‘ಬಳ್ಳಾರಿ ಜೈಲಿಗೆ ದರ್ಶನ್ ಅಡ್ಜೆಸ್ಟ್ ಆಗಲೇಬೇಕು’: ಎಸ್.ಪಿ. ಶೋಭಾರಾಣಿ ಖಡಕ್ ಮಾತು
ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೇಟ್ಮೆಂಟ್ ಪಡೆಯುತ್ತಿದ್ದ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಆ ವಾತಾವರಣಕ್ಕೆ ಅವರು ಹೊಂದಿಕೊಳ್ಳಬೇಕು. ಆ ಕುರಿತು ಬಳ್ಳಾರಿ ಎಸ್.ಪಿ. ಶೋಭಾರಾಣಿ ಅವರು ಮಾತನಾಡಿದ್ದಾರೆ. ಇಂದು (ಆಗಸ್ಟ್ 29) ಜೈಲಿಗೆ ಭೇಟಿ ನೀಡಿದ್ದ ಶೋಭಾರಾಣಿ ಅವರು ಬಳಿಕ ಮಾಧ್ಯಮಗಳಿಗೆ ತಮ್ಮ ಹೇಳಿಕೆ ನೀಡಿದರು.
ಬೆಂಗಳೂರಿನ ವಾತಾವರಣಕ್ಕೂ ಬಳ್ಳಾರಿಯ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಆದರೆ ಬಳ್ಳಾರಿಗೆ ದರ್ಶನ್ ಹೊಂದಿಕೊಳ್ಳಲೇಬೇಕು ಎಂದು ಬಳ್ಳಾರಿ ಎಸ್.ಪಿ. ಶೋಭಾರಾಣಿ ಹೇಳಿದ್ದಾರೆ. ಜೈಲಿಗೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ‘ಇಲ್ಲಿಗೆ ಬಂದಮೇಲೆ ಅಡ್ಜೆಸ್ಟ್ ಆಗಲೇಬೇಕು. ನಾವು ಕೂಡ ಹೊರಗಡೆಯಿಂದ ಬಂದವರು’ ಎಂದು ಅವರು ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:15 pm, Thu, 29 August 24