AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾರಿ ತಪ್ಪಿದ ಪರಸ್ತ್ರೀಯಿಂದ.. ಮಸಣ ಸೇರಿದ ಪ್ರಿಯಕರ

ಹಾಸನ: ಅಕ್ರಮ ಸಂಬಂಧಕ್ಕೆ ಹಾತೊರೆದಿದ್ದ ವಿವಾಹಿತ ಮಹಿಳೆಯಿಂದಾಗಿ ಆಕೆಯ ಪ್ರಿಯಕರ ಅಸುನೀಗಿದ್ದಾನೆ. ಇನ್ನು, ಪತ್ನಿಯ ಹೇಯಕೃತ್ಯಗಳಿಂದ ನೊಂದ ಪತಿರಾಯ, ತನ್ನ ಪತ್ನಿಯ ಪ್ರಿಯಕರನನ್ನು ಕೊಂದು ಜೈಲು ಸೇರಿರುವ ಘಟನೆ ಹಾಸನದ ಗುಡ್ಡೆನಹಳ್ಳಿ ಬಳಿ ನಡೆದಿದೆ. ಗಂಡ ಕಿರಿಕ್​ ಪಾರ್ಟಿ, ಹೆಂಡ್ತಿ ದಾರಿ ತಪ್ಪಿದ್ದಳು, ನಡೆದಿದ್ದು ಕೊಲೆ! ಹಾಸನದ ಗುಡ್ಡೆನಹಳ್ಳಿ ನಿವಾಸಿ ಪ್ರತಾಪ್ 7 ವರ್ಷಗ ಹಿಂದೆ ಹರ್ಷಿತಾಳನ್ನ ಮದುವೆ ಆಗಿದ್ದ. ಪ್ರಾರಂಭದಲ್ಲಿ ಇವರಿಬ್ಬರ ಸಂಸಾರ ಚೆನ್ನಾಗೇ ಇತ್ತು. ಆದರೆ ಕೆಲವು ವರ್ಷಗಳು ಕಳೆದ ನಂತರ ಪ್ರತಾಪ್, ಹರ್ಷಿತಾ […]

ದಾರಿ ತಪ್ಪಿದ ಪರಸ್ತ್ರೀಯಿಂದ.. ಮಸಣ ಸೇರಿದ ಪ್ರಿಯಕರ
ಸಾಧು ಶ್ರೀನಾಥ್​
|

Updated on:Oct 16, 2019 | 3:16 PM

Share

ಹಾಸನ: ಅಕ್ರಮ ಸಂಬಂಧಕ್ಕೆ ಹಾತೊರೆದಿದ್ದ ವಿವಾಹಿತ ಮಹಿಳೆಯಿಂದಾಗಿ ಆಕೆಯ ಪ್ರಿಯಕರ ಅಸುನೀಗಿದ್ದಾನೆ. ಇನ್ನು, ಪತ್ನಿಯ ಹೇಯಕೃತ್ಯಗಳಿಂದ ನೊಂದ ಪತಿರಾಯ, ತನ್ನ ಪತ್ನಿಯ ಪ್ರಿಯಕರನನ್ನು ಕೊಂದು ಜೈಲು ಸೇರಿರುವ ಘಟನೆ ಹಾಸನದ ಗುಡ್ಡೆನಹಳ್ಳಿ ಬಳಿ ನಡೆದಿದೆ.

ಗಂಡ ಕಿರಿಕ್​ ಪಾರ್ಟಿ, ಹೆಂಡ್ತಿ ದಾರಿ ತಪ್ಪಿದ್ದಳು, ನಡೆದಿದ್ದು ಕೊಲೆ! ಹಾಸನದ ಗುಡ್ಡೆನಹಳ್ಳಿ ನಿವಾಸಿ ಪ್ರತಾಪ್ 7 ವರ್ಷಗ ಹಿಂದೆ ಹರ್ಷಿತಾಳನ್ನ ಮದುವೆ ಆಗಿದ್ದ. ಪ್ರಾರಂಭದಲ್ಲಿ ಇವರಿಬ್ಬರ ಸಂಸಾರ ಚೆನ್ನಾಗೇ ಇತ್ತು. ಆದರೆ ಕೆಲವು ವರ್ಷಗಳು ಕಳೆದ ನಂತರ ಪ್ರತಾಪ್, ಹರ್ಷಿತಾ ಕೈಗೆ ಮಗುವೊಂದು ಕೊಟ್ಟು, ನಾಪತ್ತೆಯಾಗಿದ್ದ. ಆದರೆ ಆಗೊಮ್ಮೆ ಈಗೊಮ್ಮೆ ಮಾತ್ರ ಬಂದು ಹೋಗುತ್ತಿದ್ದ. ಇದ್ರಿಂದ ಹರ್ಷಿತಾಗೆ ಜೀವನ ಸಾಕು ಸಾಕಾಗಿತ್ತು. ಪ್ರತಾಪ್​ನನ್ನ ಮದುವೆ ಆಗಿ ತಪ್ಪು ಮಾಡಿಬಿಟ್ಟೆ ಅಂತಾ ಕೊರಗ್ತಿದ್ಲು. ಈ ನಡುವೆ ಆಕೆಗೆ ಕೃಷ್ಣ ಎಂಬವನ ಜೊತೆ ಸ್ನೇಹ ಕುದುರಿತ್ತು.

ಒಂದು ಮಗು ಇದ್ದರೂ ದಾರಿ ತಪ್ಪಿದ ಸುಂದರಿ ತನ್ನ ಮನೆ ಸಮೀಪವೇ ಇದ್ದ ಕೃಷ್ಣನ ಸ್ನೇಹ ಸಂಬಂಧ, ಮುಂದಿನ ದಿನಗಳಲ್ಲಿ ಸ್ನೇಹವನ್ನೂ ಮೀರಿದ್ದಾಗಿ ಮುಂದುವರಿಯುತ್ತೆ. ಈ ವಿಚಾರ ಹರ್ಷಿತಾಳ ಗಂಡ ಪ್ರತಾಪ್​ಗೆ ಗೊತ್ತಾಗುತ್ತೆ. ಈ ವೇಳೆ ಪತ್ನಿ ಹಾಗೂ ಆಕೆಯ ಪ್ರಿಯತಮ ಕೃಷ್ಣಗೆ ವಾರ್ನಿಂಗ್ ಕೊಡುತ್ತಾನೆ.

ಇದ್ರಿಂದ ಬೆದರಿದ ಹರ್ಷಿತಾ ಮನೆ ಖಾಲಿ ಮಾಡಿ ವಿಜಯನಗರ ಬಡಾವಣೆಗೆ ಹೋಗ್ತಾಳೆ. ಅಲ್ಲಿ ಸುಳ್ಳು ಹೇಳಿ, ಬಾಡಿಗೆ ಮನೆ ಮಾಡಿ ಕೃಷ್ಣನ ಜೊತೆ ಸೇರುತ್ತಾಳೆ. ಆದ್ರೆ, ಭಾನುವಾರ  ಆ ಮನೆಗೆ ದಿಢೀರನೆ ಬಂದ ಪ್ರತಾಪ, ಕೃಷ್ಣ ಹಾಗೂ ಹರ್ಷಿತಾ ಜೊತೆ ಇರುವುದನ್ನ ಕಂಡಿದ್ದಾನೆ. ಇದ್ರಿಂದ ಕೆರಳಿದ ಪ್ರತಾಪ್, ಕೃಷ್ಣನನ್ನ ಕೊಚ್ಚಿ ಕೊಂದು, ಮಡದಿ ಜೊತೆಗೆ ಎಸ್ಕೇಪ್ ಆಗಿದ್ದ. ತನಿಖೆ ನಡೆಸಿದ ಪೊಲೀಸರು ಪ್ರತಾಪ್​ನನ್ನ ಈಗ ಬಂಧಿಸಿದ್ದಾರೆ.

Published On - 9:07 am, Wed, 16 October 19