ಮದುವೆಗೆ ಒಪ್ಪದ್ದಕ್ಕೆ ಪ್ರೇಯಸಿಯ ಕುಟುಂಬಕ್ಕೆ ಪ್ರಿಯತಮನಿಂದ ಬ್ಲ್ಯಾಕ್​​ಮೇಲ್

ಹುಬ್ಬಳ್ಳಿ: ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿ ಪ್ರೇಯಸಿಯ ಕುಟುಂಬಕ್ಕೆ ಬ್ಲ್ಯಾಕ್​​ಮೇಲ್ ಮಾಡುತ್ತಿದ್ದ ಪ್ರಿಯತಮನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪಾಂಡಿಚೇರಿ ಮೂಲದ ರಾಕಿ ಬಂಧಿತ ಆರೋಪಿ. ಈತ ಪಾಂಡಿಚೇರಿಯ ಬಿಜೆಪಿ ಮುಖಂಡ ಹಾಗೂ ಯುವತಿಯ ದೂರದ ಸಂಬಂಧಿ. ರಾಕಿ ಮತ್ತು ಹುಬ್ಬಳ್ಳಿ ಮೂಲದ ‌ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಕುಟುಂಬಸ್ಥರಿಂದ ವಿರೋಧ ವಿತ್ತು. ಹೀಗಾಗಿ ಬ್ಲ್ಯಾಕ್​ಮೇಲ್ ಮಾಡಲು ಮುಂದಾಗಿದ್ದಾನೆ. ಪೋಷಕರಿಗೆ ತಾನು ಪ್ರೀತಿಸುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಕೊಡಿ ಎಂದು […]

ಮದುವೆಗೆ ಒಪ್ಪದ್ದಕ್ಕೆ ಪ್ರೇಯಸಿಯ ಕುಟುಂಬಕ್ಕೆ ಪ್ರಿಯತಮನಿಂದ ಬ್ಲ್ಯಾಕ್​​ಮೇಲ್

Updated on: Jan 12, 2020 | 9:23 AM

ಹುಬ್ಬಳ್ಳಿ: ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿ ಪ್ರೇಯಸಿಯ ಕುಟುಂಬಕ್ಕೆ ಬ್ಲ್ಯಾಕ್​​ಮೇಲ್ ಮಾಡುತ್ತಿದ್ದ ಪ್ರಿಯತಮನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪಾಂಡಿಚೇರಿ ಮೂಲದ ರಾಕಿ ಬಂಧಿತ ಆರೋಪಿ. ಈತ ಪಾಂಡಿಚೇರಿಯ ಬಿಜೆಪಿ ಮುಖಂಡ ಹಾಗೂ ಯುವತಿಯ ದೂರದ ಸಂಬಂಧಿ. ರಾಕಿ ಮತ್ತು ಹುಬ್ಬಳ್ಳಿ ಮೂಲದ ‌ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಕುಟುಂಬಸ್ಥರಿಂದ ವಿರೋಧ ವಿತ್ತು. ಹೀಗಾಗಿ ಬ್ಲ್ಯಾಕ್​ಮೇಲ್ ಮಾಡಲು ಮುಂದಾಗಿದ್ದಾನೆ.

ಪೋಷಕರಿಗೆ ತಾನು ಪ್ರೀತಿಸುತ್ತಿದ್ದ ಹುಡುಗಿ ಜೊತೆ ಮದುವೆ ಮಾಡಿಕೊಡಿ ಎಂದು ಒತ್ತಾಯಿಸಿದ್ದಾನೆ. ಯುವತಿಯನ್ನು ಮದುವೆ ಮಾಡಿಕೊಡದಿದ್ದಲ್ಲಿ ಯುವತಿ ಜತೆಗಿನ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್​ಮೇಲ್ ಮಾಡಿದ್ದಾನೆ. ಅಲ್ಲದೆ ವಾಟ್ಸಾಪ್​ಗೆ ಹುಡುಗಿ ಜತೆಗಿನ ಅಶ್ಲೀಲ ವಿಡಿಯೋ ಕಳಿಸಿದ್ದಾನೆ. ನೊಂದ ಕುಟುಂಬ ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದೆ. ಕೇಸ್ ದಾಖಲಿಸಿಕೊಂಡ ಸೈಬರ್ ಕ್ರೈಂ ಪೊಲೀಸರು ರಾಕಿಯನ್ನ ಬಂಧಿಸಿದ್ದಾರೆ.