AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರಿನಲ್ಲಿ ಪತ್ನಿ, ಅಜ್ಜಿ ಜೋಡಿ ಕೊಲೆ ಪ್ರಕರಣಕ್ಕೆ ಟ್ವೀಸ್ಟ್​! ಪೊಲೀಸ್ ತನಿಖೆ ವೇಳೆ ಬಯಲಾಯ್ತು ಹತ್ಯೆಯ ಸತ್ಯಾಂಶ

ಗಡಿ ಜಿಲ್ಲೆ ರಾಯಚೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವೀಸ್ಟ್ ಸಿಕ್ಕಿದೆ. ಪತ್ನಿ ಹಾಗೂ ಅಜ್ಜಿಯ ರಕ್ತ ಹರಿಸಿದ್ದ ರಾಕ್ಷಸ ಪತಿ, ಕುಟುಂಬಸ್ಥರಲ್ಲಿ ತಾನು ಒಳ್ಳೆಯವನು ಎಂದು ತೋರಿಸಿಕೊಳ್ಳಲು ಪೊಲೀಸರೆದುರು ಸತ್ತು ಹೋದ ಪತ್ನಿ ವಿರುದ್ಧವೇ ಗೂಬೆ ಕೂರಿಸಲು ಯತ್ನಿಸಿದ್ದ. ಆದ್ರೆ, ಖಾಕಿ ತನಿಖೆ ವೇಳೆ ಎಲ್ಲವೂ ರಿವೀಲ್ ಆಗಿದೆ.

ರಾಯಚೂರಿನಲ್ಲಿ ಪತ್ನಿ, ಅಜ್ಜಿ ಜೋಡಿ ಕೊಲೆ ಪ್ರಕರಣಕ್ಕೆ ಟ್ವೀಸ್ಟ್​! ಪೊಲೀಸ್ ತನಿಖೆ ವೇಳೆ ಬಯಲಾಯ್ತು ಹತ್ಯೆಯ ಸತ್ಯಾಂಶ
ರಾಯಚೂರಿನಲ್ಲಿ ಪತ್ನಿ, ಅಜ್ಜಿ ಜೋಡಿ ಕೊಲೆ ಪ್ರಕರಣಕ್ಕೆ ಟ್ವೀಸ್ಟ್
ಭೀಮೇಶ್​​ ಪೂಜಾರ್
| Edited By: |

Updated on: Aug 25, 2024 | 4:02 PM

Share

ರಾಯಚೂರು, ಆ.25: ಇದೇ ಆಗಸ್ಟ್ ​23ರ ನಸುಕಿನಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರು(Lingasugur) ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ಘನಘೋರ ಘಟನೆ ನಡೆದಿತ್ತು. ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿರುವ ಕ್ವಾರ್ಟರ್ಸ್​​ನಲ್ಲಿ ದುರ್ಗಪ್ಪ ಎಂಬಾತ, ಪತ್ನಿ ಜ್ಯೋತಿ ಹಾಗೂ ಆತನ ಅಜ್ಜಿ ದ್ಯಾಮವ್ವಳನ್ನ ಭೀಕರವಾಗಿ ಕೊಲೆ ಮಾಡಿದ್ದ.ಬಳಿಕ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದ್ರೆ, ಹಂತಕ ಮಾತ್ರ ತನ್ನದೇ ಭ್ರಮಾ ಲೋಕದಲ್ಲಿದ್ದ. ವಿಚಾರಣೆ ವೇಳೆ ಥೇಟ್ ಸೈಕೋ ರೀತಿಯಲ್ಲಿ ವರ್ತಿಸುತ್ತಿದ್ದನಂತೆ. ಮುದಗಲ್ ಪೊಲೀಸರ ತನಿಖೆ ವೇಳೆ ತಾನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡಿದ್ದ ಆತ, ಪತ್ನಿ ಮೇಲೆ ಅನುಮಾವಿತ್ತು. ಹೀಗಾಗಿ ಆಕೆಯನ್ನ ಕೊಂದು ಹಾಕಿದೆ. ಆಗ ಬಿಡಿಸಲು ಬಂದ ಅಜ್ಜಿಯನ್ನು ಮುಗಿಸಿಬಿಟ್ಟೆ ಎಂದು ಹೇಳಿಕೆ ಕೊಟ್ಟಿದ್ದ.

ಆರೋಪಿ ದುರ್ಗಪ್ಪ ಪತ್ನಿ ಮೇಲಿನ ಸಂಶಯಕ್ಕೆ ಹತ್ಯೆಗೈದಿದ್ದೇನೆ ಎಂದು ಹೇಳಿಕೆ ಕೊಟ್ಟ ಬಳಿಕ ಮುದಗಲ್ ಪೊಲೀಸರು ಅಲರ್ಟ್ ಆಗಿದ್ದರು. ನಂತರ ವಿವಿಧ ಆಯಾಮಗಳಲ್ಲಿ ವಿಚಾರಣೆ ಶುರು ಮಾಡಿ, ಅಷ್ಟಕ್ಕೂ ದುರ್ಗಪ್ಪ ಪತ್ನಿ ಮೇಲೆ ಅನುಮಾನ ಪಟ್ಟಿದ್ದರ ಹಿಂದಿರುವ ವ್ಯಕ್ತಿ ಯಾರೂ ಎನ್ನುವುದರ ಬಗ್ಗೆ ತನಿಖೆ ನಡೆಸಿದರು. ದುರ್ಗಪ್ಪನ ಸಹೋದ್ಯೋಗಿಗಳು,ಆತನ ಸ್ನೇಹಿತರು, ಕುಟುಂಬಸ್ಥರು ಹೀಗೆ ಹಲವರಿಂದ ಮಾಹಿತಿ ಪಡೆದರು. ಆದ್ರೆ, ಅಮಾಯಕ ಪತ್ನಿ ಜ್ಯೋತಿ ವಿರುದ್ಧ ಯಾವುದೇ ಒಂದೇ ಒಂದು ಸಾಕ್ಷ್ಯ ಸಿಕ್ಕಿರ್ಲಿಲ್ಲ. ಒಬ್ಬರು ಕೂಡ ಆಕೆ ವಿರುದ್ಧ ಮಾತನಾಡಿರಲಿಲ್ಲ.

ಇದನ್ನೂ ಓದಿ:ರಾಯಚೂರಿನಲ್ಲಿ ಮಕ್ಕಳ ಎದುರೇ ಹೆಂಡತಿ, ಅಜ್ಜಿಯನ್ನ ಕೊಚ್ಚಿ ಕೊಂದ! ಕಾರಣ?

ಆಗಲೇ ಪೊಲೀಸರಿಗೆ ಆರೋಪಿ ದುರ್ಗಪ್ಪ ಕೊಲೆ ಮಾಡಿದ ಬಳಿಕ ಅದನ್ನ ಸಮರ್ಥನೆ ಮಾಡಿಕೊಳ್ಳೋಕೆ ಹೀಗೆ ಸುಳ್ಳು ಹೇಳಿಕೆ ಕೊಟ್ಟಿರುವುದು ಗೊತ್ತಾಗಿತ್ತು. ಕುಟುಂಬಸ್ಥರಲ್ಲಿ ತಾನು ಸಾಚಾ, ತನ್ನದೇನು ತಪ್ಪಿಲ್ಲ. ತಾನೂ ಅಮಾಯಕ ಎನ್ನುವ ಪಟ್ಟ ಗಿಟ್ಟಿಸಿಕೊಳ್ಳಲು ಸತ್ತು ಹೋದ ಪತ್ನಿ ಚಾರಿತ್ರ್ಯವನ್ನ ಹಾಳು ಮಾಡಲು ಯತ್ನಿಸಿದ್ದ ಎನ್ನುವುದು ಗೊತ್ತಾಗಿದೆ. ಆದ್ರೆ, ಜೋಡಿ ಕೊಲೆ ಮಾಡಿದ್ದಕ್ಕೆ ಕಾರಣವೇ ಆತನ ಮಾನಸಿಕ ಸ್ಥಿತಿ, ಸೈಕೊ ರೀತಿಯ ವರ್ತನೆ. ಹೌದು, ಪೂರ್ತಿಯಾಗಿ ಮದ್ಯಪಾನಕ್ಕೆ ದಾಸನಾಗಿದ್ದ ದುರ್ಗಪ್ಪ, ಒಮ್ಮೊಮ್ಮೆ ತಾಳ್ಮೆ ಕಳೆದುಕೊಂಡು ಸೈಕೋ ರೀತಿ ವರ್ತಿಸುತ್ತಿದ್ದ. ಕಣ್ಣು ನೆಟ್ಟಗೆ ಮಾಡಿಕೊಂಡು ಬಿದ್ದು, ಗಲಾಟೆ ಮಾಡ್ತಿದ್ದ. ಅದೇ ರೀತಿ ಘಟನಾ ದಿನ ತನ್ನನ್ನ ಸಮಾಧಾನ ಪಡಿಸಲು ಹೋಗಿದ್ದ ಪತ್ನಿಯನ್ನ ಕೊಂದು, ಜಗಳ ಬಿಡಿಸಲು ಬಂದಿದ್ದ ಅಜ್ಜಿಯನ್ನೂ ಕೊಂದಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆದ್ರೆ, ತಾನೂ ಬಚಾವಾಗಲು ಸತ್ತು ಹೋದ ಪತ್ನಿ ವಿರುದ್ಧ ಸುಳ್ಳು ಆರೋಪ ಮಾಡಿದ್ದು ದುರಂತವೇ ಸರಿ. ಇತ್ತ ತಂದೆ-ತಾಯಿ ಇಲ್ಲದೇ ಈ ದಂಪತಿ ಮಕ್ಕಳೀಗ ಅಕ್ಷರಶಃ ಅನಾಥವಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ