ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಬೆಂಗಳೂರು ನಗರದಲ್ಲಿ ಮಧ್ಯಾಹ್ನ ಸುರಿಯಲಾರಂಭಿಸಿದ ಮಳೆ
ಶಾಲೆಗಳ ಸಮಯ ಮುಗಿಯುವಾಗ ಮಳೆ ಸುರಿಯಲು ಆರಂಭಿಸಿದ ಕಾರಣ ಮಕ್ಕಳು ಮನೆಗಳಿಗೆ ಹೋಗಲು ಪರದಾಡುವ ಸ್ಥಿತಿ ನಗರದಲ್ಲಿ ನಿರ್ಮಾಣವಾಯಿತು. ಶಾಲಾ ಬಸ್ ಗಳಲ್ಲಿ ಮನೆಗೆ ಹೋಗುವ ಮಕ್ಕಳೇನೋ ಸೇಫಾಗಿ ಹೋಗಿಬಿಡುತ್ತಾರೆ. ಆದರೆ ಬಸ್ ಗಳನ್ನು ಆಶ್ರಯಿಸಿಕೊಳ್ಳುವ ಮಕ್ಕಳಿಗೆ ಸಮಸ್ಯೆ ಉಂಟಾಯಿತು
ಬೆಂಗಳೂರು: ಕೆಲ ದಿನಗಳಿಂದ ನಗರದಲ್ಲಿ ಕಾಣೆಯಾಗಿದ್ದ ಮಳೆ ಇವತ್ತು ಮಧ್ಯಾಹ್ನ ದಿಢೀರನೆ ಸುರಿಯಲಾರಂಭಿಸಿತು. ನಮ್ಮ ವರದಿಗಾರ ಬಿಬಿಎಂಪಿ ಮುಂಭಾಗದಲ್ಲಿ ನಿಂತು ಕಾರ್ಪೋರೇಶನ್ ಸರ್ಕಲ್ ನಲ್ಲಿ ಕಂಡ ಮಳೆ ದೃಶ್ಯದ ವಿವರಣೆ ನೀಡಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಮತ್ತು ಚಂಡಮಾರುತದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವಾರು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ವರುಣನ ಅಬ್ಬರ: ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಟ
Latest Videos