೂನಸ್ ಮೋದಿನಸಾಬ್ ಮೂವರು ಸೇರಿಕೊಂಡು ಮುಳಗುಂದ ನಾಕಾ ಬಳಿಯ ಪಾನ್ ಶಾಪ್ ಅಂಗಡಿ ಬಳಿ ಗಲಾಟೆ ಮಾಡಿದ್ದಾರೆ. ನಂತರ ತ್ರಿಕೂಟೇಶ್ವರ ದೇವಸ್ಥಾನದ ರಸ್ತೆಯಿಂದ ಜೋಡ ಮಾರುತಿ ದೇವಸ್ಥಾನ ರಸ್ತೆ ಮೂಲಕ ಗಲಾಟೆ ಮಾಡುತ್ತಾ ಹೋಗಿದ್ದಾರೆ. ‌ಈ ವೇಳೆ ಬುದ್ಧಿವಾದ ಹೇಳಿದ ಮೂವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಹೀಗಾಗಿ ಅವಳಿ ನಗರದ ಜನ್ರ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ.

ಇದನ್ನೂ ಓದಿ: ಆನೇಕಲ್​ನಲ್ಲಿ ಭೀಕರ ಕೊಲೆ: ವೃದ್ಧೆಯನ್ನು ಹತ್ಯೆಗೈದು ಬೀರುವಿನಲ್ಲಿಟ್ಟು ಪರಾರಿಯಾದ ಮುಸ್ಲಿಂ ಮಹಿಳೆ

ಗದಗ ಶಹರ ಪೊಲೀಸರು ರಾತ್ರಿಯಲ್ಲಾ ಕಾರ್ಯಾಚರಣೆ ನಡೆಸಿ ರೌಡಿ ಶೀಟರ್‌ ಅಲ್ವಿನ್ ಗ್ಯಾಬ್ರೀಲ್ ಹಾಗೂ ಸಾಧಿಕ್ ಅಕಬರಸಾಬ್, ಯೂನಸ್ ಮೋದಿನಸಾಬ್ ಎಂಬವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಇವರ ಬಂಧನಕ್ಕೂ ಶೋಧ ನಡೆಸುತ್ತಿದ್ದಾರೆ.

ಕ್ಷುಲ್ಲಕ ಕಾರಕ್ಕೆ ಹೀಗೆ ಚಾಕುವಿನಿಂದ ಹಲ್ಲೆ ಮಾಡಿರುವುದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.‌ ಇಂತಹ ಹದಿಹರೆಯದ ವಯಸ್ಸಿನ ಯುವಕರ ಕೈಯಲ್ಲಿ ಚಾಕು ಹೇಗೆ ಬರುತ್ತಿವೆ ಎನ್ನುವ ಪ್ರಶ್ನೇ ಕಾಡಲು ಆರಂಭವಾಗಿದೆ. ಇನ್ನಾದರೂ ಪೊಲೀಸರು ಇಂತಹ ಕೃತ್ಯಗಳ ಮೇಲೆ ನಿಗಾವಹಿಸಬೇಕು ಎಂದು ಗಾಯಳು ಸಂಬಂಧಿ ಚಾಂದೂ ಒತ್ತಾಯ ಮಾಡಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಇತ್ತಿಚೆಗೆ ಗಲಾಟೆಯಲ್ಲಿ ಓರ್ವನಿಗೆ ಚಾಕು ಇರಿದು ಕೊಲೆ ಮಾಡಲಾಗಿತ್ತು. ಸಣ್ಣ ಪುಟ್ಟ ಜಗಳಕ್ಕೂ ಚಾಕುಗಳಿಂದ ಹಲ್ಲೆ ಮಾಡುವ ಪ್ರವೃತ್ತಿ ಹೆಚ್ಚಳವಾಗಿದೆ. ಇನಾದರೂ ಪೊಲೀಸರು ಚಾಕು ಸಂಸ್ಕೃತಿಗೆ ಬ್ರೇಕ್ ಹಾಕಬೇಕಾಗಿದೆ. ಆಗ ಮಾತ್ರ ಅವಳಿ ನಗರದ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:34 pm, Sun, 4 December 22

ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್