Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಜೈಲಿಗೆ ಅಡ್ಜಸ್ಟ್ ಆಗದ ದರ್ಶನ್; ರಾತ್ರಿಯೆಲ್ಲ ನಿದ್ದೆ ಇಲ್ಲದೆ ಒದ್ದಾಡಿದ ‘ಕರಿಯ’

ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೇಟ್​ಮೆಂಟ್​ ಪಡೆಯುತ್ತಿದ್ದ ದರ್ಶನ್​ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಆ ವಾತಾವರಣಕ್ಕೆ ಅವರು ಹೊಂದಿಕೊಳ್ಳಬೇಕು. ಇದಕ್ಕೆ ಅವರಿಗೆ ಸಾಕಷ್ಟು ಸಮಯ ಬೇಕು ಎನಿಸುತ್ತಿದೆ. ಅವರಿಗೆ ರಾತ್ರಿಯೆಲ್ಲ ನಿದ್ದೆ ಬಂದಿಲ್ಲ.

ಹೊಸ ಜೈಲಿಗೆ ಅಡ್ಜಸ್ಟ್ ಆಗದ ದರ್ಶನ್; ರಾತ್ರಿಯೆಲ್ಲ ನಿದ್ದೆ ಇಲ್ಲದೆ ಒದ್ದಾಡಿದ ‘ಕರಿಯ’
ದರ್ಶನ್
Follow us
ರಾಜೇಶ್ ದುಗ್ಗುಮನೆ
|

Updated on: Aug 30, 2024 | 7:33 AM

ನಟ ದರ್ಶನ್ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾ ‘ಕರಿಯ’. ಈ ಚಿತ್ರ ರಿಲೀಸ್ ಆಗಿದ್ದು 2003ರ ಜನವರಿ 3ರಂದು. ಈ ಸಿನಿಮಾ ರಿಲೀಸ್ ಆಗುವ ಹಿಂದಿನ ದಿನ ಬಹುಶಃ ಅವರಿಗೆ ಎಗ್ಸೈಟ್​ಮೆಂಟ್​ನಲ್ಲಿ ನಿದ್ದೆ ಬಂದಿರಲಿಕ್ಕಿಲ್ಲ. ಇದೇ ಸಿನಿಮಾ ಇಂದು (ಆಗಸ್ಟ್ 30) ರೀ ರಿಲೀಸ್ ಆಗುತ್ತಿದೆ. ಇದರ ಹಿಂದಿನ ದಿನವೂ ಅವರಿಗೆ ಸರಿಯಾಗಿ ನಿದ್ದೆ ಬಂದಿಲ್ಲ. ಇದಕ್ಕೆ ಕಾರಣ ಎಗ್ಸೈಟ್​ಮೆಂಟ್ ಅಲ್ಲ, ಜೈಲು ಸೆಟ್ ಆಗದೇ ಇರುವುದು.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್​ಗೆ ರಾಜಾತಿಥ್ಯ ನೀಡಲಾಗುತ್ತಿತ್ತು. ಹೀಗಾಗಿ, ಅವರು ಹಾಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ, ಬಳ್ಳಾರಿ ಜೈಲಿನಲ್ಲಿ ವಿಶೇಷ ಆತಿಥ್ಯಕ್ಕೆ ಬ್ರೇಕ್ ಹಾಕಲಾಗಿದೆ. ಇದು ದರ್ಶನ್​ಗೆ ನುಂಗಲಾರದ ತುತ್ತಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ನಂತರ ಬಂಧನಕ್ಕೆ ಒಳಗಾಗಿ ಹಾಯಾಗಿದ್ದ ಅವರು ಈಗ ನಿಜವಾದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಕುಟುಂಬದವರಿಗೆ ಮಾತ್ರ ಭೇಟಿಗೆ ಅವಕಾಶ ಇದೆ. ಅವರು ರಾತ್ರಿ ಇಡೀ ನಿದ್ದೆ ಇಲ್ಲದೆ ಒದ್ದಾಡಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ದರ್ಶನ್​ ಮೊದಲ ದಿನ ಕಳೆದಿದ್ದಾರೆ. ರಾತ್ರಿ 1 ಗಂಟೆವರೆಗೆ ನಿದ್ದೆ ಮಾಡದೆ ಒದ್ದಾಡಿದ್ದಾರೆ. ಜೈಲಿಗೆ ಇನ್ನೂ ಅವರು ಹೊಂದಿಕೊಂಡಿಲ್ಲ. ಜೈಲಿನಲ್ಲಿ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು ತಿಂದಿದ್ದಾರೆ. ಅವರಿಗೆ ಜೈಲಿನ ನಿಯಮದಂತೆ 355 ಗ್ರಾಮ್ ಉಪ್ಪಿಟ್ಟು ನೀಡಲಾಗಿದೆ. ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಆಗಸ್ಟ್ 29ರಂದು ಶಿಫ್ಟ್ ಮಾಡಿದ್ದರು. ಅವರು ಬೆಳ್ಳಿಗೆ ತಿಂಡಿ, ಮಧ್ಯಾಹ್ನದ ಊಟವನ್ನು ಬಿಟ್ಟಿದ್ದರು.

ಇದನ್ನೂ ಓದಿ: ‘ಬಳ್ಳಾರಿ ಜೈಲಿಗೆ ದರ್ಶನ್​ ಅಡ್ಜೆಸ್ಟ್​ ಆಗಲೇಬೇಕು’: ಎಸ್​.ಪಿ. ಶೋಭಾರಾಣಿ ಖಡಕ್​ ಮಾತು

ದರ್ಶನ್ ಜೈಲಿನಲ್ಲಿ ಇರುವ ಸಂದರ್ಭದಲ್ಲೇ ‘ಕರಿಯಾ’ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಈ ಮೊದಲು ಥಿಯೇಟರ್​​ನಲ್ಲಿ ಅವರ ನಟನೆಯ ‘ಶಾಸ್ತ್ರೀ’ ಸಿನಿಮಾ ಬಿಡುಗಡೆ ಕಂಡಿತ್ತು. ಮೊದಲ ದಿನ ಮಾತ್ರ ಜನರು ಸಿನಿಮಾ ವೀಕ್ಷಣೆ ಮಾಡಿದ್ದರು. ಎರಡನೇ ದಿನದಿಂದ ಥಿಯೇಟರ್ ಖಾಲಿ ಹೊಡೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.