ದರ್ಶನ್ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಿರುವ ಬಳ್ಳಾರಿ ಜೈಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್

ದರ್ಶನ್ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಿರುವ ಬಳ್ಳಾರಿ ಜೈಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 29, 2024 | 8:27 PM

ಬಳ್ಳಾರಿ ಸೆಂಟ್ರಲ್ ಜೈಲಿನ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್, ದರ್ಶನ್ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ. ಬೆಂಗಳೂರು ಸೆಂಟ್ರಲ್ ಜೈಲಿನ 9 ಅಧಿಕಾರಿಗಳು ಸಸ್ಪೆಂಡ್ ಆಗಿರುವುದು ಅವರಿಗೆ ಚೆನ್ನಾಗಿ ಗೊತ್ತಿದೆ, ಯಾವುದೇ ಲೋಪ ಜರುಗಿದರೆ ನೌಕರಿಗೆ ಕುತ್ತು!

ಬಳ್ಳಾರಿ: ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಿದ ಬಳಿಕ ಎಲ್ಲೆಡೆ ಈ ಜೈಲಿನ ಚರ್ಚೆ ನಡೆಯುತ್ತಿದೆ. ಇಂದು ಸಾಯಂಕಾಲ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಡಾ ಶೋಭಾರಾಣಿ ಜೈಲಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು, ದರ್ಶನ್ ರನ್ನು ಇರಿಸಿರುವ ಹೈ ಸೆಕ್ಯುರಿಟಿ ಸೆಲ್ ಅನ್ನು ಸಹ ಪರಿಶೀಲಿಸಿದ ಶೋಭಾರಾಣಿ ಸೆಲ್ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದರ್ಶನ್ ತೂಗುದೀಪ: ಬಳ್ಳಾರಿ ಜೈಲಲ್ಲಿ ಹಸ್ತಲಾಘವಕ್ಕಾಗಿ ದರ್ಶನ್ ಕೈ ಚಾಚಿದಾಗ ಅಧಿಕಾರಿಯೊಬ್ಬರು ‘ನೋ’ ಅಂದರು!