ಕೋಟೆನಾಡಿನಲ್ಲಿ ಕೈಚಳಕ ತೋರಿದ್ದ ಚೋರರು ಅರೆಸ್ಟ್
ಚಿತ್ರದುರ್ಗ: ಅ ಗ್ಯಾಂಗ್ ಕೋಟೆನಾಡಿನ ಜನರ ನೆಮ್ಮದಿ ಕೆಡಿಸಿತ್ತು. ಪೊಲೀಸ್ರಂತೂ ಅವರಿಗಾಗಿ ಇನ್ನಿಲ್ಲದ ತಲೆ ಕೆಡಿಸಿಕೊಂಡಿದ್ರು. ಕೊನೆಗೂ ಆ ಗ್ಯಾಂಗ್ ಪೊಲೀಸರ ಕೈಗೆ ಲಾಕ್ ಆಗಿದೆ. ಕಣ್ಣು ಕುಕ್ಕೋ ಚಿನ್ನಾಭರಣ.. ಜೋಡಿಸಿಟ್ಟಿರೋ ಬೆಳ್ಳಿ ವಸ್ತುಗಳು. ಅಂದಹಾಗೇ ಇದೆಲ್ಲ, ಪ್ರದರ್ಶನಕ್ಕಿಟ್ಟಿರೋ ವಸ್ತುಗಳಲ್ಲ. ಖದೀಮರಿಂದ ಜಪ್ತಿ ಮಾಡಿರೋ ಮಾಲು. ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಈ ವಸ್ತುಗಳನ್ನ ಕದ್ದಿದ್ದಾರೆ. ಕಳ್ಳರನ್ನ ಖೆಡ್ಡಾಗೆ ಕೆಡವಿದ ಪೊಲೀಸರು: ಎಸ್.. ನೋಡಿ.. ಇವರೋ, ಇವರ ಮುಖವೋ.. ಒಣಗಿದ ಕಡ್ಡಿಯಂತಿರೋ ಇವ್ರೆಲ್ಲ ಮಾಮೂಲಿ ಆಸಾಮಿಗಳಲ್ಲ. ಚಿತ್ರದುರ್ಗ ಜಿಲ್ಲೆ […]
ಚಿತ್ರದುರ್ಗ: ಅ ಗ್ಯಾಂಗ್ ಕೋಟೆನಾಡಿನ ಜನರ ನೆಮ್ಮದಿ ಕೆಡಿಸಿತ್ತು. ಪೊಲೀಸ್ರಂತೂ ಅವರಿಗಾಗಿ ಇನ್ನಿಲ್ಲದ ತಲೆ ಕೆಡಿಸಿಕೊಂಡಿದ್ರು. ಕೊನೆಗೂ ಆ ಗ್ಯಾಂಗ್ ಪೊಲೀಸರ ಕೈಗೆ ಲಾಕ್ ಆಗಿದೆ. ಕಣ್ಣು ಕುಕ್ಕೋ ಚಿನ್ನಾಭರಣ.. ಜೋಡಿಸಿಟ್ಟಿರೋ ಬೆಳ್ಳಿ ವಸ್ತುಗಳು. ಅಂದಹಾಗೇ ಇದೆಲ್ಲ, ಪ್ರದರ್ಶನಕ್ಕಿಟ್ಟಿರೋ ವಸ್ತುಗಳಲ್ಲ. ಖದೀಮರಿಂದ ಜಪ್ತಿ ಮಾಡಿರೋ ಮಾಲು. ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಈ ವಸ್ತುಗಳನ್ನ ಕದ್ದಿದ್ದಾರೆ.
ಕಳ್ಳರನ್ನ ಖೆಡ್ಡಾಗೆ ಕೆಡವಿದ ಪೊಲೀಸರು: ಎಸ್.. ನೋಡಿ.. ಇವರೋ, ಇವರ ಮುಖವೋ.. ಒಣಗಿದ ಕಡ್ಡಿಯಂತಿರೋ ಇವ್ರೆಲ್ಲ ಮಾಮೂಲಿ ಆಸಾಮಿಗಳಲ್ಲ. ಚಿತ್ರದುರ್ಗ ಜಿಲ್ಲೆ ಜನರನ್ನ ಇನ್ನಿಲ್ಲದಂತೆ ಕಾಡಿದ್ದ ಮಿಕಗಳು. ಕಳೆದೊಂದು ತಿಂಗಳಿಂದ ಜಿಲ್ಲೆಯ ಹಲವೆಡೆ ಕೈಚಳಕ ತೋರಿಸಿದ್ದ ಈ ಖದೀಮರನ್ನ, ಹಿರಿಯೂರು ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.
ಬಾಗೇಪಲ್ಲಿಯ ಉಮಾಶಂಕರರೆಡ್ಡಿ, ರಮೇಶ ಹಾಗೂ ಪಾವಗಡದ ಜಗನ್ನಾಥ ಜಿಲ್ಲೆಯ ಅನೇಕ ಕಡೆ ಕಳ್ಳತನ ಎಸಗಿದ್ರು. ಇದೀಗ, ಮೂವರನ್ನ ಪೊಲೀಸರು ಬಂಧಿಸಿದ್ದು 10 ಲಕ್ಷ ಮೌಲ್ಯದ 1ಕೆಜಿ ಬೆಳ್ಳಿ, 230 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಇನ್ನು ಪೊಲೀಸರು ಕಿರಾತಕರ ಬೇಟೆ ಆಡಿರುವ ಸುದ್ದಿ ತಿಳಿಯುತ್ತಿದ್ದಂತೆ ದುರ್ಗದ ಜನ ಫುಲ್ ಖುಷ್ ಆಗಿದ್ದಾರೆ. ಆತಂಕ ಹುಟ್ಟಿಸಿದ್ದ ಕಿರಾತಕರ ಹೆಡೆಮುರಿ ಕಟ್ಟಿದ ಪೊಲೀಸರಿಗೆ ಭೇಷ್ ಅಂದಿದ್ದಾರೆ. ಒಟ್ನಲ್ಲಿ, ಖತರ್ನಾಕ್ ಕಳ್ಳರ ಬಂಧನದೊಂದಿಗೆ ಚಿತ್ರದುರ್ಗದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ, ಕಿರಾತಕರನ್ನ ಪೊಲೀಸರು ವಿಚಾರಣೆ ನಡೆಸ್ತಿದ್ದು, ಪ್ರಕರಣಗಳನ್ನ ಕೆದಕುತ್ತಿದ್ದಾರೆ.