ಸರಸದ ವೇಳೆ ಗೇರ್ಗೆ ತಾಗಿದ ಕಾಲು; ನದಿಯೊಳಗೆ ಬಿದ್ದ ರೇಂಜ್ ರೋವರ್ ಕಾರು
ರೇಂಜ್ ರೋವರ್ ಕಾರಿನೊಳಗೆ ಗಂಡು-ಹೆಣ್ಣು ಸರಸದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಗೇರ್ ಸ್ಟಿಕ್ಗೆ ತಾಗಿದೆ. ಇದರಿಂದ ಚಲಿಸಲಾರಂಭಿಸಿದ ರೇಂಜ್ ರೋವರ್ ಫಿಲಡೆಲ್ಫಿಯಾದಲ್ಲಿ ನದಿಗೆ ಬಿದ್ದಿದೆ. ಪವಾಡವೆಂಬಂತೆ ಅದರೊಳಗಿದ್ದ ದಂಪತಿ ಕಾರಿನಿಂದ ಹೊರಗೆ ಹಾರಿಕೊಂಡಿದ್ದಾರೆ.
ರೇಂಜ್ ರೋವರ್ ಕಾರಿನ ಹಿಂದಿನ ಸೀಟಿಯಲ್ಲಿ ದಂಪತಿ ಪ್ರೇಮ ಸಲ್ಲಾಪದಲ್ಲಿ ತೊಡಗಿದ್ದಾಗ ಅವರ ಕಾಲು ಗೇರ್ ಸ್ಟಿಕ್ಗೆ ತಾಗಿ ಕಾರು ಚಲಿಸತೊಡಗಿತು. ಎದುರಲ್ಲಿದ್ದ ನದಿಯತ್ತ ಕಾರು ನುಗ್ಗುತ್ತಿದ್ದಾಗ ಆ ದಂಪತಿ ಕಾರಿನಿಂದ ಜಂಪ್ ಮಾಡಿದ್ದಾರೆ. ಆ ಕಾರು ನದಿಯೊಳಗೆ ಬಿದ್ದಿದೆ. ಈ ಘಟನೆ ನಡೆದಿರುವುದು ಭಾರತದಲ್ಲಲ್ಲ. ಫಿಲಡೆಲ್ಫಿಯಾ ನದಿಯೊಳಗೆ ಬಿದ್ದ ಕಾರನ್ನು ಕ್ರೇನ್ ಮೂಲಕ ಎತ್ತಲಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos