ತಮಿಳುನಾಡಿನ ಸರ್ಕಾರಿ ಕಾಲೇಜಿನಲ್ಲಿ ಲೈಂಗಿಕ ಹಗರಣ; ಪ್ರೊಫೆಸರ್ ಸೇರಿ ನಾಲ್ವರ ಬಂಧನ

ತಮಿಳುನಾಡಿನ ವಾಲ್ಪಾರೈ ಸರ್ಕಾರಿ ಕಾಲೇಜಿನಲ್ಲಿ ನಡೆದ ಲೈಂಗಿಕ ಕಿರುಕುಳ ಹಗರಣಕ್ಕೆ ಸಂಬಂಧಿಸಿದಂತೆ ಅಸಿಸ್ಟೆಂಟ್ ಪ್ರೊಫೆಸರ್​ಗಳು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ವಾಲ್ಪಾರೈನಲ್ಲಿರುವ ಸರ್ಕಾರಿ ಕಲೆ ಮತ್ತು ವಿಜ್ಞಾನದಲ್ಲಿ ಆಘಾತಕಾರಿ ಲೈಂಗಿಕ ಕಿರುಕುಳ ಹಗರಣ ಬೆಳಕಿಗೆ ಬಂದಿದ್ದು, ಪ್ರಾಧ್ಯಾಪಕರನ್ನು ವಜಾಗೊಳಿಸಲಾಗಿದೆ.

ತಮಿಳುನಾಡಿನ ಸರ್ಕಾರಿ ಕಾಲೇಜಿನಲ್ಲಿ ಲೈಂಗಿಕ ಹಗರಣ; ಪ್ರೊಫೆಸರ್ ಸೇರಿ ನಾಲ್ವರ ಬಂಧನ
ವಾಲ್ಪಾರೈನಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಲೈಂಗಿಕ ಹಗರಣ
Follow us
|

Updated on: Sep 02, 2024 | 7:14 PM

ಕೊಯಮತ್ತೂರು: ತಮಿಳುನಾಡಿನ ವಾಲ್ಪಾರೈ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರು ಹಂಗಾಮಿ ಪ್ರಾಧ್ಯಾಪಕರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಅಂತಹವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಕೊಯಮತ್ತೂರು ಜಿಲ್ಲಾಧಿಕಾರಿ ಕ್ರಾಂತಿಕುಮಾರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಪ್ರಾಧ್ಯಾಪಕರು ಮತ್ತು ಲ್ಯಾಬ್ ತಂತ್ರಜ್ಞರನ್ನು ಕೂಡ ಅಮಾನತು ಮಾಡಲಾಗಿದೆ.

ಕೊಯಮತ್ತೂರಿನ ವಾಲ್ಪಾರೈನಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಸ್ಥಳೀಯರು ಮಾತ್ರವಲ್ಲದೆ ಹೊರಗಿನವರೂ ಇಲ್ಲಿಗೆ ಬಂದು ಸರಕಾರಿ ಹಾಸ್ಟೆಲ್​ನಲ್ಲಿ ಉಳಿದು ಓದುತ್ತಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಆಗಸ್ಟ್ 30ರಂದು ರಾಷ್ಟ್ರೀಯ ಮಹಿಳಾ ಆಯೋಗದ ಸಮಗ್ರ ಸೇವಾ ಕೇಂದ್ರದ ವತಿಯಿಂದ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: Shocking News: ಯುವಕನಿಂದ ಮೇಕೆ ಮರಿಯ ಮೇಲೆ ಅತ್ಯಾಚಾರ; ರಕ್ತಸ್ರಾವದಿಂದ ಒದ್ದಾಡಿದ ಪ್ರಾಣಿ

ಆ ಕಾರ್ಯಕ್ರಮದಲ್ಲಿ ನಿಮ್ಮ ಕಾಲೇಜಿನಲ್ಲಿ ಏನಾದರೂ ಸಮಸ್ಯೆ ಇದೆಯೇ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ತಮಗೆ ಕಾಲೇಜಿನಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು 7 ವಿದ್ಯಾರ್ಥಿಗಳು ತಿಳಿಸಿದರು. ಬಳಿಕ ಆಯೋಗದ ಸಂಯೋಜಕಿ ಕೃಷ್ಣವೇಣಿ ಪೊಲ್ಲಾಚಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ನಾಲ್ವರು ಕಾಲೇಜು ಪ್ರಾಧ್ಯಾಪಕರು ಹಾಗೂ ಹಂಗಾಮಿ ಪ್ರಾಧ್ಯಾಪಕರನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮ ಕಾಲೇಜಿನ ಪ್ರೊಫೆಸರ್​ಗಳಲ್ಲಿ ಕೆಲವರು ತಮಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದರಿಂದಾಗಿ ತಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಇದನ್ನೂ ಓದಿ: Crime News: 9 ವರ್ಷದ ಮಗಳ ಮೇಲೆ ತಂದೆಯಿಂದ ಅತ್ಯಾಚಾರ; ಪೊಲೀಸರೆದುರು ದಾರುಣ ಕತೆ ಬಿಚ್ಚಿಟ್ಟ ತಾಯಿ

ವಿದ್ಯಾರ್ಥಿನಿಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪ್ರೊಫೆಸರ್ ರಾಜಪಾಂಡಿ, ಹಂಗಾಮಿ ಪ್ರಾಧ್ಯಾಪಕರಾದ ಮುರಳಿರಾಜ್ ಮತ್ತು ಸತೀಶ್‌ಕುಮಾರ್, ಪ್ರಯೋಗಾಲಯ ಸಹಾಯಕ ಅನ್ಬರಸು ಎಂಬ ನಾಲ್ವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಇಲಾಖಾ ಕ್ರಮ ಕೈಗೊಂಡಿದ್ದು, ಮಹಿಳಾ ಆಯೋಗ ಈ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದೆ.

ಆರೋಪಿಗಳು ಕಾಲೇಜಿನ ವಿದ್ಯಾರ್ಥಿನಿಯರಿಗೆ ವಾಟ್ಸಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು ಎಂಬುದು ಆರೋಪಿಗಳ ಮೇಲಿರುವ ಪ್ರಮುಖ ಆರೋಪ. ತರಗತಿಯ ಸಮಯದ ನಂತರವೂ ಆರೋಪಿಗಳು ವಿದ್ಯಾರ್ಥಿನಿಯರನ್ನು ಲ್ಯಾಬ್‌ನಲ್ಲಿ ಇರುವಂತೆ ಹೇಳಿದ್ದಾರೆ. ನಂತರ ಅನುಚಿತವಾಗಿ ವರ್ತಿಸಿ ದೈಹಿಕ ಹಿಂಸೆ ನೀಡಿದ್ದರು. ತರಗತಿ ನಡೆಯುವಾಗ ಮತ್ತು ಲ್ಯಾಬ್‌ನಲ್ಲಿ ದೇಹವನ್ನು ಕೆಟ್ಟದಾಗಿ ಸ್ಪರ್ಶಿಸುತ್ತಿದ್ದರು ಎಂದು ವಿದ್ಯಾರ್ಥಿಗಳ ದೂರಿನಲ್ಲಿ ಆರೋಪಿಸಲಾಗಿದೆ. ಬಂಧಿತ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!