ಆಟೋ ಚಾಲಕನೊಬ್ಬ ಪತ್ನಿಯ ತಲೆಯನ್ನು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಪತ್ನಿ ಬೇರೊಬ್ಬರ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬುದನ್ನು ತಿಳಿದ ಪತಿ ಆಕೆಯನ್ನು ಹತ್ಯೆ ಮಾಡಿ ಹರಿತವಾದ ಚಾಕುವಿನಿಂದ ತಲೆಯನ್ನು ಕತ್ತರಿಸಿರುವ ಭಯಾನಕ ಘಟನೆ ವರದಿಯಾಗಿದೆ.
ಹೈದರಾಬಾದ್ನ ಅಬ್ದುಲ್ಲಾಪುರ್ಮೆಟ್ ಜೆಎನ್ಎನ್ಯುಆರ್ಎಂ ಕಾಲೋನಿಯಲ್ಲಿ ಎರಡು ಬೆಡ್ರೂಮಿನ ಸರ್ಕಾರಿ ವಸತಿ ಗೃಹದಲ್ಲಿ ವಾಸವಿದ್ದ ಹಂತಕ, ಹೆಂಡತಿ ತಲೆಯನ್ನು ಕತ್ತರಿಸಿ ಮನೆಯಲ್ಲಿಯೇ ಇಟ್ಟುಕೊಂಡಿದ್ದ.
41 ವರ್ಷದ ಪತ್ನಿ ಪುಷ್ಪಲತಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ವಿಜಯ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆತ ಕೊಲೆಗೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಪತ್ನಿಗೆ ಬೇರೊಬ್ಬರ ಜತೆ ಸಂಬಂಧವಿದೆ ಎಂದು ಶಂಕಿಸಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ವಿಜಯ್ ಹಾಗೂ ಪುಷ್ಪಲತಾ ತನ್ನ ಸಹೋದರಿಯ ಹೊಸ ಮನೆಗೆ ಹೋಗಿದ್ದರು. ಅಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.
ಮತ್ತಷ್ಟು ಓದಿ: ಧರ್ಮಸ್ಥಳದಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಸುತ್ತಾಟ; ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಮನೆಯನ್ನು ಸ್ವಚ್ಛಗೊಳಿಸುವ ನೆಪದಲ್ಲಿ ವಿಜಯ್ ತನ್ನ ಪತ್ನಿಯನ್ನು ಫ್ಲಾಟ್ಗೆ ಕರೆದೊಯ್ದಿದ್ದ, ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದ, ಬಳಿಕ ಆಕೆಯ ತಲೆಯನ್ನು ಕತ್ತರಿಸಿ ಫ್ಲಾಟ್ನ ಪಕ್ಕದಲ್ಲಿಟ್ಟಿದ್ದ.
ಕೃತ್ಯ ಎಸಗಿದ ವಿಜಯ್ ರಕ್ತದ ಬಟ್ಟೆಯಲ್ಲಿದ್ದುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪುಷ್ಪಲತಾ ಶವ ಪತ್ತೆಯಾಗಿದೆ. ವರದಿಗಳ ಪ್ರಕಾರ, ವಿಜಯ್ ಹಾಗೂ ಪುಷ್ಪಲತಾ ಮದಉವೆಯಾಗಿ 15 ವರ್ಷಗಳಾಗಿವೆ. ವಿಜಯ್ ಒಮ್ಮೆ ಕುಟುಂಬ ಬಿಟ್ಟು ಹೋಗಿದ್ದ, ಪುಷ್ಪಲತಾ ನಾಪತ್ತೆ ಪ್ರಕರಣ ದಾಖಲಿಸಿದ್ದಳು.
2014ರಲ್ಲೂ ವಿಜಯ್ ಪುಷ್ಪಲತಾ ಮೇಲೆ ಹಲ್ಲೆ ನಡೆಸಿದ್ದ, ದೂರಿನ ಮೇರೆಗೆ ವಿಜಯ್ ಮೇಲೆ ಮೇಡಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ವಿಜಯ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ