ದರ್ಶನ್ ತೂಗುದೀಪ: ಬಳ್ಳಾರಿ ಜೈಲು ಮುಂದಿನ ರಸ್ತೆಗಳು ಸಂಚಾರ ಮುಕ್ತ, ಬ್ಯಾರಿಕೇಡ್ ಸರಿಸಿದ ಪೊಲೀಸರು

ದರ್ಶನ್ ತೂಗುದೀಪ: ಬಳ್ಳಾರಿ ಜೈಲು ಮುಂದಿನ ರಸ್ತೆಗಳು ಸಂಚಾರ ಮುಕ್ತ, ಬ್ಯಾರಿಕೇಡ್ ಸರಿಸಿದ ಪೊಲೀಸರು

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 30, 2024 | 10:25 AM

ದರ್ಶನ್ ತೂಗುದೀಪ: ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಕೆಲ ಜೈಲಾಧಿಕಾರಿಗಳ ಸೌಜನ್ಯದಿಂದ ಕೈದಿಯ ಬದಲು ಶ್ರೀಮಂತನ ಹಾಗೆ ದಿನಗಳೆಯುತ್ತಿದ್ದ ದರ್ಶನ್ ಗೆ ಬಳ್ಳಾರಿ ಜೈಲಿನಲ್ಲಿರುವ ಕಟ್ಟುನಿಟ್ಟಿನ ವ್ಯವಸ್ಥೆ ಮೈ ಪರಚಿಕೊಳ್ಳುವಂತೆ ಮಾಡಿರುತ್ತದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದೆ ವಿಧಿಯಿಲ್ಲ.

ಬಳ್ಳಾರಿ: ನಗರದ ಸೆಂಟ್ರಲ್ ಜೈಲು ಮುಂದಿರುವ ಈ ರಸ್ತೆಗಳನ್ನು ನಿನ್ನೆ ನಾವು ತೋರಿಸಿದ್ದೇವೆ. ಕೊಲೆ ಆರೋಪಿ ದರ್ಶನ್ ಅವರನ್ನು ಬೆಂಗಳೂರು ಸೆಂಟ್ರಲ್ ಜೈಲಿನಿಂದ ಇಲ್ಲಿನ ಕೇಂದ್ರೀಯ ಕಾರಾಗೃಹಕ್ಕೆ ಶಿಫ್ಟ್ ಮಾಡಿದಾಗ ತಮ್ಮ ನೆಚ್ಚಿನ ನಟನನ್ನು ನೋಡಲು ಜನ ಜಾತ್ರೆಯಂತೆ ನೆರೆದಿದ್ದರು ಮತ್ತು ಮಧ್ಯಾಹ್ನದವರೆಗೆ ಜನ ಬರುತ್ತಲೇ ಇದ್ದರು. ಜನಸಾಗರ ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿದ್ದರು. ಇವತ್ತು ಅವುಗಳನ್ನು ತೆಗೆದು ರಸ್ತೆಗಳನ್ನು ಸಂಚಾರ ಮುಕ್ತ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೊಸ ಜೈಲಿಗೆ ಅಡ್ಜಸ್ಟ್ ಆಗದ ದರ್ಶನ್; ರಾತ್ರಿಯೆಲ್ಲ ನಿದ್ದೆ ಇಲ್ಲದೆ ಒದ್ದಾಡಿದ ‘ಕರಿಯ’