ಕಳ್ಳತನಕ್ಕೆ ಹೋದಾಗ ಎಚ್ಚರಗೊಂಡ ಮನೆಯವರು, ಇಬ್ಬರ ಹತ್ಯೆ ಮಾಡಿದ ಕಳ್ಳ
ಮಂಗಳೂರು: ಯುವಕನೊಬ್ಬ ಕುರಿಯ ಗ್ರಾಮದಲ್ಲಿ ಮೊನ್ನೆ ತಡರಾತ್ರಿ ಮನೆಗೆ ನುಗ್ಗಿ, ಇಬ್ಬರ ಭೀಕರ ಹತ್ಯೆ ಬಳಿಕ ಒಂದು ಕೊಲೆ ಯತ್ನ ಮಾಡಿರುವ ಪ್ರಕರಣ ನಡೆದಿದೆ. ಆರೋಪಿ ಕರೀಂ ಖಾನ್(29) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಶೇಕ್ ಕೊಗ್ಗು ಸಾಹೇಬ್ (70) ಮತ್ತು ಶಾಮಿಯಾ ಭಾನು (16) ಹತ್ಯೆಗೀಡಾದವರು. ಖತೀಜಾಬಿ ಎಂಬ ಮಹಿಳೆ ಮೇಲೆ ಗಂಭೀರವಾಗಿ ಹಲ್ಲೆ ನಡೆದಿದೆ. ಗೋಡೆ ಮತ್ತು ಹೆಂಚಿನ ನಡುವೆ ಮನೆ ಒಳಗೆ ನುಗ್ಗಿ ಕಳ್ಳತನ ಮಾಡಲು ಹೋದಾಗ ಮನೆಯವರು ಎಚ್ಚರಗೊಂಡ ಹಿನ್ನೆಲೆ, ಆರೋಪಿ ಕರೀಂ […]
ಮಂಗಳೂರು: ಯುವಕನೊಬ್ಬ ಕುರಿಯ ಗ್ರಾಮದಲ್ಲಿ ಮೊನ್ನೆ ತಡರಾತ್ರಿ ಮನೆಗೆ ನುಗ್ಗಿ, ಇಬ್ಬರ ಭೀಕರ ಹತ್ಯೆ ಬಳಿಕ ಒಂದು ಕೊಲೆ ಯತ್ನ ಮಾಡಿರುವ ಪ್ರಕರಣ ನಡೆದಿದೆ. ಆರೋಪಿ ಕರೀಂ ಖಾನ್(29) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಶೇಕ್ ಕೊಗ್ಗು ಸಾಹೇಬ್ (70) ಮತ್ತು ಶಾಮಿಯಾ ಭಾನು (16) ಹತ್ಯೆಗೀಡಾದವರು. ಖತೀಜಾಬಿ ಎಂಬ ಮಹಿಳೆ ಮೇಲೆ ಗಂಭೀರವಾಗಿ ಹಲ್ಲೆ ನಡೆದಿದೆ.
ಗೋಡೆ ಮತ್ತು ಹೆಂಚಿನ ನಡುವೆ ಮನೆ ಒಳಗೆ ನುಗ್ಗಿ ಕಳ್ಳತನ ಮಾಡಲು ಹೋದಾಗ ಮನೆಯವರು ಎಚ್ಚರಗೊಂಡ ಹಿನ್ನೆಲೆ, ಆರೋಪಿ ಕರೀಂ ಇಬ್ಬರನ್ನು ಕೊಲೆಗೈದು, ಮಹಿಳೆಯ ಕೊಲೆಗೆ ಯತ್ನಿಸಿದ್ದಾನೆ. ಎಲ್ಲಾ ಪರಿಚಯಸ್ಥರೇ ಆಗಿದ್ರಿಂದ ಸಿಕ್ಕಿಹಾಕಿಕೊಳ್ಳುವ ಭಯದಿಂದ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಬಂಧಿತ ಕರೀಂ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ. ಆರೋಪಿ ಕರೀಂ ಹತ್ಯೆಗಳ ಮಾಡಿದ ಬಳಿಕವೂ ಮನೆಯಲ್ಲಿದ್ದ 30 ಗ್ರಾಂ ಚಿನ್ನ, 6000 ನಗದು ಕದ್ದು ಪರಾರಿಯಾಗಿದ್ದ.
ಹಣಕಾಸಿನ ಮನಸ್ತಾಪ, ದ್ವೇಷ: ಶೇಕ್ ಜೊತೆ ಈ ಹಿಂದೆ ಹಣಕಾಸಿನ ವಿಚಾರದಲ್ಲೂ ಮನಸ್ತಾಪವುಂಟಾಗಿತ್ತು. ಈ ದ್ವೇಷದಿಂದ ಕೂಡ ಬರ್ಬರ ಹತ್ಯಾಕಾಂಡ ನಡೆದಿರುವ ಸಾಧ್ಯತೆಯಿದೆ. ಕದ್ದುಕೊಂಡು ಹೋಗಿದ್ದ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Published On - 11:20 am, Wed, 20 November 19