ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಕಿರುಕುಳ ಕೊಟ್ಟು, ಬಟ್ಟೆ ಬಿಚ್ಚಿಸಿ ವಿವಸ್ತ್ರವಾಗಿ ನಿಲ್ಲಿಸಿದ ಆಘಾತಕಾರಿ ಘಟನೆಯೊಂದು ಹೈದರಾಬಾದ್ ಹೊರವಲಯದಲ್ಲಿರುವ ಬಾಲಾಜಿ ನಗರದಲ್ಲಿನ ರಸ್ತೆಯೊಂದರಲ್ಲಿ ನಡೆದಿದೆ. ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಜವಾಹರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಜಿ ನಗರ ಬಸ್ ನಿಲ್ದಾಣದ ಬಳಿ ರಾತ್ರಿ 8.30 ರ ಸುಮಾರಿಗೆ ಆರೋಪಿ ಪೆದ್ದಮಾರಯ್ಯ ಎಂಬಾತ ಯುವತಿಗೆ ಕಿರುಕುಳ ನೀಡಿ, ಬಲವಂತವಾಗಿ ಬಟ್ಟೆ ಹರಿದು, ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಯುವತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿ ಕೆಟ್ಟದಾಗಿ ಸ್ಪರ್ಶಿಸಿದ್ದಾನೆ. ಯುವತಿ ಆತನನ್ನು ದೂರ ತಳ್ಳುವ ಮೂಲಕ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ ವೇಗವಾಗಿ ನಡೆಯಲು ಶುರು ಮಾಡಿದ್ದಳು. ಕೋಪಗೊಂಡ ಪೆದ್ದಮಾರಯ್ಯ ಆಕೆಯ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಬಟ್ಟೆ ಹರಿದು ಹಾಕಿ, ವಿವಸ್ತ್ರಗೊಳಿಸಿದ್ದಾನೆ.
ಮತ್ತಷ್ಟು ಓದಿ: ಆರೋಗ್ಯ ಸರಿಪಡಿಸುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದ ತಾಂತ್ರಿಕ, ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಕಿ
ಆತ ಕೂಲಿಕಾರ್ಮಿಕನಾಗಿದ್ದು, ನಿತ್ಯ ಕುಡಿದುಕೊಂಡೇ ಮನೆಗೆ ಬರುತ್ತಿದ್ದ, ಆತನ ಜತೆ ಆತನ ತಾಯಿ ಇದ್ದರೂ ಕೂಡ ಈ ಕೃತ್ಯವನ್ನು ತಡೆಯಲಿಲ್ಲ ಎನ್ನುವುದು ವಿಪರ್ಯಾಸ. ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆಯಲು ಯತ್ನಿಸಿದರು. ಆಕೆಯ ಕೃತ್ಯದಿಂದ ಕುಪಿತಗೊಂಡ ಆರೋಪಿ ಆಕೆಯ ಮೇಲೆ ಕೂಡ ಹಲ್ಲೆಗೆ ಯತ್ನಿಸಿದ್ದಾನೆ.
ಆರೋಪಿಯ ಮೇಲೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಐಎಎನ್‌ಎಸ್ ವರದಿಯ ಪ್ರಕಾರ ಯುವತಿ ಸುಮಾರು 15 ನಿಮಿಷಗಳ ಕಾಲ ರಸ್ತೆಯಲ್ಲಿ ಬೆತ್ತಲೆಯಾಗಿದ್ದರು.
ಆರೋಪಿ ಸ್ಥಳದಿಂದ ಹೋದ ಬಳಿಕ ಅಲ್ಲಿದ್ದವರು, ಆಕೆಗೆ ಬಟ್ಟೆ ನೀಡಿದರು, ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲಾಯಿತು.
ಆರೋಪಿಯು ಸ್ಥಳದಿಂದ ಹೋದ ನಂತರ, ಹಲವಾರು ವ್ಯಕ್ತಿಗಳು ಆಕೆಗೆ ಹೊದಿಕೆ ನೀಡಲು ಮುಂದಾದರು ಮತ್ತು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ