Viral Video: ಹೊಸದಾಗಿ ಉದ್ಘಾಟನೆಯಾದ ಅಂಗಡಿ ಮುಂದೆ ಕುಳಿತಿದ್ದವರಿಗೆ ಗುದ್ದಿದ ಸ್ಕಾರ್ಪಿಯೋ; ಓರ್ವ ಸಾವು, ಮೂವರಿಗೆ ಗಾಯ

ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಅಂಗಡಿಯ ಮುಂದೆ ಕುಳಿತಿದ್ದ ಜನರಿಗೆ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಗುದ್ದಿದೆ. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 3 ಮಂದಿ ಗಾಯಗೊಂಡಿದ್ದಾರೆ.

Viral Video: ಹೊಸದಾಗಿ ಉದ್ಘಾಟನೆಯಾದ ಅಂಗಡಿ ಮುಂದೆ ಕುಳಿತಿದ್ದವರಿಗೆ ಗುದ್ದಿದ ಸ್ಕಾರ್ಪಿಯೋ; ಓರ್ವ ಸಾವು, ಮೂವರಿಗೆ ಗಾಯ
ಅಂಗಡಿ ಮುಂದೆ ಕುಳಿತಿದ್ದವರಿಗೆ ಗುದ್ದಿದ ಸ್ಕಾರ್ಪಿಯೋ
Follow us
ಸುಷ್ಮಾ ಚಕ್ರೆ
|

Updated on:Sep 02, 2024 | 6:10 PM

ಬುಲಂದ್​ಶಹರ್: ಉತ್ತರ ಪ್ರದೇಶ ರಾಜ್ಯದ ಬುಲಂದ್‌ಶಹರ್‌ನಲ್ಲಿ ನಿಯಂತ್ರಣ ತಪ್ಪಿದ ಮಹೀಂದ್ರಾ ಸ್ಕಾರ್ಪಿಯೊ ಕಾರೊಂದು ಹೊಸದಾಗಿ ಉದ್ಘಾಟನೆಗೊಂಡ ಅಂಗಡಿಯೊಂದರ ಹೊರಗೆ ಕುಳಿತಿದ್ದ ಜನರ ಗುಂಪಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

ಮೊಘಲ್ ಗಾರ್ಡನ್​ನಲ್ಲಿ ಭಾನುವಾರ ಈ ಘಟನೆ ನಡೆದಿದೆ. ಹೊಸ ಅಂಗಡಿಯ ಮುಂಭಾಗದಲ್ಲಿ ಕುರ್ಚಿಗಳ ಮೇಲೆ ಕೆಲವು ಜನರು ಹಾಜರಿದ್ದರು. ಅನಿಯಂತ್ರಿತ ಸ್ಕಾರ್ಪಿಯೋ ಕಾರು ರಸ್ತೆಯಿಂದ ಆಚೆ ಬಂದು ಅವರಿಗೆ ಡಿಕ್ಕಿ ಹೊಡೆದಿದೆ. ಈ ಭಯಾನಕ ಘಟನೆಯನ್ನು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಪ್ರಸ್ತುತ ದೃಶ್ಯಗಳು ವೈರಲ್ ಆಗಿವೆ. ಈ ವಿಡಿಯೋ ಅಪಘಾತದ ಮಾರಣಾಂತಿಕ ಪರಿಣಾಮವನ್ನು ತೋರಿಸುತ್ತದೆ.

ವರದಿಗಳ ಪ್ರಕಾರ, ಗುಲಾವತಿ ನಿವಾಸಿ 55 ವರ್ಷದ ಹಫೀಜ್ ಆಸಿಫ್ ಖಾದ್ರಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ನಿಜಾಮುದ್ದೀನ್, ಫಾರೂಖ್ ಮತ್ತು ಜೀಶಾನ್ ಎಂದು ಗುರುತಿಸಲಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:07 pm, Mon, 2 September 24