ದರ್ಶನ್ ತೂಗುದೀಪ: ಬಳ್ಳಾರಿ ಜೈಲಲ್ಲಿ ಹಸ್ತಲಾಘವಕ್ಕಾಗಿ ದರ್ಶನ್ ಕೈ ಚಾಚಿದಾಗ ಅಧಿಕಾರಿಯೊಬ್ಬರು ‘ನೋ’ ಅಂದರು!
ದರ್ಶನ್ ತೂಗುದೀಪ: ಪೊಲೀಸ್ ಅಧಿಕಾರಿ ಹಸ್ತಲಾಘವ ನಿರಾಕರಿಸಿದಾಗ ದರ್ಶನ್ ಬೇಸರಿಸಿಕೊಳ್ಳದೆ ಮುಗುಳ್ನಗುತ್ತಾರೆ ಮತ್ತು ವಾಪಸ್ಸು ಹೋಗುತ್ತಿದ್ದ ಅಧಿಕಾರಿಯನ್ನೊಮ್ಮೆ ತಿರುಗಿ ನೋಡುತ್ತಾರೆ. ಈ ಜೈಲಿನಲ್ಲಿ ತನ್ನ ಬದುಕು ಹೇಗೆ ಸಾಗಲಿದೆ ಅಂತ ಅವರು ಅರ್ಥ ಮಾಡಿಕೊಂಡಿರಲಿಕ್ಕೂ ಸಾಕು.
ಬಳ್ಳಾರಿ: ಸುಮಾರು 14 ದಶಕಗಳ ಇತಿಹಾಸವಿರುವ ಬಳ್ಳಾರಿ ಕೇಂದ್ರೀಯ ಕಾರಾಗೃಹ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಸೆಂಟ್ರಲ್ ಜೈಲುಗಳಿಗಿಂತ ಭಿನ್ನ ಅಂತ ಗೊತ್ತಾಗಲು ಇದೊಂದು ಸನ್ನಿವೇಶ ಸಾಕು. ದರ್ಶನ್ ನಿಸ್ಸಂದೇಹವಾಗಿ ಸೆಲಿಬ್ರಿಟಿ, ಅವರು ತಾವಾಗಿಯೇ ಕೈಕುಲುಕಲು ಮುಂದಾದಾಗ ಯಾರು ತಾನೆ ನಿರಾಕರಿಸಿಯಾರು? ಅದರೆ, ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ಅಧಿಕಾರಿಯೊಬ್ಬರು ದರ್ಶನ್ ಹಸ್ತಲಾಘವಕ್ಕಾಗಿ ಕೈ ಮುಂದೆ ಚಾಚಿದಾಗ ಹ್ಯಾಂಡ್ ಶೇಕ್ ಮಾಡಲು ನಿರಾಕರಿಸಿ ಪೊಲೀಸರ ಗುಂಪಿನಿಂದ ವಾಪಸ್ಸು ಬಂದು ಬಿಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ ಸ್ನೇಹಿತ ಪ್ರದೋಷ್ ತಂದಿದ್ದ ವಸ್ತುಗಳ ಇಂಚಿಂಚೂ ತಪಾಸಣೆ ಮಾಡಿದ ಪೊಲೀಸ್
Latest Videos