ಬೆಂಗಳೂರಿನಲ್ಲಿ ಚೈನ್ ಸ್ನ್ಯಾಚಿಂಗ್: ಬೈಕ್​ ಹೋಯ್ತು ಈಗ ಕಾರಿನಲ್ಲಿ ಬಂದು ಸರ ಎಗರಿಸ್ತಾರೆ

ಬೈಕ್​ನಲ್ಲಿ ಬಂದು ಸರ ಕಿತ್ತುಕೊಂಡು ಹೋಗುವ ಪ್ರಕರಣಗಳು ನಡೆಯುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಒಂದಷ್ಟು ದಿನ ಬ್ಲ್ಯಾಕ್ ಪಲ್ಸರ್​​ನಲ್ಲೇ ಬಂದು ಚೈನ್​ ಕಿತ್ತುಕೊಂಡು ಹೋಗಿದ್ದು, ಪಲ್ಸರ್ ಬೈಕ್​ ಕಂಡ್ರೆ ಸ್ವಲ್ಪ ದಿನ ಭಯ ಹುಟ್ಟಿಸಿತ್ತು. ಈಗ ಅಪ್ಡೇಟ್ ಆಗಿದ್ದಾರೋ ಏನೋ ಕಾರಿನಲ್ಲಿ ಬಂದು ಮಹಿಳೆಯೊಬ್ಬರ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಚೈನ್ ಸ್ನ್ಯಾಚಿಂಗ್: ಬೈಕ್​ ಹೋಯ್ತು ಈಗ ಕಾರಿನಲ್ಲಿ ಬಂದು ಸರ ಎಗರಿಸ್ತಾರೆ
ಬೆಂಗಳೂರಿನಲ್ಲಿ ಚೈನ್ ಸ್ನ್ಯಾಚಿಂಗ್: ಬೈಕ್​ ಹೋಯ್ತು ಈಗ ಕಾರಿನಲ್ಲಿ ಬಂದು ಸರ ಎಗರಿಸ್ತಾರೆ
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 30, 2024 | 9:53 PM

ಬೆಂಗಳೂರು ಗ್ರಾಮಾಂತರ, ಆಗಸ್ಟ್​ 30: ಕಾರಿನಲ್ಲಿ ಬಂದು ಮಹಿಳೆಯ ಸರವನ್ನು ಖದೀಮರು (Chain snatching) ಎಗರಿಸಿರುವಂತಹ ಘಟನೆ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ತೋಟನಹಳ್ಳಿ ಗ್ರಾಮದ ಉಷಾ ಎಂಬುವರ 2 ಲಕ್ಷ 52 ಸಾವಿರ ರೂ. ಬೆಲೆ ಬಾಳುವ 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಎಗರಿಸಿ ಖದೀಮರು ಕಾರಿನಲ್ಲಿ ಪರಾರಿ ಆಗಿದ್ದಾರೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಷಾ ಅವರು ಕೆಲಸ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬಳಿ ಬಣ್ಣದ ಐ10 ಕಾರಿನಲ್ಲಿ ಬಂದಿದ್ದ ಮೂವರು ಕಳ್ಳರಿಂದ ಕೃತ್ಯವೆಸಲಾಗಿದೆ. ಕಳ್ಳರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಮೂವರು ಮನೆಗಳ್ಳರ ಬಂಧನ

ಬೆಂಗಳೂರಿನ ಸಂಜಯನಗರ ಪೊಲೀಸರಿಂದ ಉತ್ತರ ಪ್ರದೇಶ ಮೂಲದ ಮೂವರು ಮನೆಗಳ್ಳರ ಬಂಧನ ಮಾಡಲಾಗಿದೆ. ಅಕ್ಬರ್, ಮೊಬಿನಾ ಮತ್ತು ಸೋನು ಯಾದವ್ ಬಂಧಿತರು. ಸಂಜಯನಗರದ 1ನೇ ಮುಖ್ಯರಸ್ತೆಯ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ದೋಚಿ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದರು. ಸದ್ಯ ಬಂಧಿತರಿಂದ 30 ಲಕ್ಷ ರೂ. ಮೌಲ್ಯದ 405 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಸಂಜಯನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಕಲಿ ವೈದ್ಯನ ಚಿಕಿತ್ಸೆಯಿಂದ ಯುವಕ ಸಾವು ಆರೋಪ

ಕೋಲಾರ: ನಕಲಿ ಕ್ಲಿನಿಕ್ ವೈದ್ಯನ ಚಿಕಿತ್ಸೆಯಿಂದ ಯುವಕ ಸಾವು ಆರೋಪ ಕೇಳಿಬಂದಿದೆ. ಮುಳಬಾಗಲು ನಗರದ ನೂಗಲಬಂಡೆ ಫಿಜಾ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದ ಸಲ್ಮಾನ್ ಪಾಷಾ (22) ಮೃತ ಯುವಕ. ಆರ್.ಎಂ.ಪಿ ವೈದ್ಯ ಮುಬಾರಕ್ ಎಂಬುವರಿಂದ ಚಿಕಿತ್ಸೆ ನೀಡಿದ್ದ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಗಂಡನ ಶವ: ಖಡಕ್​ ಪೊಲೀಸ್ ಶ್ವಾನ ಮನೆಯಲ್ಲಿದ್ದ ಪತ್ನಿ ಮುಂದೆ ಬಂದು ನಿಂತಿದ್ದೇಕೆ ಗೊತ್ತಾ?

ಕಳೆದ ಒಂದು ವಾರದಿಂದ ಫಿಜಾ ಕ್ಲಿನಿಕ್​ನಲ್ಲಿ ಯುವಕ ಚಿಕಿತ್ಸೆ ಪಡೆದಿದ್ದ. ಕಾಲು ಊತ, ಅಲರ್ಜಿಯಾಗಿ ಇಂದು ಮೃತಪಟ್ಟಿದ್ದಾನೆ. ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಅಂಜನಾದ್ರಿ ಬೆಟ್ಟ ಏರಿದ ಬಳಿಕ ಹೃದಯಾಘಾತದಿಂದ ಭಕ್ತ ಸಾವು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಏರಿದ ಬಳಿಕ ಹೃದಯಾಘಾತದಿಂದ ಭಕ್ತ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಭಕ್ತ ಭಾಗಚಂದ್ ಠಾಲ್(63) ಮೃತ ವ್ಯಕ್ತಿ. ಆಂಜನೇಯ ಜನ್ಮಸ್ಥಳ ಎಂದು ಅಂಜನಾದ್ರಿ ಬೆಟ್ಟ ಪ್ರಸಿದ್ಧಿ ಪಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ