AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಬ್ಬಂದಿಗೆ ಯುವತಿ ಹನಿಟ್ರ್ಯಾಪ್: ಪಾಕ್​ಗೆ ರವಾನೆಯಾಯ್ತಾ ಕಾರವಾರ ನೌಕಾನೆಲೆ ಮಾಹಿತಿ?

ಭಾರತದ ಭದ್ರತೆಯ ಬಗ್ಗೆ ಪದೆ ಪದೆ ಮಾಹಿತಿ ಕಲೆ ಹಾಕಿ ಭಯೋತ್ಪಾದನಾ ಚಟುವಟಿಕೆಗೆ ಪುಷ್ಠಿ ಕೊಡುತ್ತಿದ್ದ ಪಾಕಿಸ್ತಾನ ಈಗ, ಸಾಮಾನ್ಯ ಕೂಲಿ ಕಾರ್ಮಿಕರನ್ನು ಟಾರ್ಗೇಟ್ ಮಾಡುವುದರ ಮೂಲಕ, ಹುಡುಗಿಯ ಸೊಗಿನಲ್ಲಿ ಅಮಾಯಕ ಯುವಕರನ್ನು ಖೆಡ್ಡಾಗೆ ಬಿಳಿಸಿ ಮಾಹಿತಿ ಕಲೆ ಹಾಕುವ ಖತರ್ನಾಕ್ ಜಾಲ ಒಂದು ಬಹಿರಂಗಗೊಂಡಿದೆ. ಸದ್ಯ ಎನ್​ಐಎ ತಂಡದಿಂದ ತನಿಖೆ ಮುಂದುವರೆದಿದ್ದು, ಈ ಕುರಿತ ವರದಿ ಇಲ್ಲಿದೆ ನೋಡಿ.

ಸಿಬ್ಬಂದಿಗೆ ಯುವತಿ ಹನಿಟ್ರ್ಯಾಪ್: ಪಾಕ್​ಗೆ ರವಾನೆಯಾಯ್ತಾ ಕಾರವಾರ ನೌಕಾನೆಲೆ ಮಾಹಿತಿ?
ಕಾರವಾರ ನೌಕಾನೆಲೆ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Aug 30, 2024 | 8:20 PM

Share

ಬೆಂಗಳೂರು, (ಆಗಸ್ಟ್ 30): ದೇಶದ ಭದ್ರತೆ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ತನ್ನ ಶಕ್ತಿಯನ್ನು ಬಳಸಿ ಹೊಸ ಅನ್ವೇಷಣೆಗಳಿಗೆ ಭಾರತ ಹೆಜ್ಜೆ ಇಡುತ್ತಿರುವ ಬೆನ್ನಲ್ಲೇ, ಪಕ್ಕದ ಪಾಕಿಸ್ತಾನ ಮಾತ್ರ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದೆ. ಭಾರತದ ಭದ್ರತೆ ಹಾಗೂ ಅಭಿವೃದ್ಧಿಗೆ ಅಡ್ಡಿ ಮಾಡುವ ಪಾಕ್​ನ ಎಲ್ಲಾ ಕುತಂತ್ರ ಆಗಾಗ ಬಯಲಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ಕಾರವಾರದ ನೌಕಾ ನೆಲೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರನ್ನು ಟಾರ್ಗೇಟ್ ಮಾಡಿ, ನೌಕಾ ನೆಲೆಯ ಕುರಿತು ಅವರಿಂದ ಮಾಹಿತಿ ಕಲೆ ಹಾಕುವ ಖತರ್ನಾಕ ಐಡಿಯಾ ಒಂದು ಬೆಳಕಿಗೆ ಬಂದಿದೆ.

ದೇಶದ ಭದ್ರತೆಯ, ಗೌಪ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನೆ ಆಗ್ತಿತ್ತು ಅನ್ನೋ ಬೆಚ್ಚಿ ಬೀಳಿಸೋ ಮಾಹಿತಿ ಹೊರ ಬಿದ್ದಿದೆ. ಅದು ಕೂಡಾ ಕಾರವಾರದ ನೌಕಾನೆಲೆಯಿಂದ ಎನ್ನುವುದುಆಘಾತಕಾರಿ ಸಂಗತಿ. ಎನ್​ಐಎ ತನಿಖೆಯಲ್ಲಿ ಹನಿಟ್ರ್ಯಾಪ್ ಸ್ಫೋಟಕ ಸಂಗತಿ ಬಯಲಾಗಿದೆ. ಹನಿಟ್ರ್ಯಾಪ್ ಮಾಡಿ ಪಾಕಿಸ್ತಾನ ಏಜೆಂಟ್​ನ ಯುವತಿಯೊಬ್ಬಳು ಮಾಹಿತಿ ಕಲೆ ಹಾಕಿದ್ದಾಳೆ ಎನ್ನಲಾಗಿದೆ. ಫೇಸ್​ಬುಕ್​ ಮೂಲಕ ಕಾರವಾರ ನೌಕಾನೆಲೆ ಕಾರ್ಮಿಕರಿಗೆ ಯುವತಿ ಗಾಳ ಹಾಕಿದ್ದಳು. ಉತ್ತರ ಕನ್ನಡ ಜಿಲ್ಲೆ ಮುದಗಾ ಗ್ರಾಮದ ವೇತನ್ ತಾಂಡೇಲ್​, ತೋಡೂರಿನ ಸುನೀಲ್, ಹಳವಳ್ಳಿಯ ಅಕ್ಷಯ್ ನಾಯ್ಕ್​ ಯುವತಿಯ ಜಾಲಕ್ಕೆ ಬಿದ್ದಿದ್ರು. ಇವರಿಗೆ ಆ ಪಾಕ್​ ಯುವತಿ ತಾನು ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ಲು ಎನ್ನಲಾಗಿದೆ.

ಇದನ್ನೂ ಓದಿ: ಕಾರವಾರ: ಸೀಬರ್ಡ್ ನೌಕಾನೆಲೆ ಫೋಟೋ, ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಮೂವರು ಎನ್​ಐಎ ವಶಕ್ಕೆ

ಪಾಕ್​ ಏಜೆಂಟ್ ‘ಹನಿ’ಜಾಲಕ್ಕೆ ಕಾರ್ಮಿಕರು!

ಎನ್​ಐಎ ತನಿಖೆಯಲ್ಲಿ ಹನಿಟ್ರ್ಯಾಪ್ ಸ್ಫೋಟಕ ಸಂಗತಿ ಬಯಲಾಗಿದೆ. ಹನಿಟ್ರ್ಯಾಪ್ ಮಾಡಿ ಪಾಕಿಸ್ತಾನ ಏಜೆಂಟ್​ನ ಯುವತಿಯೊಬ್ಬಳು ಮಾಹಿತಿ ಕಲೆ ಹಾಕಿದ್ದಾಳೆ ಎನ್ನಲಾಗಿದೆ. ಫೇಸ್​ಬುಕ್​ ಮೂಲಕ ಕಾರವಾರ ನೌಕಾನೆಲೆ ಕಾರ್ಮಿಕರಿಗೆ ಯುವತಿ ಗಾಳ ಹಾಕಿದ್ದಳು. ಉತ್ತರ ಕನ್ನಡ ಜಿಲ್ಲೆ ಮುದಗಾ ಗ್ರಾಮದ ವೇತನ್ ತಾಂಡೇಲ್​, ತೋಡೂರಿನ ಸುನೀಲ್, ಹಳವಳ್ಳಿಯ ಅಕ್ಷಯ್ ನಾಯ್ಕ್​ ಯುವತಿಯ ಜಾಲಕ್ಕೆ ಬಿದ್ದಿದ್ರು. ಇವರಿಗೆ ಆ ಪಾಕ್​ ಯುವತಿ ತಾನು ಮರೈನ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ಲು ಎನ್ನಲಾಗಿದೆ.

ನೌಕಾನೆಲೆಯಲ್ಲಿ ಆಗುತ್ತಿದ್ದ ಕೆಲಸಗಳ ಬಗ್ಗೆ , ಯುದ್ಧನೌಕೆಗಳ ಬಗ್ಗೆ ಹಾಗೂ ನೌಕೆಗಳ ಬಣ್ಣ, ಆಗಮನ, ನಿರ್ಗಮನ ಸೇರಿದಂತೆ ಮತ್ತು ಭದ್ರತೆ ಕುರಿತು ಮಾಹಿತಿ ಪಡೆದಿದ್ದಳಂತೆ. ಈ ಮೂವರು ಮಾಹಿತಿ ನೀಡಿದ್ದಕ್ಕೆ 8 ತಿಂಗಳ ಕಾಲ ತಲಾ 5000 ರೂಪಾಯಿಯನ್ನೂ ನೀಡಿದ್ದಳಂತೆ.

ಈ ಹನಿಟ್ರ್ಯಾಪ್ ವಿಚಾರ ಹೊರಗೆ ಬಂದಿದ್ದೇ ರೋಚಕ

NIA ಅಧಿಕಾರಿಗಳು 2023ರಲ್ಲಿ ವಿಶಾಖಪಟ್ಟಣದಲ್ಲಿ ದೀಪಕ್ ಅನ್ನೋನ ಗ್ಯಾಂಗ್​ಅನ್ನ ಅರೆಸ್ಟ್ ಮಾಡಿತ್ತು. ದೀಪಕ್​ ಬಂಧನದ ಬಳಿಕ ಹನಿಟ್ರ್ಯಾಪ್ ಮಾಹಿತಿ ಬಯಲಾಗಿತ್ತು. ಅದ್ಹೇಗೆ ಅಂದ್ರೆ, ದೀಪಕ್​ಗೆ ಯಾವ ಖಾತೆಯಿಂದ ಹಣ ಜಮೆ ಆಗ್ತಿತ್ತೋ, ಅದೇ ಖಾತೆಯಿಂದ ಕಾರವಾರದ ವೇತನ್, ಅಕ್ಷಯ್, ಸುನಿಲ್ ಖಾತೆಗೆ ಹಣ ಜಮೆ ಆಗ್ತಿತ್ತು. ದೀಪಕ್ ಅರೆಸ್ಟ್ ಆದ್ಮೇಲೆ ಇವರ ಖಾತೆಗೆ ಹಣ ಜಮೆ ಆಗೋದು ಬಂದ್ ಆಗಿತ್ತು. ಈ ಮಾಹಿತಿ ಪಡೆದು, ಎರಡು ದಿನಗಳ ಹಿಂದೆ ಬೆಂಗಳೂರು ಮತ್ತು ಹೈದ್ರಾಬಾದ್​ನ NIA ತಂಡ ಕಾರವಾರಕ್ಕೆ ಬಂದು ಸುನೀಲ್ ನಾಯಕ್, ವೇತನ್ ತಾಂಡೆಲ್ ಮತ್ತು ಅಕ್ಷಯ್ ನಾಯ್ಕ್ ನನ್ನು ಗೌಪ್ಯ ಸ್ಥಳಕ್ಕೆ ಕರೆದೊಯ್ದು ಪ್ರತ್ಯೇಕವಾಗಿ ವಿಚಾರಣೆ ಮಾಡಿದ್ದಾರೆ.

ಇನ್ನೂ ಎರಡು ದಿನಗಳ ಅಂತರದಲ್ಲಿ ಮೂವರನ್ನು ಬೇರೆ ದಿನಾಂಕದಂದು ಹೈದ್ರಾಬಾದ್ ಎನ್ ಐ ಎ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಏನೇ ಹೇಳಿ, ಬಡ ಕಾರ್ಮಿಕರ ಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ದೇಶದ ಭದ್ರತೆ ಧಕ್ಕೆ ತರೋ ಪಾಕಿಸ್ತಾನದ ಕುತಂತ್ರ ಬಯಲಾಗಿದೆ. ತನಿಖೆಯಲ್ಲಿ ಇನ್ನಷ್ಟು ಸಂಗತಿ ಹೊರಬರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.