Hair Fall: ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ?
Hair Fall:ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಕೂದಲು( Hair) ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪೌಷ್ಟಿಕಾಂಶದ ಕೊರತೆ, ಮಧುಮೇಹ, ವಿಟಮಿನ್ ಡಿ ಕೊರತೆ, ಅನುವಂಶೀಯ ಹೀಗೆ ಕೂದಲು ಉದುರುವಿಕೆಗೆ ಸಾಕಷ್ಟು ಕಾರಣಗಳಿರಬಹುದು.
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಕೂದಲು( Hair) ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪೌಷ್ಟಿಕಾಂಶದ ಕೊರತೆ, ಮಧುಮೇಹ, ವಿಟಮಿನ್ ಡಿ ಕೊರತೆ, ಅನುವಂಶೀಯ ಹೀಗೆ ಕೂದಲು ಉದುರುವಿಕೆಗೆ ಸಾಕಷ್ಟು ಕಾರಣಗಳಿರಬಹುದು.
ಕೂದಲು ಉದುರುವಿಕೆಗೆ ಕಾರಣ ಪಿತ್ತ ಹಾಗೂ ಕಫ ಆಯುರ್ವೇದದಲ್ಲಿ ಕೂದಲು ಉದುರುವಿಕೆಗೆ ಪಿತ್ತ ಹಾಗೂ ಕಫ ಕಾರಣ ಎನ್ನಲಾಗುತ್ತದೆ. ರಾತ್ರಿ ಮಲಗುವ ಮುನ್ನ 8-10 ಕಪ್ಪು ದ್ರಾಕ್ಷಿ ಯನ್ನು ನೀರಿನಲ್ಲಿ ನೆನೆ ಹಾಕಬೇಕು . ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೆನೆ ಹಾಕಿದ ದ್ರಾಕ್ಷಿಯನ್ನು ತಿನ್ನಬೇಕು . ಇದನ್ನು ಆಗಾಗ ಮಾಡುವುದರಿಂದ ಪಿತ್ತ ನಿಯಂತ್ರಣದಲ್ಲಿಇರಲು ಸಹಾಯವಾಗಿ ಕೂದಲು ಉದುರುವಿಕೆ ಕಡಿಮೆ ಮಾಡಲು ನೆರವಾಗುತ್ತೆ .
ಸಿಲ್ಕ್ ದಿಂಬಿನ ಕವರ್ ಬಳಸಿ ಸಿಲ್ಕ್ ದಿಂಬಿನ ಕವರ್ ಬಳಸುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ.
ರಾತ್ರಿ ಮಲಗುವಾಗ ಕೂದಲನ್ನು ಕಟ್ಟಬಾರದು ರಾತ್ರಿ ವೇಳೆ ಮಲಗುವ ಸಂದರ್ಭದಲ್ಲಿ ಕೂದಲನ್ನು ಟೈಟ್ ಆಗಿ ಕಟ್ಟಬಾರದು .ಈ ರೀತಿ ಕಟ್ಟುವುದು ಅಥವಾ ಜಡೆ ಹಾಕುವುದರಿಂದ ಕೂದಲು ಎಳೆದಂತಾಗಿ ತನ್ನ ಬೇರಿನಿಂದ ಆಚೆ ಬರುವ ಸಾಧ್ಯತೆ ಇರುತ್ತದೆ . ಇದು ಕೂಡ ಕೂದಲ ಉದುರುವಿಕೆಗೆ ಕಾರಣವಾಗುತ್ತೆ . ಹಾಗಾಗಿ ಮಲಗುವಾಗ ಆದಷ್ಟು ಟೈಟ್ ಆಗಿ ಕಟ್ಟಿಕೊಂಡು ಮಲಗುವುದನ್ನು ನಿಯಂತ್ರಿಸಬೇಕು .
ಹೆಚ್ಚಾಗಿ ನೀರನ್ನು ಕುಡಿಯುವುದು ಪ್ರತಿ ದಿನ 3-4 ಲೀಟರ್ ನೀರನ್ನು ಕುಡಿಯಲೇಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು . ಈ ರೀತಿ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿಡುವುದು ಕೂದಲಿನ ಆರೋಗ್ಯಕ್ಕೆ ಬಹಳ ಮುಖ್ಯ . ಇದರಿಂದ ಕೂದಲು ಹೆಚ್ಚಾಗಿ ಬೆಳೆಯಲು ಸಹಾಯವಾಗುತ್ತೆ . ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ದೇಹದಲ್ಲಿ ಹೈಡ್ರೇಶನ್ ಬಹಳ ಮುಖ್ಯ .
ಬಾಚಣಿಕೆಯನ್ನು ಆಗಾಗ ತೊಳೆಯುವುದು ನಾವು ಬಳಸುವ ಬಾಚಣಿಕೆಯನ್ನು ಆಗಾಗ ತೊಳೆಯುವುದು ಉತ್ತಮ . ಬಾಚಣಿಗೆಯನ್ನು ಆಗಾಗ ಬಿಸಿ ನೀರು ಹಾಗು ಸೋಪಿನಿಂದ ಚೆನ್ನಾಗಿ ತೊಳೆಯುವುದರಿಂದ ಬಾಚಣಿಗೆಯಲ್ಲಿ ಉಳಿದಿರುವ ಕೆಟ್ಟ ಅಂಶ ಕೂದಲಿಗೆ ಸೇರದಂತೆ ನೋಡಿಕೊಳ್ಳುತ್ತೆ .
ಒಬ್ಬರ ಬಾಚಣಿಗೆಯನ್ನು ಇನ್ನೊಬ್ಬರು ಉಪಯೋಗಿಸಬಾರದು . ಇದನ್ನು ಆಯುರ್ವೇದ ತಜ್ಞರ ಬಳಿ ಸಮಾಲೋಚನೆ ನಡೆಸಿ ನಂತರ ತಮ್ಮ ತಮ್ಮ ಕೂದಲಿಗೆ ಅನುಗುಣವಾಗಿ ಸೂಕ್ತವಾದ ಎಣ್ಣೆ ಅಥವಾ ಶಾಂಪೂವನ್ನು ಬಳಸಿ ಕೂದಲ ಉದುರುವಿಕೆ ಸಮಸ್ಯೆಯನ್ನು ದೂರ ಇಡುವುದಲ್ಲದೆ ಕೂದಲ ಬೆಳವಣಿಗೆಗೂ ಸಹ ಸಹಾಯ ಮಾಡಬಹುದು
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ