ಅನೈತಿಕ ಸಂಬಂಧಕ್ಕೆ ಕುಟುಂಬ ಹಾಳು; ರೊಚ್ಚಿಗೆದ್ದ ವ್ಯಕ್ತಿ ಏರ್ಪೋರ್ಟ್​ನಲ್ಲಿಯೇ ಚಾಕುವಿನಿಂದ ಚುಚ್ಚಿ ಕೊಂದ

ಅದು ನಿತ್ಯ ಸಾವಿರಾರು ಜನ ಪ್ರಯಾಣಿಕರು, ಶಸ್ತ್ರ ಸಜ್ಜಿತ ಯೋದರು, ಪೊಲೀಸರು ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣ. ಆದ್ರೆ, ಇಂತಹ ಕಡೆಯೇ ಮುಸ್ಸಂಜೆ ನೆತ್ತರು ಕೋಡಿಯೆ ಹರಿದಿದ್ದು, ಕ್ಷಣ ಮಾತ್ರದಲ್ಲೆ ನಡೆದ ಕೊಲೆ ಪ್ರಯಾಣಿಕರು ಸೇರಿದಂತೆ ಪೊಲೀಸರನ್ನ ಬೆಚ್ಚಿ ಬೀಳಿಸಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಅನೈತಿಕ ಸಂಬಂಧಕ್ಕೆ ಕುಟುಂಬ ಹಾಳು; ರೊಚ್ಚಿಗೆದ್ದ ವ್ಯಕ್ತಿ ಏರ್ಪೋರ್ಟ್​ನಲ್ಲಿಯೇ ಚಾಕುವಿನಿಂದ ಚುಚ್ಚಿ ಕೊಂದ
ಕೆಂಪೇಗೌಡ ಏರ್ ಪೋರ್ಟ್​ನಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಬರ್ಬರ ಕೊಲೆ
Follow us
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Aug 29, 2024 | 10:08 PM

ಬೆಂಗಳೂರು, ಆ.29: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣ, ಪ್ರತಿನಿತ್ಯ ಒಂದು ಲಕ್ಷದವರೆಗೂ ಪ್ರಯಾಣಿಕರು, 700 ಕ್ಕೂ ಅಧಿಕ ಟ್ರಿಪ್ ವಿಮಾನ ಸಂಚಾರ ಮಾಡುವ ದೇಶದಲ್ಲೇ ಅತ್ಯಂತ ಬ್ಯುಸಿಯಾಗಿರುವ ವಿಮಾನ ನಿಲ್ಥಾಣಗಳಲ್ಲಿ ಮೂರನೇ ಸ್ಥಾನವನ್ನ ಪಡೆದುಕೊಂಡಿರುವ ಏರ್ಪೋರ್ಟ್​. ಹೀಗಾಗೆ ನಿತ್ಯ ವಿಮಾನ ನಿಲ್ಥಾಣದಿಂದ ಸಂಚರಿಸುವ ಪ್ರಯಾಣಿಕರ ಸೇವೆಗೆ ಅಂತಲೆ ಸಾವಿರಾರು ಜನ ಸಿಬ್ಬಂದಿಯನ್ನ ಏರ್ಪೋರ್ಟ್​ ಆಡಳಿತ ಮಂಡಳಿ ನಿಯೋಜನೆ ಮಾಡಿಕೊಂಡಿದ್ದು, ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿ ಮಾಡಿದೆ. ಇದೇ ರೀತಿ ತುಮಕೂರು ಜಿಲ್ಲೆಯ ಮಧುಗಿರಿ ಮೂಲದ 40 ವರ್ಷದ ರಾಮಕೃಷ್ಣ ಎಂಬಾತ ಸಹ ಕಳೆದ 5 ವರ್ಷಗಳಿಂದ ಏರ್ಪೋರ್ಟ್​ನಲ್ಲಿ ಟ್ರಾಲಿಗಳನ್ನ ತಳ್ಳುವ ಕೆಲಸಕ್ಕೆ ಸೇರಿಕೊಂಡಿದ್ದು, ಎರಡು ವರ್ಷಗಳ ಹಿಂದೆ ಟ್ರಾಲಿಯಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಚಿನ್ನದ ಸರವೊಂದನ್ನ ವಾಪಸ್ ತಂದುಕೊಟ್ಟು ಎಲ್ಲರಿಂದ ಪ್ರಶಂಸೆಯನ್ನು ಪಡೆದುಕೊಂಡಿದ್ದ. ಜೊತೆಗೆ ದೇವನಹಳ್ಳಿ ಪಕ್ಕದಲ್ಲೆ ಪತ್ನಿ ಮತ್ತು ಮಕ್ಕಳೊಂದಿಗೆ ಜೀವನ ಕಟ್ಟಿಕೊಂಡಿದ್ದ ರಾಮಕೃಷ್ಣ, ತಾನಾಯಿತು ತನ್ನ ಕೆಲಸವಾಯಿತು ಅಂತಿದ್ದ.

ಇದೇ ರೀತಿ ನಿನ್ನೆ(ಆ.28) ಮಧ್ಯಾಹ್ನವು ಕೂಡ ಶಿಪ್ಟ್ ಗೆ ಬಂದ ರಾಮಕೃಷ್ಣ ಏರ್ಪೋರ್ಟ್​ನಲ್ಲಿ ಕೆಲಸ ಮಾಡಿಕೊಂಡು ಸುಸ್ತಾಗಿದ್ದು, ಟೀ ಕುಡಿದು ವಿಶ್ರಾಂತಿ ಪಡೆಯೋಣ ಎಂದು ಟರ್ಮಿನಲ್ ಒಂದರ ಶೌಚಾಲಯದ ಬಳಿಗೆ ಬಂದಿದ್ದಾನೆ. ಅಲ್ಲದೆ ಶೌಚಾಲಯದ ಬಳಿ ಕೆಲ ಕಾಲ ಕುಳಿತು ವಿಶ್ರಾಂತಿ ಪಡೆಯಲು ಮುಂದಾಗ್ತಿದ್ದಂತೆ ಹಿಂದಿನಿಂದ ಬಂದ ರಮೇಶ್ ಎನ್ನುವ ಕೊಲೆಗಡುಕ, ಏಕಾಏಕಿ ತನ್ನ ಬಳಿಯಿದ್ದ ಚಾಕುವಿನಿಂದ ರಾಮಕೃಷ್ಣನ ಕುತ್ತಿಗೆಗೆ ಇರಿದಿದ್ದಾನೆ. ಎರಡು ಕಡೆ ಚಾಕುವಿನಿಂದ ಇರಿದ ಕಾರಣ ತೀವ್ರ ರಕ್ತ ಸ್ರಾವದಿಂದ ಬಳಲಿದ ರಾಮಕೃಷ್ಣ, ರಕ್ತದ ಮಡುವಿನಲ್ಲಿ ಒದ್ದಾಡಿದ್ದಾನೆ.

ಇದನ್ನೂ ಓದಿ:ರಾಯಚೂರಿನಲ್ಲಿ ಪತ್ನಿ, ಅಜ್ಜಿ ಜೋಡಿ ಕೊಲೆ ಪ್ರಕರಣಕ್ಕೆ ಟ್ವೀಸ್ಟ್​! ಪೊಲೀಸ್ ತನಿಖೆ ವೇಳೆ ಬಯಲಾಯ್ತು ಹತ್ಯೆಯ ಸತ್ಯಾಂಶ

ಇನ್ನು ರಾಮಕೃಷ್ಣ ರಕ್ತದ ಮಡುವಿನಲ್ಲಿ ಒದ್ದಾಡ್ತಿದ್ದಂತೆ ಏರ್ಪೋರ್ಟ್​ನ ಭದ್ರತಾ ಪಡೆ ಮತ್ತು ಸಾರ್ವಜನಿಕರು ಚಾಕುವಿನಿಂದ ಇರಿದವನನ್ನ ಹಿಡಿದುಕೊಂಡಿದ್ದು, ಕೂಡಲೇ ರಾಮಕೃಷ್ಣನನ್ನ ಆ್ಯಂಬುಲೆನ್ಸ್ ಮೂಲಕ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಯತ್ನ ಮಾಡಿದ್ದಾರೆ. ಆದ್ರೆ, ಅಷ್ಟರಲ್ಲೆ ತೀವ್ರ ರಕ್ತ ಸ್ರಾವದಿಂದ ಒದ್ದಾಡಿದ ರಾಮಕೃಷ್ಣ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡುವ ಮುನ್ನವೆ  ಸಾವನ್ನಪಿದ್ದಾನೆ. ಇನ್ನು ಕೆಲಸ ಮಾಡುವ ಸಿಬ್ಬಂದಿ ಕೊಲೆಯಾಗಿದ್ದಾನೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಬಂದ ಕೆಂಪೇಗೌಡ ಏರ್ಪೋರ್ಟ್​ ಪೊಲೀಸರು ಮತ್ತು ಈಶಾನ್ಯ ವಿಭಾಗ ಡಿಸಿಪಿ ಸಜಿತ್ ಆರೋಫಿಯನ್ನ ವಶಕ್ಕೆ ಪಡೆದು ಸ್ಥಳದಲ್ಲಿದ್ದ ಸಾಕ್ಷ್ಯಧಾರಗಳನ್ನ ಕಲೆ ಹಾಕಿದ್ದಾರೆ. ಜೊತೆಗೆ ಫೋರೆನ್ಸಿಕ್ ತಂಡ ಸಹ ಸ್ತಳಕ್ಕೆ ದೌಡಾಯಿಸಿ ಬಂದಿದ್ದು, ಟರ್ಮಿನಲ್​ನಲ್ಲಿ ಇಂಚಿಂಚೂ ಪರಿಶೀಲನೆ ನಡೆಸಿದ್ದಾರೆ.

ಅನೈತಿಕ ಸಂಬಂಧದಿಂದ ಹಾಳಾದ ಸಂಸಾರದ ಕಥೆ

ಸೆರೆ ಸಿಕ್ಕಿ ಕೊಲೆ ಆರೋಪಿ ರಮೇಶ್​ನನ್ನ ವಶಕ್ಕೆ ಪಡೆದ ಪೊಲೀಸರು, ತಮ್ಮದೆ ಶೈಲಿಯಲ್ಲಿ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.  ಹೌದು, ಅಂದಹಾಗೆ ಕೊಲೆ ಆರೋಪಿ ರಮೇಶ್​ ಮತ್ತು ಕೊಲೆಯಾದ ಸಿಬ್ಬಂದಿ ರಾಮಕೃಷ್ಣ ಇಬ್ಬರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಳೆ ತಿಮ್ಮನಹಳ್ಳಿ ನಿವಾಸಿಗಳಾಗಿದ್ದು, ಇಬ್ಬರು ಹಿಂದೆ ಮುಂದೆ ಮನೆಯಲ್ಲಿದ್ದರಂತೆ. ಜೊತೆಗೆ ಕೊಲೆ ಆರೋಪಿ ಖಾಸಗಿ ಬಸ್​ನಲ್ಲಿ ಕಂಡಕ್ಟರ್ ಕೆಲಸ ಮಾಡಿಕೊಂಡಿದ್ದು, ಇಬ್ಬರು ಮಕ್ಕಳು ಮತ್ತು ಪತ್ನಿ ಜೊತೆ ಸುಖ ಸಂಸಾರವನ್ನೆ ನಡೆಸಿಕೊಂಡು ಬಂದಿದ್ದಾನೆ. ಆದ್ರೆ, ಈ ವೇಳೆ ರಮೇಶ್​​ ಕೆಲಸಕ್ಕೆ ಎಂದು ಬಸ್​ಗೆ ಹೋಗ್ತಿದ್ರೆ, ಊರಿನಲ್ಲಿದ್ದ ರಾಮಕೃಷ್ಣ ರಮೇಶನ ಪತ್ನಿಗೆ ಪೋನ್​ನಲ್ಲಿ ಮೆಸೇಜ್​ಗಳನ್ನ ಮಾಡುತ್ತಾ ಆಕೆಯ ಜೊತೆ ಮಾತನಾಡ್ತಿದ್ನಂತೆ.

ಇದನ್ನೂ ಓದಿ:ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಲೆ ಮಾಡಿದ ಮಲತಂದೆ ಅರೆಸ್ಟ್

ಈ ವಿಚಾರ ಗಂಡ ರಮೇಶನಿಗೆ ಗೊತ್ತಾಗಿದ್ದು, ಹಲವು ಭಾರಿ ಗಲಾಟೆ ಕೂಡ ಮಾಡಿದ್ದ. ಇದರಿಂದ ಪತ್ನಿ, 2021 ರಲ್ಲಿ ರಮೇಶ್​ನನ್ನ ತೊರೆದು ವಿಚ್ಚೇದನ ನೀಡಿದ್ದಾಳೆ. ಜೊತೆಗೆ ಇದೇ ವೇಳೆ ರಮೇಶನ ಮಗ ಸಹ ಅನಾರೋಗ್ಯದಿಂದ ಸಾವನ್ನಪಿದ್ದು, ಇದ್ದ ಮಗಳು ಕೆಲದಿನ ಅಪ್ಪನ ಬಳಿ, ಕೆಲ ದಿನ ಅಮ್ಮನ ಬಳಿ ಇದ್ದಳು. ಹೀಗಾಗಿ ಚೆನ್ನಾಗಿದ್ದ ಸುಖ ಸಂಸಾರ ರಾಮಕೃಷ್ಣನಿಂದ ಹಾಳಾಗಿ ಹೋಯ್ತಲ್ಲ ಎಂದು ರಮೇಶ್​, ರಾಮಕೃಷ್ಣನ ಮೇಲೆ ದ್ವೇಷ ಬೆಳೆಸಿಕೊಂಡಿದ್ದಾನೆ. ಜೊತೆಗೆ ಊರಿಗೆ ಬಂದಾಗ ರಾಮಕೃಷ್ಣನಿಗೆ ಬುದ್ದಿ ಕಲಿಸಬೇಕು ಎಂದು ಎರಡ್ಮೂರು ಬಾರಿ ರಾಮಕೃಷ್ಣನ ಮೇಲೆ ಹಲ್ಲೆ ಮಾಡೋದಕ್ಕೂ ಪ್ಲಾನ್ ಮಾಡಿದ್ದಾನೆ. ಆದ್ರೆ, ಕುಟುಂಬದ ಜೊತೆ ರಾಮಕೃಷ್ಣ ಊರಿಗೆ ಬಂದೋಗುತ್ತಿದ್ದ ಕಾರಣ ಸ್ಕೆಚ್ ಉಲ್ಟಾ ಆಗಿದೆ.

ಹಲವು ಭಾರಿ ಸ್ಕೇಚ್ ಸಕ್ಸಸ್ ಆಗದ ಕಾರಣ ರಾಮಕೃಷ್ಣನನ್ನ ಮುಗಿಸಲೆಬೇಕು ಎಂದು ಪ್ಲಾನ್ ಮಾಡಿದ ರಮೇಶ್​, ಸ್ನೇಹಿತರ ಬಳಿಯಿಂದ ರಾಮಕೃಷ್ಣನ ಏರ್ಪೋರ್ಟ್​ ಐಡಿ ಕಾರ್ಡ್ ತೆಗೆದುಕೊಂಡು ನಿನ್ನೆ ಸಂಜೆ ಸೀದಾ ಏರ್ಪೋರ್ಟ್​ಗೆ ಬಂದಿದ್ದಾನೆ. ಜೊತೆಗೆ ಎಲ್ಲೆಡೆ ಹುಡುಕಾಡಿದ ರಮೇಶನಿಗೆ ರಾಮಕೃಷ್ಣ ಟರ್ಮಿನಲ್ ಬಳಿ ಕೆಲಸ ಮಾಡಿಕೊಂಡು ವಿಶ್ರಾಂತಿ ಪಡೆಯಲು ಶೌಚಾಲಯದ ಕಡೆ ಹೋಗ್ತಿರುವ ದೃಶ್ಯ ಕಾಣಿಸಿದೆ. ಹೀಗಾಗಿ ಅವನನ್ನೆ ಹಿಂಬಾಲಿಸಿಕೊಂಡು ಹೋದ ರಮೇಶ್​, ರಾಮಕೃಷ್ಣ ಚೇರ್ ಮೇಲೆ ಕೂತು ವಿಶ್ರಾಂತಿ ಪಡೆಯುತ್ತಿದ್ದಂತೆ ಹಿಂದಿನಿಂದ ಬಂದು ಕುತ್ತಿಗೆಗೆ ಎರಡು ಬಾರಿ ಚಾಕುವಿನಿಂದ ಇರಿದಿದ್ದಾನೆ.

ಇನ್ನು ಮೂರು ವರ್ಷಗಳಿಂದೆ ಪತ್ನಿ ಜೊತೆ ಸಲುಗೆಯಿಂದ ಮಾತನಾಡುತ್ತಾ ನನ್ನ ಸಂಸಾರವನ್ನ ಹಾಳು ಮಾಡಿದ ಎಂದು ದ್ವೇಷ ಕಟ್ಟಿಕೊಂಡು ಬಂದು ಕೊಲೆ ಮಾಡಿದ ಕೃತ್ಯಕ್ಕೆ ಆರೋಪಿ ರಮೇಶ್​ ಜೈಲು ಸೇರಿದ್ರೆ, ಇತ್ತ ಕೆಲಸಕ್ಕೆಂದು ಬಂದಿದ್ದ ರಾಮಕೃಷ್ಣ ಇಹಲೋಕ ತ್ಯಜಿಸಿದ್ದಾನೆ. ರಾಮಕೃಷ್ಣನನ್ನ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಆತನ ಪತ್ನಿ ಮತ್ತು ಮಕ್ಕಳು ಇದೀಗ ಮನೆ ಒಡೆಯನನ್ನ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Thu, 29 August 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ