ಹುಬ್ಬಳ್ಳಿ-ಧಾರವಾಡ ವ್ಯಾಪ್ತಿ ರೌಡಿ ಶೀಟರ್ಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಿದ ಕಮೀಷನರ್ ಶಶಿಕುಮಾರ್
ಹುಬ್ಬಳ್ಳಿಯಲ್ಲಿ ಇಬ್ಬರು ಯುವತಿಯರ ಕೊಲೆ ನಡೆದು ಅವಳಿ ನಗರಗಳ ಕಾನೂನು ಸುವ್ಯವಸ್ಥೆಯ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾದಾಗ ಸರ್ಕಾರ ಶಶಿಕುಮಾರ್ ಅವರನ್ನು ಇಲ್ಲಿಗೆ ಕಮೀಷನರ್ ಆಗಿ ಟ್ರಾನ್ಸ್ ಫರ್ ಮಾಡಿತು.ಅವರು 2007 ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ರೌಡಿಶೀಟರ್ ಥರಗುಟ್ಟುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗಲಾರದು. ಎನ್ ಶಶಿಕುಮಾರ್ ಅವರು ಅವಳಿ ನಗರಗಳ ಕಮೀಷನರ್ ಅಗಿ ಚಾರ್ಜ್ ತೆಗೆದುಕೊಂಡ ಬಳಿಕ ರೌಡಿಗಳ ಭುಸುಗುಡುವಿಕೆ, ಆಟಾಟೋಪ ಬಹಳ ಕಡಿಮೆಯಾಗಿದೆ. ಶಶಿಕುಮಾರ್ ರಾಜ್ಯದ ದಕ್ಷ ಮತ್ತು ಖಡಕ್ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು. ಇವತ್ತು ಕಮೀಷನರೇಟ್ ವ್ಯಾಪ್ತಿಯ15 ಠಾಣೆಗಳ ಸುಮಾರು 1,600 ರೌಡಿಶೀಟರ್ ಗಳ ಪರೇಡ್ ನಡೆಸಿ ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಲು ಎಚ್ಚರಿಕೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಂಗಳೂರು ನೂತನ ನಗರ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಆರ್ ಜೈನ್ ಅಧಿಕಾರ ಸ್ವೀಕಾರ, ಎನ್.ಶಶಿಕುಮಾರ್ ವರ್ಗಾವಣೆ
Published On - 4:39 pm, Mon, 2 September 24