ಮಾರಕಾಸ್ತ್ರದಿಂದ ಚುಚ್ಚಿ ಪತಿಯಿಂದ ಪತ್ನಿಯ ಕೊಲೆ; ಕೌಟುಂಬಿಕ ಸಮಸ್ಯೆಯಿಂದ ಕೊಲೆ ಮಾಡಿರುವ ಶಂಕೆ

ಮಾರಕಾಸ್ತ್ರದಿಂದ ಚುಚ್ಚಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಬೇಲೂರಿನ ಪಂಪ್‌ಹೌಸ್ ರಸ್ತೆಯಲ್ಲಿ ನಡೆದಿದೆ.

ಮಾರಕಾಸ್ತ್ರದಿಂದ ಚುಚ್ಚಿ ಪತಿಯಿಂದ ಪತ್ನಿಯ ಕೊಲೆ; ಕೌಟುಂಬಿಕ ಸಮಸ್ಯೆಯಿಂದ ಕೊಲೆ ಮಾಡಿರುವ ಶಂಕೆ
ಸಾಂಧರ್ಬಿಕ ಚಿತ್ರ
Updated By: ವಿವೇಕ ಬಿರಾದಾರ

Updated on: Jul 20, 2022 | 7:14 PM

ಹಾಸನ: ಮಾರಕಾಸ್ತ್ರದಿಂದ ಚುಚ್ಚಿ ಪತಿಯೇ (Husband) ಪತ್ನಿಯನ್ನು (Wife) ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ಹಾಸನ (Hassan) ಜಿಲ್ಲೆ ಬೇಲೂರಿನ ಪಂಪ್‌ಹೌಸ್ ರಸ್ತೆಯಲ್ಲಿ ನಡೆದಿದೆ. ಪತ್ನಿ ಅಶ್ವಿನಿ(36) ಕೊಲೆಯಾದ ಮಹಿಳೆ. ಪತ್ನಿ ಅಶ್ವಿನಿಯನ್ನು ಪತಿ ಜಗದೀಶ್ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೌಟುಂಬಿಕ ಸಮಸ್ಯೆಯಿಂದ ಪತಿ ಪತ್ನಿಯನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜಗದೀಶ್ ಪತ್ನಿ ಅಶ್ವಿನಿಯನ್ನು 17 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದನು. ದಂಪತಿ ಮೆಡಿಕಲ್ ಶಾಫ್ ಇಟ್ಟು ಕೈಸುಟ್ಟುಕೊಂಡಿದ್ದರು. ಜಗದೀಶ್ ಪತ್ನಿ ಜೊತೆ ಪದೆ ಪದೆ ಜಗಳವಾಡುತ್ತಿದ್ದನು. ಇದರಿಂದ ಮನನೊಂದು ಅಶ್ವಿನಿ ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದರು. ಅಶ್ವಿನಿ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತ ಮಕ್ಕಳನ್ನ ಸಾಕುತ್ತಿದ್ದರು.

ಮಕ್ಕಳು ಶಾಲೆ ಮುಗಿಸಿ ಮನೆಗೆ ಬಂದಾಗ ಕೊಲೆಯಾಗಿರೋದು ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಬಂದು ಕಳ್ಳತನ ಮಾಡ್ತಿದ್ದ ದಂಪತಿ ಸೆರೆ

ಬೆಂಗಳೂರು: ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಬೆಂಗಳೂರು ಶೇಷಾದ್ರಿಪುರಂ ಪೊಲೀಸರು ಸೆರೆ ಹಿಡದಿದ್ದಾರೆ.  ಮುರುಗಾ, ಪತ್ನಿ ರೀನಾ ಬಂಧಿತ ಆರೋಪಿಗಳು. ಬಂಧಿತ ದಂಪತಿಯಿಂದ 25 ಲಕ್ಷ ಹಣ, 500 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಂಪತಿ ಈ ಹಿಂದೆ ಮನೆಗಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು.

ದುಶ್ಚಟಗಳಿಗೆ ರಾಬರಿ ಮಾಡುತ್ತಿದ್ದ ಮೂವರ ಬಂಧನ

ನೆಲಮಂಗಲ: ದುಶ್ಚಟಗಳಿಗೆ ಕಳ್ಳತನ ಮಾಡುತ್ತಿದ್ದ ಮೂವರನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಸಿದ್ದಾರೆ. ಗಿರೀಶ್ (20), ಶರತ್ ಕುಮಾರ್ (21) ಶಶಾಂಕ್ (20)ಬಂಧಿತ ಆರೋಪಿಗಳು. ಆರೋಪಿಗಳು ಬೆಂಗಳೂರಿನ ಡೇವಿಡ್, ಮಣಿ, ಕತ್ತಿಗೆಗೆ ಚಾಕು ಇಟ್ಟು ದರೋಡೆಗೈದಿದ್ದರು. ಹಣದ ಜೋತೆ ಕೆಟಿಎಂ ಬೈಕ್, ಕ್ಯಾಮರಾ ದೋಚಿದ್ದರು.

ಕದ್ದ ಬೈಕಿನಲ್ಲಿಯೇ ರೂಪ ಎಂಬ ಮಹಿಳೆ ಮುಖಕ್ಕೆ ಖಾರದಪುಡಿ ಎರಚಿ ಚಿನ್ನದ ಮಾಂಗಲ್ಯಸರ ಕಿತ್ತು ಪರಾರಿಯಾಗಿದ್ದರು. ಕದ್ದ ಚಿನ್ನಾಭರಣಗಳನ್ನ ಖಾಸಗಿ ಬ್ಯಾಂಕಿನಲ್ಲಿ ಅಡವಿಟ್ಟು ಬಂದ ಹಣದಲ್ಲಿ ಮೋಜುಮಸ್ತಿ ಮಾಡುತ್ತಿದ್ದರು.

ಬೇಗೂರು ಕ್ರಾಸ್ ಬಳಿ ಮತ್ತೊಂದು ಪ್ರಕರಣಕ್ಕೆ ಹೊಂಚು ಹಾಕುವ ವೇಳೆ ಪೊಲೀಸ್​​ರ ಬಲೆಗೆ ಬಿದ್ದಿದ್ದಾರೆ. ಹಣದ ಜೋತೆ ಎರಡು ಬೈಕ್, ಮೊಬೈಲ್,ಚಾಕು ಜಪ್ತಿ ಮಾಡಲಾಗಿದೆ. ನೆಲಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಕ್ಕಿ ಹರಿಯುತ್ತಿರೋ ನದಿಗೆ ಹಾರಿದ ವ್ಯಕ್ತಿ ಆತ್ಮಹತ್ಯೆ

ಗದಗ: ಉಕ್ಕಿ ಹರಿಯುತ್ತಿರೋ ತುಂಗಭದ್ರಾ ನದಿಗೆ ಕೋರ್ಲಹಳ್ಳಿ ಸೇತುವೆ ಮೇಲಿನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುಂಡರಗಿ ಪಟ್ಟಣದ ನಿವಾಸಿ ಡಿ.ಕೆ ವಿಶ್ವ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ವ್ಯಕ್ತಿ ಸಾವಿಗು ಮುನ್ನ ಸೇಲ್ಫಿ ವಿಡಿಯೋ ಮಾಡಿದ್ದನು. ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.