ಬೆಂಗಳೂರು: ಬೈಜೂಸ್ ಟ್ಯೂಷನ್ ಸೆಂಟರ್ ಹೆಸರಿನಲ್ಲಿ ವಂಚನೆ

ಬೈಜೂಸ್ ಟ್ಯೂಷನ್ ಸೆಂಟರ್​ನ ಫೀಸ್​ನ್ನು ಮರಳಿ ನೀಡುತ್ತೇವೆ ಎಂದು ವಂಚನೆ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಂಚಕನ ವಿರುದ್ಧ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಬೈಜೂಸ್ ಟ್ಯೂಷನ್ ಸೆಂಟರ್ ಹೆಸರಿನಲ್ಲಿ ವಂಚನೆ
ಸೈಬರ್ ಕ್ರೈಂ
Follow us
ವಿವೇಕ ಬಿರಾದಾರ
|

Updated on: Sep 02, 2024 | 2:56 PM

ಬೆಂಗಳೂರು, ಸೆಪ್ಟೆಂಬರ್​​ 02: ಬೈಜೂಸ್ ಟ್ಯೂಷನ್ ಸೆಂಟರ್ (BYJU’S) ಹೆಸರಿನಲ್ಲಿ ಸೈಬರ್ ವಂಚಕ (Cyber Crime) ಲಕ್ಷ ಲಕ್ಷ ಹಣ ವಂಚಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಮ್ ಕೈಲಾಶ್ ಯಾದವ್ ಎಂಬವರು ತಮ್ಮ ಮಗನನ್ನ ಬೈಜೂಸ್ ಟ್ಯೂಷನ್ ಸೆಂಟರ್​ಗೆ ಸೇರಿಸಿದ್ದರು. ಸರಿಯಾಗಿ ಟ್ಯೂಷನ್ ಹೇಳದ ಕಾರಣ ಹಣ ಮರಳಿ ನೀಡುವಂತೆ ರಾಮ್ ಕೈಲಾಶ್ ಯಾದವ್ ಕೇಳಿದ್ದಾರೆ. ಈ ಮಧ್ಯೆ ಟ್ಯೂಷನ್​ ಇದ್ದ ಕಟ್ಟಡದ ಬಾಡಿಗೆ ಕಟ್ಟಿಲ್ಲ ಅಂತ ಬೈಜೂಸ್ ಟ್ಯೂಷನ್​​ ಸೆಂಟರ್​ ಬಂದ್​ ಆಗಿದೆ.

ನಂತರ ವಂಚಕ ರಾಮ್ ಕೈಲಾಶ್ ಯಾದವ್​​ಗೆ ಕರೆ ಮಾಡಿ, ನಿಮ್ಮ ಖಾತೆಗೆ ಹಣ ವರ್ಗವಾಗುತ್ತಿಲ್ಲ, ನಾನು ಒಂದು ಲಿಂಕ್ ಕಳುಹಿಸುತ್ತೇನೆ ಎಂದ rustdesk.apk ಎಂಬ ಲಿಂಕ್ ಕಳಿಸಿದ್ದಾನೆ.‌ ಬಳಿಕ ಆ್ಯಪ್​ ಇನ್ಸ್ಟಾಲ್​ ಆಗುತ್ತಿದ್ದಂತೆ, ವಂಚಕ ರಾಮ್ ಕೈಲಾಶ್ ಯಾದವ್ ಅಕೌಂಟ್​ನಿಂದ 1.30 ಲಕ್ಷ ಹಣ ಕನ್ನ ಹಾಕಿದ್ದಾನೆ. ಈ ಬಗ್ಗೆ ರಾಮ್ ಕೈಲಾಶ್ ಯಾದವ್ ಬ್ಯಾಂಕ್​​ಗೆ ವಿಚಾರ ತಿಳಿಸಿದ್ದಾರೆ. ಅಲ್ಲದೇ, ರಾಮ್ ಕೈಲಾಶ್ ಯಾದವ್ ಸೈಬರ್​ ಕ್ರೇಂ ಠಾಣೆಗೆ ದೂರು ನೀಡಿದ್ದಾರೆ.

ಆದರೆ ಬೈಜೂಸ್ ಟ್ಯೂಷನ್ ಸೆಂಟರ್​ನಿಂದ ನಿಮ್ಮ ಟ್ಯೂಶನ್​ ಶುಲ್ಕ ಬಾಕಿ ಇದೆ ಅಂತ ರಾಮ್ ಕೈಲಾಶ್ ಯಾದವ್ ಅವರ ಮೊಬೈಲ್​ಗೆ ಸಂದೇಶ ಬರುತ್ತಿದೆ. ರಾಮ್ ಕೈಲಾಶ್ ಯಾದವ್ ಅವರಿಗೆ ಸದ್ಯ ದಿಕ್ಕೇ ತೋಚದಂತಾಗಿದೆ.

ಇದನ್ನೂ ಓದಿ: ಬೈಕ್​ ಹೋಯ್ತು ಈಗ ಕಾರಿನಲ್ಲಿ ಬಂದು ಸರ ಎಗರಿಸ್ತಾರೆ

ಕೊರಿಯರ್ ಬಾಯ್​ಗೆ ಚಾಕು ಇರಿತ

ಬೆಂಗಳೂರು: ಮನೆ ಬಾಗಿಲಿಗೆ ಕೊರಿಯರ್ ತಂದುಕೊಡಲಿಲ್ಲ ಎಂದು ಕೊರಿಯರ್ ಬಾಯ್​ಗೆ ಚಾಕು ಇರಿದ ಅಶೋಕ್​ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅರ್ಬಾಜ್ (29) ಬಂಧಿತ ಆರೋಪಿ. ಸದ್ಯ ಅಶೋಕ್ ನಗರ ಪೊಲೀಸರು ಆರೋಪಿ ಅರ್ಬಾಜ್​ನನ್ನು ಬಂಧಿಸಿದ್ದಾರೆ. ಕೊರಿಯರ್ ಬಾಯ್ ಮೊಹಮ್ಮದ್ ರಫಿ (32) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊಹಮ್ಮದ್ ರಫಿ ಡಿಟಿಡಿಸಿ ಕೊರಿಯರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಡಿಲಿವರಿಗಾಗಿ ಆನೇಪಾಳ್ಯಕ್ಕೆ ಬಂದಿದ್ದರು. ಮೊಹಮ್ಮದ್ ರಫಿ ಲೊಕೇಷನ್​ಗೆ ಬರದೆ, ಲ್ಯಾಂಡ್ ಮಾರ್ಕ್ ಬಳಿ ಬನ್ನಿ ಎಂದು ಅರ್ಬಾಜ್​ಗೆ ಹೇಳಿದ್ದಾರೆ. ಡೆಲೆವರಿ ತರಲು ಅರ್ಬಾಜ್ ತನ್ನ ತಾಯಿಯನ್ನ ಕಳಿಸಿದ್ದನು. ಆದರೆ ಒಟಿಪಿ ನಂಬರ್ ಬೇಕು ಎಂದು ಮೊಹಮ್ಮದ್ ರಫಿ ವಾಪಸ್ ಕಳಿಸಿದ್ದನು. ಇದರಿಂದ ಕೋಪಗೊಂಡ ಅರ್ಬಾಜ್​​​​ ಮನೆಯಿಂದ ಚಾಕು ತೆಗೆದುಕೊಂಡು ಹೋಗಿ ಮೊಹಮ್ಮದ್ ರಫಿಯ ಹೊಟ್ಟೆ ಮತ್ತು ಕುತ್ತಿಗೆ ಭಾಗಕ್ಕೆ ಇರಿದಿದ್ದಾನೆ. ಅಶೋಕ್ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಮೊಹಮ್ಮದ್ ರಫಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಬಹಳ ಎಚ್ಚರವಹಿಸಬೇಕೆಂದು ಹೇಳುತ್ತಾರೆ ಪ್ರಯಾಗ್​ರಾಜ್​ಗೆ ಬಂದಿರುವ ಕನ್ನಡಿಗ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಗೆ ಹರಿದು ಬಂದ ಜನ ಸಾಗರದ ವಿಡಿಯೋ ನೋಡಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆ ಮಾಡಿದ್ದಾರೆ: ಬಿವೈವಿ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ