AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಮಾಡಿಕೊಂಡ ಡೀಲ್ ಏನು?

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್​ಗೆ ರಾಜಾತಿಥ್ಯ ನೀಡಲಾಗುತ್ತಿತ್ತು. ಹೀಗಾಗಿ, ಅವರು ಹಾಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ, ಬಳ್ಳಾರಿ ಜೈಲಿನಲ್ಲಿ ವಿಶೇಷ ಆತಿಥ್ಯಕ್ಕೆ ಬ್ರೇಕ್ ಹಾಕಲಾಗಿದೆ. ಇದು ದರ್ಶನ್​ಗೆ ನುಂಗಲಾರದ ತುತ್ತಾಗಿದೆ. ಬೆಂಗಳೂರಲ್ಲಿ ದರ್ಶನ್ ಹಾಗೂ ನಾಗನ ಮಧ್ಯೆ ಡೀಲ್ ಆಗಿತ್ತು.

ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಮಾಡಿಕೊಂಡ ಡೀಲ್ ಏನು?
Darshan
ಕಿರಣ ಹೆಚ್​. ವಿ.
| Edited By: |

Updated on: Aug 30, 2024 | 9:46 AM

Share

ನಟ ದರ್ಶನ್ ಅವರನ್ನು ಬಳ್ಳಾರಿಗೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರು ಜೈಲಿನಲ್ಲಿ ಅವರಿಗೆ ಸವಲತ್ತು ನೀಡಲಾಗುತ್ತಿದೆ ಎಂಬ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ. ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗನ ನಡುವೆ ಡೀಲ್ ನಡೆದಿತ್ತು ಎನ್ನುವ ವಿಚಾರ ಈಗ ಹೊರಬಿದ್ದಿದೆ. ಈಗ ನಾವು ಹೇಳುತ್ತಿರುವುದು ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗನ ನಡುವಿನ ಒಳ ಒಪ್ಪಂದದ ಸ್ಟೋರಿ.

ವಿಲ್ಸನ್ ಗಾರ್ಡನ್ ನಾಗ ಮತ್ತು ದರ್ಶನ್ ಮಧ್ಯೆ ದೊಡ್ಡ ಮತ್ತಕ್ಕೆ ಇಬ್ಬರ ನಡುವೆ ಡೀಲ್ ಆಗಿತ್ತು. ಆ ಡೀಲ್ ಆಗಿದ್ದಕ್ಕೆ ನಾಗ ಎಲ್ಲವನ್ನೂ ನೋಡಿಕೊಂಡಿದ್ದ. ದರ್ಶನ್ ಕೊಲೆ ಕೇಸ್​ನ ಉಲ್ಟಾ ಮಾಡಲು ದೊಡ್ಡ ಪ್ಲ್ಯಾನ್ ನಡೆಸಲಾಗಿತ್ತಂತೆ. ಈ ಕಾರಣಕ್ಕೆ ನಟೋರಿಯಸ್ ನಾಗನ ಜೊತೆಗೆ ದರ್ಶನ್ ಕುಳಿತಿದ್ದ.

ದರ್ಶನ್ ಹಾಗೂ ನಾಗನ ನಡುವೆ ಆದ ಡೀಲ್ ಪ್ರಕಾರ, ಜೈಲಿನಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ರಾಯಲ್ ಆಗಿ ನೋಡಿಕೊಳ್ಳಲು ಅಧಿಕಾರಿಗಳನ್ನೇ ಡೀಲ್ ಮಾಡುವುದು ಕೂಡ ಇದನ್ನು ಒಳಗೊಂಡಿದೆ. ಬೇಕಾದ ಬಟ್ಟೆ, ಊಟ, ಹಾಸಿಗೆ, ಸಿಗರೇಟ್ ಕೊಡಿಸುವುದು ಒಪ್ಪಂದದಲ್ಲಿ ಇದೆ. ಜೈಲಿನಲ್ಲಿ ಯಾವುದೇ ರೀತಿ ಸಮಸ್ಯೆ ಆಗದದಂತೆ ನೋಡಿಕೊಳ್ಳಲಾಗುತ್ತದೆ. sದರ್ಶನ್ ಜೈಲಿನಿಂದ ಹೊರಗೆ ಬರುವ ತನಕ ಸಂಪೂರ್ಣ ಕೇರ್ ತೆಗೆದುಕೊಳ್ಳಲು ಡೀಲ್ ಆಗಿತ್ತು.

ಜೈಲಿನ ಹೊರಗೂ ಈ ಡೀಲ್​ ಕೆಲಸ ಮಾಡುತ್ತದೆ. ದರ್ಶನ್ ಕೇಸ್​ನಲ್ಲಿ ಸಾಕ್ಷಿಗಳನ್ನು ಬೆದರಿಕೆ ಹಾಕಿಸುವ ಕೆಲಸವೂ ಆಗುತ್ತದೆ. ಸಾಕ್ಷಿಗಳು ಕೊರ್ಟ್​ಗೆ ಬಂದು ಟ್ರಯಲ್​ನಲ್ಲಿ ಭಾಗಿ ಆಗಿಲ್ಲಾ ಎಂದರೆ ಕೇಸ್ ದುರ್ಬಲ ಆಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಹೊಸ ಜೈಲಿಗೆ ಅಡ್ಜಸ್ಟ್ ಆಗದ ದರ್ಶನ್; ರಾತ್ರಿಯೆಲ್ಲ ನಿದ್ದೆ ಇಲ್ಲದೆ ಒದ್ದಾಡಿದ ‘ಕರಿಯ’

ಕೊಲೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಹಣ ನೀಡುವ ಕೆಲಸವೂ ಆಗುತ್ತಿತ್ತು. ಡಿ ಗ್ಯಾಂಗ್ ತಿಂಗಳಿಗೆ 25 ಸಾವಿರ ಹಣ ನೀಡುತ್ತಿತ್ತು. ಸುಮಾರು ಹತ್ತು ಜನ ಆರೋಪಿಗಳಿಗೆ ಹಣ ನೀಡಲಾಗಿದೆ ಎನ್ನಲಾಗಿದೆ. ಅವರು ಮುಂದಿನ ದಿನಗಳಲ್ಲಿ ಸಹ ದರ್ಶನ್ ವಿರುದ್ಧ ನ್ಯಾಯಾಲದಲ್ಲಿ ಹೇಳಿಕೆಗಳನ್ನು ನೀಡದೆ ಇರಿಸಲು ಪ್ಲಾನ್ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!