ಪ್ಯಾರಿಸ್: ಮಹಿಳೆಯೊಬ್ಬಳು ವರ್ಷಾನುಗಟ್ಟಲೆಯಿಂದ ಕೂದಲು ಮತ್ತು ತೂಕ ಕಳೆದುಕೊಳ್ಳುತ್ತಿದ್ದಳು. ಕ್ರಮೇಣ ಅವಳು ಇಡೀ ದಿನಗಳನ್ನು ಮರೆಯಲು ಪ್ರಾರಂಭಿಸಿದಳು. ಕೆಲವೊಮ್ಮೆ ಆಕೆಗೆ ಎಲ್ಲವೂ ಕನಸಿನಲ್ಲಿದ್ದಂತೆ ಭಾಸವಾಗುತ್ತಿತ್ತು. ಆಕೆಯ ಮಕ್ಕಳು ಮತ್ತು ಸ್ನೇಹಿತರು ಆಕೆಗೆ ಆಲ್ಝೈಮರ್ಸ್ ಇದೆ ಎಂದು ಚಿಂತಿತರಾಗಿದ್ದರು.
ಆದರೆ 2020ರ ಕೊನೆಯಲ್ಲಿ, ಅವಳನ್ನು ದಕ್ಷಿಣ ಫ್ರಾನ್ಸ್‌ನ ಪೊಲೀಸ್ ಠಾಣೆಗೆ ಕರೆಸಿದ ನಂತರ, ಆಕೆ ಶಾಕಿಂಗ್ ಕತೆಯೊಂದನ್ನು ಹೇಳಿದಳು. ಆಕೆಯ 50 ವರ್ಷ ವಯಸ್ಸಿನ ಪತಿ ಡೊಮಿನಿಕ್ ಪೆಲಿಕಾಟ್, ಆಕೆಯ ಆಹಾರ ಮತ್ತು ಪಾನೀಯಕ್ಕೆ ನಿದ್ರೆ ಮಾತ್ರೆಗಳನ್ನು, ಕೆಲವೊಮ್ಮೆ ಡ್ರಗ್ಸ್ ಅನ್ನು ಹಾಕುತ್ತಿದ್ದ. ನಂತರ ಆಕೆಯ ಮೇಲೆ ಅತ್ಯಾಚಾರವೆಸಗಲಾಗುತ್ತಿತ್ತು. ಆಕೆಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ಚಿತ್ರೀಕರಿಸಲು ಡಜನ್‌ಗಟ್ಟಲೆ ಪುರುಷರನ್ನು ಆಕೆಯ ಮನೆಗೆ ಕರೆದುಕೊಂಡು ಬಂದು ಆಕೆಯ ಮೇಲೆ ಅತ್ಯಾಚಾರ ನಡೆಸಿ, ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ. 1 ದಶಕಗಳಿಂದ ಈ ರೀತಿ ಮಾಡುತ್ತಿದ್ದುದರಿಂದ ಆಕೆಯ ಆರೋಗ್ಯ ಹದಗೆಡುತ್ತಿತ್ತು.
ಇದನ್ನೂ ಓದಿ: ಪತಿಯನ್ನು ಕೊಂದು ಬಾತ್ ರೂಂನಲ್ಲಿ ಶವ ಹೂತಿಟ್ಟ ಹೆಂಡತಿ; ಕೊಲೆಯ ರಹಸ್ಯ ಬಯಲಾಗಿದ್ದು ಹೇಗೆ?
ವ್ಯಕ್ತಿಯ ಛಾಯಾಚಿತ್ರಗಳು, ವೀಡಿಯೊಗಳು ಮತ್ತು ಆನ್‌ಲೈನ್ ಸಂದೇಶಗಳನ್ನು ಬಳಸಿಕೊಂಡು, ಪೊಲೀಸರು ಎರಡು ವರ್ಷಗಳಲ್ಲಿ ಆ ಇತರ ಶಂಕಿತರನ್ನು ಗುರುತಿಸಿದರು. ಆರೋಪಿಗಳು ಕಾರ್ಮಿಕ ವರ್ಗ ಮತ್ತು ಮಧ್ಯಮ ವರ್ಗದ ಫ್ರೆಂಚ್ ಸಮಾಜದ ಕೆಲಿಡೋಸ್ಕೋಪ್ನವರಾಗಿದ್ದಾರೆ. ಟ್ರಕ್ ಚಾಲಕರು, ಸೈನಿಕರು, ಬಡಗಿಗಳು ಮತ್ತು ವ್ಯಾಪಾರ ಕೆಲಸಗಾರರು, ಜೈಲು ಸಿಬ್ಬಂದಿ, ನರ್ಸ್, ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಐಟಿ ತಜ್ಞರು, ಸ್ಥಳೀಯ ಪತ್ರಕರ್ತರು ಹೀಗೆ ಎಲ್ಲರೂ ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಇದನ್ನೂ ಓದಿ: ಹೊಸದಾಗಿ ಉದ್ಘಾಟನೆಯಾದ ಅಂಗಡಿ ಮುಂದೆ ಕುಳಿತಿದ್ದವರಿಗೆ ಗುದ್ದಿದ ಸ್ಕಾರ್ಪಿಯೋ; ಓರ್ವ ಸಾವು, ಮೂವರಿಗೆ ಗಾಯ
ಹೆಚ್ಚಿನವರು ಮಹಿಳೆಯ ಮೇಲೆ ಒಮ್ಮೆ ಅತ್ಯಾಚಾರವೆಸಗಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಆಕೆಯ ಮೇಲೆ ಅತ್ಯಾಚಾರ ಮಾಡಲು 6 ಬಾರಿ ಹಿಂತಿರುಗಿದ್ದಾರೆ ಎಂದು ಆರೋಪಿಸಲಾಗಿದೆ. ಕೊನೆಗೆ ಗಂಡನಿಂದ ಪಾರಾಗಲು ಬೇರೆ ದಾರಿ ಕಾಣದೆ ಆಕೆ ವಿಚ್ಛೇದನ ಪಡೆದಿದ್ದಾರೆ.
ಆಕೆಯ ಗಂಡ ಈ ಆರೋಪವನ್ನು ಒಪ್ಪಿಕೊಂಡಿದ್ದು, ಇತರ ಆರೋಪಿಗಳು ಅತ್ಯಾಚಾರದ ಆರೋಪಗಳನ್ನು ನಿರಾಕರಿಸಿದ್ದಾರೆ. ಕೆಲವರಿಗೆ ಆ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಆಕೆಯ ಗಂಡ ಅನುಮತಿ ನೀಡಿದ್ದ. ಅದೇ ಕಾರಣದಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ