AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ಜನರ ಮುದ್ದಿನ ಹೆಂಡ್ತಿ: ಜೆಡಿಎಸ್ ಕಾರ್ಯಾಧ್ಯಕ್ಷೆಯ ಕರಾಳ ಮುಖವಾಡ ಬಯಲು!

ತಬುಸುಮ್ ತಾಜ್ (40), ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ. ಒಂದು ರಾಜಕೀಯ ಪಕ್ಷದ ಉನ್ನತ ಹುದ್ದೆಯಲ್ಲಿದ್ದುಕೊಂಡು ಈಕೆ ಮಾಡುವ ಕೆಲಸ ಅಬ್ಬಬ್ಬಾ...ಈಕೆ ಒಂದಲ್ಲ ಎರಡಲ್ಲ ಬರೋಬ್ಬರಿ 8 ಜನರ ಮುದ್ದಿನ ಹೆಂಡ್ತಿ. ಹೆಂಡ್ತಿ ಬಿಟ್ಟ ಶ್ರೀಮಂತ ಗಂಡಸರೇ ಈಕೆಯ ಟಾರ್ಗೆಟ್​. ಹೀಗೆ ಈ ಖತರ್ನಾಕ್ ಲೇಡಿ ಮದ್ವೆ ನೆಪದಲ್ಲಿ 8 ಮದುವೆಯಾಗಿ ಕೋಟಿ ಕೋಟಿ ವಂಚನೆ ಮಾಡಿರುವುದು ಬಟಾಬಯಲಾಗಿದೆ.

8 ಜನರ ಮುದ್ದಿನ ಹೆಂಡ್ತಿ: ಜೆಡಿಎಸ್ ಕಾರ್ಯಾಧ್ಯಕ್ಷೆಯ ಕರಾಳ ಮುಖವಾಡ ಬಯಲು!
ಹೀನಾ
ವಿನಾಯಕ ಬಡಿಗೇರ್​
| Updated By: ರಮೇಶ್ ಬಿ. ಜವಳಗೇರಾ|

Updated on: Aug 30, 2024 | 10:12 PM

Share

ಬಳ್ಳಾರಿ, (ಆಗಸ್ಟ್ 30): ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಹೇಳಿಕೊಂಡು ಹಲವರನ್ನು ಮದುವೆಯಾಗಿ ವಂಚಿಸಿದ (Fraud Case) ಪ್ರಕರಣ ಬಳ್ಳಾರಿಯಲ್ಲಿ (Bellary) ನಡೆದಿದೆ. ಅಲ್ಲದೇ ಹಲವಾರು ಜನರಿಗೆ ಲೋನ್ ಕೊಡಿಸುವುದಾಗಿ ಮಹಿಳೆ ಕೋಟಿ ಕೋಟಿ ರೂ. ವಂಚಿಸಿದ್ದಾಳೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೇ ಉಡುಪಿ ನಿವಾಸಿ ತಬುಸುಮ್ ತಾಜ್ (40) ಎಂಬಾಕೆ ಇದುವರೆಗೂ 8 ಜನರನ್ನು ಮದುವೆಯಾಗಿ ವಂಚಿಸಿದ್ದಾಳೆ. ಮದುವೆಯಾಗಿ ಹೆಂಡತಿಯಿಂದ ಅಂತರ ಕಾಯ್ದುಕೊಂಡ ಶ್ರೀಮಂತ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡುವ ಈಕೆ ಈ ವರೆಗೆ ಎಂಟು ಮದ್ವೆಯಾಗಿದ್ದಾಳೆ. ಈ ಬಗ್ಗೆ ದಾಖಲೆಗಳು ಸಹ ಸಿಕ್ಕಿವೆ. ಇನ್ನು ದಾಖಲೆಗಳಿಲ್ಲದೇ ಇನ್ನೆಷ್ಟು ಮದುವೆ ಮಾಡಿಕೊಂಡು ವಂಚಿಸಿದ್ದಾಳೋ ಎನ್ನುವ ಅನುಮಾನ ಶುರುವಾಗಿದೆ.

ಹೀನಾ ಎಂಟರ್​ಪ್ರೈಸಸ್ ಎಂಬ ಆಫೀಸ್ ಮಾಡಿಕೊಂಡು ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಕೊಡಿಸುತ್ತೇನೆ ಎಂದು ಕಚೇರಿ ಮಾಡಿಕೊಂಡಿದ್ದಳು. 18 ವರ್ಷದಿಂದ ಇದನ್ನೇ ಬ್ಯುಸಿನೆಸ್ ಮಾಡಿಕೊಂಡಿದ್ದಳು. ಅಲ್ಲದೇ ಯು.ಟಿ. ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ. ಅದನ್ನ ವೈಟ್ ಮಾಡಲು ಈ ಬ್ಯುಸಿನೆಸ್ ಮಾಡುತ್ತಿದ್ದೇವೆ ಎಂದು ಜನರನ್ನು ನಂಬಿಸಿದ್ದಳು.

ಇದನ್ನೂ ಓದಿ: ಸಿಬ್ಬಂದಿಗೆ ಯುವತಿ ಹನಿಟ್ರ್ಯಾಪ್: ಪಾಕ್​ಗೆ ರವಾನೆಯಾಯ್ತಾ ಕಾರವಾರ ನೌಕಾನೆಲೆ ಮಾಹಿತಿ?

ಅಲ್ಲದೇ 1 ಕೋಟಿ ರೂ. ಲೋನ್ ಬೇಕಾದರೆ 15 ಲಕ್ಷ ರೂ. ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಳು. 10 ದಿನದಲ್ಲಿ ಲೋನ್ ಕೊಡಲಾಗುತ್ತೆ ಎಂದು ಭರವಸೆ ನೀಡಿ ವಂಚನೆ ಮಾಡುತ್ತಿದ್ದಳು. ತುಮಕೂರು, ಭದ್ರಾವತಿ, ಶಿವಮೊಗ್ಗ, ಮಂಗಳೂರು, ಉಡುಪಿ, ಮಣಿಪಾಲ, ಕಾಪು, ವಿಜಯನಗರ ಜಿಲ್ಲೆಯ ಹಡಗಲಿ, ಹೊಸಪೇಟೆ ಬಡಾವಣೆ, ಹೊಸಪೇಟೆ ಶಹರ ಠಾಣೆಯಲ್ಲಿ ‌ ಚೆಕ್ ಬೌನ್ಸ್ ಪ್ರಕರಣ ದಾಖಲು, 2022ರಲ್ಲಿ 4 ತಿಂಗಳಲ್ಲಿ ವಂಚನೆ, ಹಡಗಲಿ ಭಾಗದಲ್ಲಿ 3 ಕೋಟಿ ಲೋನ್ ಕೊಡಿಸುತ್ತೇನೆ ಎಂದು ವಂಚನೆ, ವಿಜಯನಗರ ಜಿಲ್ಲೆಯೊಂದರಲ್ಲಿ 40 ಲಕ್ಷಕ್ಕೂ‌ ಅಧಿಕ ಹಣ ಪಂಗನಾಮ. ಹೀಗೆ ಈಕೆ ರಾಜ್ಯಾದ್ಯಂತ 38 ಕೋಟಿ ರೂ.ಗೂ ಅಧಿಕ ಹಣವನ್ನು ಸಾವಿರಾರು ಜನರಿಗೆ ಮೋಸ ಮಾಡಿದ್ದಾಳೆ ಎಂಬುದು ತಿಳಿದು ಬಂದಿದೆ.

ಇನ್ನು ಕ್ರಿಮಿನಲ್ ಲಾಯರ್ ಮೂಲಕ ದುಡ್ಡು ವಾಪಸ್ ಕೇಳುವವರಿಗೆ ಕೇಸ್ ದಾಖಲಿಸುವ ಭಯ ಹುಟ್ಟಿಸುತ್ತಿದ್ದಳು. ಅಲ್ಲದೇ ಚೆಕ್ ಬರೆಸಿಕೊಂಡು ಚೆಕ್ ಬೌನ್ಸ್ ಕೇಸ್ ದಾಖಲಿಸುವ ಬೆದರಿಕೆಯನ್ನು ಹಾಕಿದ್ದಳು ಎನ್ನುವ ಆರೋಪ ಕೇಳಿಬಂದಿದೆ. ಈಕೆಯ ವಂಚನೆಯ ವಿಚಾರ ತಿಳಿದ ಮೇಲೆ 6ನೇ ಗಂಡ ರಾಜಾಹುಸೇನ್ ಮಹಿಳೆಯನ್ನು ಪ್ರಶ್ನಿಸಿದ್ದು, ಆತನ ಮೇಲೂ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಾಳೆ. ಈಗ ಈ ಮಹಿಳೆಯ ಮೇಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂಚನೆ ಕೇಸ್ ದಾಖಲಾಗಿರುವುದು ಬೆಳಕಿಗೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.