ಆನೇಕಲ್​ನಲ್ಲಿ ಭೀಕರ ಕೊಲೆ: ವೃದ್ಧೆಯನ್ನು ಹತ್ಯೆಗೈದು ಬೀರುವಿನಲ್ಲಿಟ್ಟು ಪರಾರಿಯಾದ ಮುಸ್ಲಿಂ ಮಹಿಳೆ

ವೃದ್ಧೆಯನ್ನು ಕೊಂದು ಶವವನ್ನು ಬೀರುವಿನಲ್ಲಿಟ್ಟು ಪಾತಕಿ ಪರಾರಿಯಾಗಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ನಡೆದಿದೆ.

ಆನೇಕಲ್​ನಲ್ಲಿ ಭೀಕರ ಕೊಲೆ: ವೃದ್ಧೆಯನ್ನು ಹತ್ಯೆಗೈದು ಬೀರುವಿನಲ್ಲಿಟ್ಟು ಪರಾರಿಯಾದ ಮುಸ್ಲಿಂ ಮಹಿಳೆ
ಕೊಲೆಯಾದ ವೃದ್ಧೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 04, 2022 | 5:26 PM

ಆನೇಕಲ್: ದೆಹಲಿಯ (Delhi) ಶದ್ಧಾ (Shraddha) ಕೊಲೆ ಪ್ರಕರಣಕ್ಕೆ ಹೋಲುವಂತೆ ವೃದ್ಧೆಯನ್ನು (Old Woman) ಕೊಂದು ಶವವನ್ನು ಬೀರುವಿನಲ್ಲಿಟ್ಟು ಪಾತಕಿ ಪರಾರಿಯಾಗಿರುವ ಘಟನೆ ಆನೇಕಲ್ (Anelkal) ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ನಡೆದಿದೆ. ಪಾರ್ವತಮ್ಮ (65) ಕೊಲೆಯಾದ ಅಜ್ಜಿ. ಗ್ರಾಮದಲ್ಲಿ 4 ಅಂತಸ್ತಿನ ಮನೆ ಇದ್ದು, 4ನೇ ಮಹಡಿಯಲ್ಲಿ ಮುಸ್ಲಿಂ ಮಹಿಳೆ ಬಾಡಿಗೆಗೆ ಇದ್ದಳು. 3ನೇ ಮಹಡಿಯಲ್ಲಿ ಪಾರ್ವತಮ್ಮ ಕುಟುಂಸ್ಥರೊಂದಿಗೆ ವಾಸವಿದ್ದಳು.

3 ದಿನಗಳ ಹಿಂದೆ ಮುಸ್ಲಿಂ ಮಹಿಳೆ ಅಜ್ಜಿಯನ್ನು ಮನೆಗೆ ಕರೆದಿದ್ದಳು. ಅಂದಿನಿಂದ ಅಜ್ಜಿ ಮತ್ತು ಮುಸ್ಲಿಂ ಮಹಿಳೆ ನಾಪತ್ತೆಯಾಗಿದ್ದರು. ನಂತರ ಪಾರ್ವತಮ್ಮ ಕುಟುಂಬಸ್ಥರು ಪಾರ್ವತಮ್ಮಳನ್ನು ಹುಡುಕಲು ಶುರು ಮಾಡಿದ್ದರು. ಆದರೆ ಪಾರ್ವತಮ್ಮ ಮಾತ್ರ ಸಿಕ್ಕಿರಲಿಲ್ಲ. ಇನ್ನೂ ಇತ್ತ ಮುಸ್ಲಿಂ ಮಹಿಳೆ ಕೂಡ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರು ಅನುಮಾನಗೊಂಡಿದ್ದರು.

ನಂತರ ಪಾರ್ವತಮ್ಮ ಕುಟುಂಬಸ್ಥರು ಮುಸ್ಲಿಂ ಮಹಿಳೆಯ ಮನೆ ಬೀಗ ತೆಗೆಸಿದ್ದರು. ಈ ವೇಳೆ ಮಹಿಳೆಯ ಮನೆಯ ಬೀರುವಿನಲ್ಲಿದ್ದ ವೃದ್ಧೆ ಮೃತದೇಹ ಪತ್ತೆಯಾಗಿದೆ. ಮಹಿಳೆ ವೃದ್ಧೆಯನ್ನು ಕೊಂದು ಶವ ಪ್ಯಾಕ್​ ಮಾಡಿ ಬೀರುವಿನಲ್ಲಿಟ್ಟು ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಪಾರ್ವತಮ್ಮ ಮೃತದೇಹ ಕಳೆದ 3 ದಿನಗಳಿಂದ ಬೀರುವಿನಲ್ಲೇ ಇದೆ. ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಸ್ಲಿಂ ಮಹಿಳೆ ಪಾಯಲ್ ಖಾನ್  ಕೊಲೆ ಮಾಡಿರುವ ಶಂಕೆ

ಪಾಯಲ್ ಖಾನ್ ಎಂಬ ಮಹಿಳೆ ಆಗಾಗ ನನ್ನ ತಾಯಿಯನ್ನು ಕರೀತಾ ಇದ್ದರು. ನಮ್ಮ ತಾಯಿ ಎರಡು ಮೂರು ದಿನ ಅವರ ಮನೆಗೆ ಹೋಗಿದ್ದರು. ಮೂರು ದಿನದಿಂದ ಆ ಮಹಿಳೆ ಕೂಡ ಕಾಣೆ ಆಗಿದ್ದರು. ಹೀಗಾಗಿ ಅವರ ಮೇಲೆ ಶಂಕೆ ಇದೆ ಅಂತ ವೃದ್ದೆಯ ಮಗ ಕೊಟ್ಟ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Sun, 4 December 22

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು