ಇಷ್ಟಪಟ್ಟು ಓಡಿ ಬಂದವನಿಂದಲೇ ಸೇರಿದಳು ಸ್ಮಶಾನ, ಮೂವರು ಮಕ್ಕಳು ತಬ್ಬಲಿ

ಹಾಸನ: ಪತಿಯ ಸಂಬಂಧಿ ಜೊತೆ ಓಡಿಹೋದ ಪತ್ನಿಯನ್ನು ಸಂಬಂಧಿಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಹಾಸನದಲ್ಲಿ ನಡೆದಿದೆ. 10 ವರ್ಷದ ತುಂಬಿದ ಸಂಸಾರದಲ್ಲಿ ಆಕೆ ಮಾಡಿದ ತಪ್ಪಿಗೆ 3 ಮಕ್ಕಳು ಅನಾಥವಾಗಿವೆ. ಮೂವರು ಮಕ್ಕಳಿದ್ರೂ ದಾರಿ ತಪ್ಪಿದ್ಲು ಮದನಾರಿ..! ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಾಂಧಿನಗರ ನಿವಾಸಿ ಲೋಕೇಶ್ ಕಳೆದ 13 ವರ್ಷಗಳ ಹಿಂದೆ ಮಂಜುಳಾನ ಮದುವೆಯಾಗಿದ್ದ. ಮಂಜುಳಾ ಬದುಕಲ್ಲಿ ರಾಣಿಯಾಗಿ ಬಂದ ಮೇಲೆ ಸಂಸಾರವು ಸುಂದರವಾಗಿ ಸಾಗ್ತಿತ್ತು. ಮೂವರು ಮಕ್ಕಳು ಕೂಡಾ ಇವರ ನಗುವಿನಲ್ಲಿ […]

ಇಷ್ಟಪಟ್ಟು ಓಡಿ ಬಂದವನಿಂದಲೇ ಸೇರಿದಳು ಸ್ಮಶಾನ, ಮೂವರು ಮಕ್ಕಳು ತಬ್ಬಲಿ
Follow us
ಸಾಧು ಶ್ರೀನಾಥ್​
|

Updated on: Nov 27, 2019 | 6:32 PM

ಹಾಸನ: ಪತಿಯ ಸಂಬಂಧಿ ಜೊತೆ ಓಡಿಹೋದ ಪತ್ನಿಯನ್ನು ಸಂಬಂಧಿಯೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಹಾಸನದಲ್ಲಿ ನಡೆದಿದೆ. 10 ವರ್ಷದ ತುಂಬಿದ ಸಂಸಾರದಲ್ಲಿ ಆಕೆ ಮಾಡಿದ ತಪ್ಪಿಗೆ 3 ಮಕ್ಕಳು ಅನಾಥವಾಗಿವೆ.

ಮೂವರು ಮಕ್ಕಳಿದ್ರೂ ದಾರಿ ತಪ್ಪಿದ್ಲು ಮದನಾರಿ..! ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಾಂಧಿನಗರ ನಿವಾಸಿ ಲೋಕೇಶ್ ಕಳೆದ 13 ವರ್ಷಗಳ ಹಿಂದೆ ಮಂಜುಳಾನ ಮದುವೆಯಾಗಿದ್ದ. ಮಂಜುಳಾ ಬದುಕಲ್ಲಿ ರಾಣಿಯಾಗಿ ಬಂದ ಮೇಲೆ ಸಂಸಾರವು ಸುಂದರವಾಗಿ ಸಾಗ್ತಿತ್ತು. ಮೂವರು ಮಕ್ಕಳು ಕೂಡಾ ಇವರ ನಗುವಿನಲ್ಲಿ ಭಾಗಿಯಾಗಿದ್ರು.

ಆದ್ರೆ, 3 ವರ್ಷಗಳಿಂದ ಈ ಮಂಜುಳಾ ಲೋಕೇಶ್​ನ ಸಂಬಂಧಿ ಸೋಮಶೇಖರ್​ ಎಂಬವನ ಜೊತೆ ಸಂಬಂಧ ಬೆಳೆಸಿದ್ದಾಳೆ. ಪತ್ನಿಯ ಕಳ್ಳಾಟ ಗಂಡನಿಗೆ ಗೊತ್ತಿತ್ತು. ಹೀಗಿದ್ರೂ ಲೋಕೇಶ್ ಮಕ್ಕಳ ಮುಖ ನೋಡಿ ಸುಮ್ಮನಾಗಿದ್ದ. ಆದ್ರೆ, ಮಂಜುಳಾ ಮಾತ್ರ ಮಕ್ಕಳನ್ನ ಕರೆದುಕೊಂಡು ಸೋಮಶೇಖರ್ ಜೊತೆ ಓಡಿ ಹೋಗಿದ್ದಾಳೆ.

ಇವನಿಗೆ ಅವಳು ಬೇಕಿದ್ಲು.. ಮತ್ತೊಬ್ಬಳು ಬೇಕಿದ್ಲು.. ಆಗಿದ್ದು ಭಯಂಕರ! ಈ ಮಂಜುಳಾ ಯಾರನ್ನ ಇಷ್ಟಪಟ್ಟು ಬಂದಿದ್ಲೋ. ಯಾರು ತನ್ನ ಜಗತ್ತು ಅಂತಾ ಅಂದುಕೊಂಡಿದ್ಲೋ ಅವನಿಂದ್ಲೇ ನರಕಯಾತನೆ ಅನುಭವಿಸಿ ಸಾವಿನ ಮನೆ ಸೇರಿದ್ದಾಳೆ. ಅಸಲಿಗೆ ಪ್ರೀತಿ ಹೆಸರಲ್ಲಿ ಮನೆ ಬಿಟ್ಟಿದ್ದವರ ನಡುವೆ ಜಗಳ ಶುರುವಾಗಿತ್ತು. ಯಾಕಂದ್ರೆ, ಸೋಮಶೇಖರ್ ಮಂಜುಳಾ ಜೊತೆ ಇದ್ಕೊಂಡೇ ಇನ್ನೊಂದು ಮದುವೆಗೆ ರೆಡಿಯಾಗಿದ್ದ.

ಈ ವಿಚಾರ ತಿಳಿದ ಮಂಜುಳಾ ಸೋಮಶೇಖರ್ ಮದುವೆಗೆ ವಿರೋಧಿಸಿದ್ಲು. ಇದ್ರಿಂದ ರಾಕ್ಷಸನಾದ ಸೋಮಶೇಖರ್ ಇದೇ ತಿಂಗಳ 21ರಂದು ಮಂಜುಳಾಗೆ ಥಳಿಸಿ, ಮಕ್ಕಳನ್ನ ರೂಮಿನಲ್ಲಿ ಕೂಡಿಹಾಕಿದ್ದಾನೆ. ಬಳಿಕ ಮಕ್ಕಳ ಎದುರಲ್ಲೇ ಮಂಜುಳಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಮಂಜುಳಾನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇದೇ ತಿಂಗಳ 23ರಂದು ಸಾವಿನ ಮನೆ ಸೇರಿದ್ದಾಳೆ. ನರರೂಪದ ರಾಕ್ಷಸ ಸೋಮಶೇಖರ್​ನನ್ನ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ