ಆರೋಪಿ ದರ್ಶನ್ ಕೇಳಿದ್ದ ಸರ್ಜಿಕಲ್ ಚೇರ್ ತಂದುಕೊಟ್ಟ ಬಳ್ಳಾರಿ ಜೈಲಿನ ಅಧಿಕಾರಿಗಳು
ಬೆನ್ನು ನೋವು ಇರುವ ಕಾರಣದಿಂದ ಕುಳಿತುಕೊಳ್ಳುವುದು ದರ್ಶನ್ಗೆ ಕಷ್ಟ ಆಗುತ್ತಿದೆ. ಹಾಗಾಗಿ ಬಳ್ಳಾರಿ ಜೈಲಿನಲ್ಲಿ ಸರ್ಜಿಕಲ್ ಚೇರ್ ಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ವೈದ್ಯರ ವರದಿಯ ಪರಿಶೀಲನೆ ಬಳಿಕ ಅನುಮತಿ ಸಿಕ್ಕಿದ್ದರಿಂದ ಬಳ್ಳಾರಿ ಜೈಲಿನ ಅಧಿಕಾರಿಗಳು ದರ್ಶನ್ಗೆ ಇಂದು (ಸೆಪ್ಟೆಂಬರ್ 2) ಸರ್ಜಿಕಲ್ ಚೇರ್ ನೀಡಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ರಾಜಾತಿಥ್ಯ ಪಡೆದಿದ್ದರಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಬಳ್ಳಾರಿ ಜೈಲಿನಲ್ಲಿ ಸರ್ಜಿಕಲ್ ಚೇರ್ಗಾಗಿಯೂ ದರ್ಶನ್ ಅಂಗಲಾಚುವಂತಾಗಿದೆ. ವೈದ್ಯರು ನೀಡಿದ ಎರಡು ಪ್ರತ್ಯೇಕ ವರದಿಗಳನ್ನು ಪರಿಶೀಲನೆ ಮಾಡಲಾಗಿದೆ. ಆ ಬಳಿಕವೇ ನಟ ದರ್ಶನ್ಗೆ ಸರ್ಜಿಕಲ್ ಚೇರ್ ನೀಡುವ ತೀರ್ಮಾನಕ್ಕೆ ಬರಲಾಗಿದೆ. ಇಂದು (ಸೆ.2) ಬಳ್ಳಾರಿ ಜೈಲಿನ ಅಧಿಕಾರಿಗಳು ಸರ್ಜಿಕಲ್ ಚೇರ್ ತರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

