ಪತ್ನಿಯನ್ನು ಕೊಲೆ ಮಾಡಿ ಮೃತದೇಹಕ್ಕೆ ಹೂವಿನ ಹಾರ ಹಾಕಿದ ಪತಿ, ಬಳಿಕ ನೇರವಾಗಿ ಪೊಲೀಸ್​ ಠಾಣೆಗೆ ಹೋದ!

| Updated By: ರಮೇಶ್ ಬಿ. ಜವಳಗೇರಾ

Updated on: Nov 18, 2022 | 6:57 PM

ಪತ್ನಿಯನ್ನು ಕೊಲೆ ಮಾಡಿದ ಪತಿ ಬಳಿಕ ಮೃತದೇಹಕ್ಕೆ ಹೂವಿನ ಹಾರ ಹಾಕಿ ನೇರವಾಗಿ ಪೊಲೀಸ್​ ಠಾಣೆಗೆ ಹೋಗಿದ್ದಾನೆ.

ಪತ್ನಿಯನ್ನು ಕೊಲೆ ಮಾಡಿ ಮೃತದೇಹಕ್ಕೆ ಹೂವಿನ ಹಾರ ಹಾಕಿದ ಪತಿ, ಬಳಿಕ ನೇರವಾಗಿ ಪೊಲೀಸ್​ ಠಾಣೆಗೆ ಹೋದ!
ಪತ್ನಿಯನ್ನು ಕೊಲೆ ಮಾಡಿದ ಪತಿ
Follow us on

ಗುಂಟೂರು(ಆಂಧ್ರ ಪ್ರದೇಶ): ಅನುಮಾನ ಎಂಬ ಪಿಶಾಚಿಯನ್ನು ಆರಂಭದಲ್ಲಿ ಮನಸ್ಸಿನಿಂದ ಬೇರು ಸಹಿತ ಕಿತ್ತು ಹಾಕಬೇಕು. ಏಕೆಂದರೆ ಗಂಡಿಗೆ ಆಗಲಿ ಅಥವಾ ಹೆಣ್ಣಿಗೆ ಆಗಲಿ ಒಮ್ಮೆ ಅನುಮಾನ ಮನಸ್ಸಿನಲ್ಲಿ ಬಂದರೆ ಸುಖವಾಗಿ ಇರಬೇಕಾದ ಸಂಸಾರ ಸಂಪೂರ್ಣವಾಗಿ ಹಾಳಾಗಿ ಹೋಗುತ್ತದೆ. ಹೌದು…ಅನುಮಾನದ ಭೂತಕ್ಕೆ ಇಲ್ಲೊಂದು ಜೀವ ಬಲಿಯಾಗಿದೆ.

ಪತ್ನಿಯ ಮೇಲಿನ ಅನುಮಾನದಿಂದ ಆಕೆಗೆ ತುಂಬಾ ಕಿರುಕುಳ ನೀಡುತ್ತಿದ್ದ ಪತಿ, ಕೊನೆಗೆ ಆಕೆಯನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿದೆ. ಕೊಲೆ ಮಾಡಿದ್ದಲ್ಲದೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಮೃತದೇಹಕ್ಕೆ ಹೂವಿನ ಹಾರ ಹಾಕಿ ಬಳಿಕ ನೇರವಾಗಿ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಸ್ವಾತಿ (38) ಕೊಲೆಯಾದ ಮಹಿಳೆ. ಈಕೆ ಪ್ರಕಾಶಂ ಜಿಲ್ಲೆಯ ಪುಲ್ಲಾಲಚೆರುವು ಮೂಲದ ಲಾರಿ ಚಾಲಕ ಕೋಟೇಶ್ವರ ರಾವ್ ಎಂಬಾತನನ್ನು 17 ವರ್ಷದ ಹಿಂದೆ ಮದುವೆ ಆಗಿದ್ದಳು. ದಂಪತಿ ತೆನಾಲಿಯಲ್ಲಿ ವಾಸವಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬ್ಯೂಟಿಷಿಯನ್​ ಕೋರ್ಸ್​ ಮಾಡುತ್ತಿದ್ದ ಮೃತ ಸ್ವಾತಿ ಸ್ವಾತಿ ನಂಡ್ಲುಪೇಟೆಯಲ್ಲಿ ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದಳು. ಆರಂಭದಲ್ಲಿ ತೆನಾಲಿಯ ಪಾಂಡುರಂಗಪೇಟೆಯಲ್ಲಿದ್ದ ದಂಪತಿ ಇತ್ತೀಚೆಗೆ ನಜರುಪೇಟೆಯಲ್ಲಿ ವಾಸವಿದ್ದರು.

ಆದ್ರೆ, ಸ್ವಾತಿಗೆ ಬೇರೆ ವ್ಯಕ್ತಿಯ ಜತೆ ಅಕ್ರಮ ಸಂಬಂಧ ಇದೆ ಎಂದು ಕೋಟೇಶ್ವರ ರಾವ್​ಗೆ ಅನುಮಾನ ಎಂಬ ಭೂತ ವಕ್ಕಿಸಿತ್ತು. ಇದೇ ವಿಚಾರಕ್ಕೆ ಪತ್ನಿಯ ಜೊತೆ ಆಗಾಗ ಜಗಳ ತೆಗೆಯುತ್ತಿದ್ದ. ಇದರಿಂದಾಗಿ ಕೆಲವು ದಿನಗಳ ಹಿಂದೆ ಸ್ವಾತಿ ತನ್ನ ತವರಿಗೆ ತೆರಳಿದ್ದಳು. ಬಳಿಕ ಆಕೆಯ ಮನವೊಲಿಸಿ ವಾಪಸ್​ ಕರೆತಂದಿದ್ದ. ಆದರೆ, ಆತನ ಅನುಮಾನ ಮಾತ್ರ ಕಡಿಮೆ ಆಗಿರಲಿಲ್ಲ.

ಮತ್ತಷ್ಟು ಕಿರುಕುಳ ಕೊಡಲು ಆರಂಭಿಸಿದ್ದ ಕೋಟೇಶ್ವರ ರಾವ್, ಎಂದಿನಂತೆ ಸ್ವಾತಿ ಬ್ಯೂಟಿ ಪಾರ್ಲರ್​ಗೆ ತೆರಳಿದ್ದಳು. ಈ ವೇಳೆ ಆಕೆಯೊಂದಿಗೆ ಜಗಳ ಮಾಡಿ ಚಾಕುವಿನಿಂದ ದಾಳಿ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ಸ್ವಾತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇದಾದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ವಾತಿ ಮೃತದೇಹಕ್ಕೆ ವೆಂಕಟ್​ ಹೂವಿನ ಹಾರ ಹಾಕಿದ ನಂತರ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ.


ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:54 pm, Fri, 18 November 22