ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನಾಭರಣ ದರೋಡೆ ಪ್ರಕರಣ ಹಿನ್ನೆಲೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ನಂದನ್, ಜಿಯಾವುಲ್ಲಾ ಖಾನ್, ಶರತ್ ಬಂಧಿತ ಆರೋಪಿಗಳು. ಬಾಡಿಗೆ ಮನೆ ನೋಡುವ ನೆಪದಲ್ಲಿ ಬಂದಿದ್ದ ದರೋಡೆಕೋರರು, ಬಾಡಿಗೆ ಮನೆ ಗಲೀಜಾಗಿದೆ ನೋಡಿ ಎಂದಿದ್ದರು. ಈ ವೇಳೆ ಮನೆಯೊಳಗೆ ಮಾಲಕಿ ಹೋದಾಗ ಕೈಕಾಲು ಕಟ್ಟಿದ್ರು. ಕೈಕಾಲು ಕಟ್ಟಿ 48 ಗ್ರಾಂ ಮಾಂಗಲ್ಯ ಸರ, ಓಲೆ ಕಿತ್ತು ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿದ್ದು, 1.5 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್, ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈಜು ಬಾರದೆ ಕರೆಯಲ್ಲಿ ಮುಳುಗಿ ವ್ಯಕ್ತಿ ಸಾವು
ಕೊಪ್ಪಳ: ಕೆರೆಯಲ್ಲಿ ಈಜಲು ಹೋಗಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ತಾಲೂಕಿನ ರಘುನಾಥನಹಳ್ಳಿ ಬಳಿ ನಡೆದಿದೆ. ಪಕ್ಕೀರಪ್ಪ ನಿಟ್ಟಾಲಿ (30) ಮೃತ ವ್ಯಕ್ತಿ. ರಘುನಾಥನ ಹಳ್ಳಿಯ ಕೆರೆಯಲ್ಲಿ ಸ್ನಾನಕ್ಜೆ ಹೋಗಿದ್ದ ಪಕ್ಕೀರಪ್ಪ, ಈಜು ಬಾರದೆ ಕೆರೆಯಲ್ಲಿ ಮುಳುಗಿ ದುರ್ಮರಣ ಹೊಂದಿದ್ದಾನೆ. ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಆಧುನಿಕ ಶಕುಂತಲಾ ಕಥನ: ದಮನಕ್ಕೊಳಗಾದ ಹೆಣ್ಣುಮಕ್ಕಳಿಗೆ ನನ್ನ ಜೀವನ ಸ್ಫೂರ್ತಿಯಾಗಲಿ
ಎರಡು ಬೈಕ್ಗಳ ನಡುವೆ ಅಪಘಾತ: ಓರ್ವ ವ್ಯಕ್ತಿ ಸಾವು
ಚಿಕ್ಕಬಳ್ಳಾಪುರ: ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿದ್ದು, ರೈತ ಮುನಿವೆಂಕಟರಾಯಪ್ಪ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ದೇವಸ್ಥಾನ ಹೊಸಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಯೂ ಟರ್ನ್ ತೆಗೆದುಕೊಳ್ಳುವಾಗ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಕಾಲುವೆಗೆ ಬಿದ್ದು ಬಾಲಕ ಸಾವು:
ಕಾರವಾರ: ಮನೆಯ ಹಿಂಬದಿಯ ಕಾಲುವೆಗೆ ಬಿದ್ದು ಬಾಲಕ ಸಾವನ್ನಪ್ಪಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪಡುಶಿರಾಲಿಯಲ್ಲಿ ನಡೆದಿದೆ. ವಿಜೇತ ಗಣಪತಿ ನಾಯಕ್ (4) ಸಾವನ್ನಪ್ಪಿದ ಬಾಲಕ. ನಿನ್ನೆ ತಮ್ಮ ಮನೆ ಹಿಂಬದಿಯ ಹಿತ್ತಲದಲ್ಲಿ ಆಟವಾಡುತ್ತಿದ್ದಾಗ ಕಾಲುವೆಗೆ ಬಾಲಕ ಬಿದ್ದಿದ್ದಾನೆ. ಕಾಲುವೆಗೆ ಬಿದ್ದು ತೀವ್ರ ನೀರು ಕುಡಿದು ಅಸ್ತವ್ಯಸ್ತತವಾಗಿದ್ದ ಬಾಲಕ, ಶಿರಾಲಿ ಪ್ರಾಥಮಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.