ಕಂಠಪೂರ್ತಿ ಕುಡಿದು ಸ್ನೇಹಿತನ ಪತ್ನಿ ಮೇಲೆ ರೇಪ್ಗೆ ಯತ್ನ, ಟೆಕ್ಕಿ ಅರೆಸ್ಟ್
ಬೆಂಗಳೂರು: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಟೆಕ್ಕಿ ನಿಲಬ್ ನಯನ್ನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಕಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ಭಾನುವಾರ ಬರ್ತ್ಡೇ ಪಾರ್ಟಿ ಆಚರಿಸಲು ಸ್ನೇಹಿತರೆಲ್ಲರು ಸೇರಿದ್ದರು. ಪಾರ್ಟಿ ಆಚರಿಸಿ ಕಂಠ ಪೂರ್ತಿ ಕುಡಿದು ನೀಲಬ್ ನಯನ್ ಶೌಚಾಲಯಕ್ಕೆ ತೆರಳಿದ್ದಾನೆ. ಈ ವೇಳೆ ಶೌಚಾಲಯದ ಪಕ್ಕದ ರೂಮ್‌ನಲ್ಲಿ ಮಲಗಿದ್ದ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆರೋಪಿಯಿಂದ ತಪ್ಪಿಸಿಕೊಂಡು ಮಹಿಳೆ ಕಿರುಚಾಡಿದ್ದಾಳೆ. ಸಂತ್ರಸ್ತ ಮಹಿಳೆಯ ಪತಿ ಹಾಗೂ ಸ್ನೇಹಿತರು ಹಿಡಿಯಲು ಯತ್ನಿಸಿದಾಗ ಆರೋಪಿ ನೀಲಬ್ ಪರಾರಿಯಾಗಿದ್ದಾನೆ. ಬಳಿಕ […]
ಬೆಂಗಳೂರು: ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಟೆಕ್ಕಿ ನಿಲಬ್ ನಯನ್ನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಕಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್ನಲ್ಲಿ ಭಾನುವಾರ ಬರ್ತ್ಡೇ ಪಾರ್ಟಿ ಆಚರಿಸಲು ಸ್ನೇಹಿತರೆಲ್ಲರು ಸೇರಿದ್ದರು. ಪಾರ್ಟಿ ಆಚರಿಸಿ ಕಂಠ ಪೂರ್ತಿ ಕುಡಿದು ನೀಲಬ್ ನಯನ್ ಶೌಚಾಲಯಕ್ಕೆ ತೆರಳಿದ್ದಾನೆ. ಈ ವೇಳೆ ಶೌಚಾಲಯದ ಪಕ್ಕದ ರೂಮ್‌ನಲ್ಲಿ ಮಲಗಿದ್ದ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆರೋಪಿಯಿಂದ ತಪ್ಪಿಸಿಕೊಂಡು ಮಹಿಳೆ ಕಿರುಚಾಡಿದ್ದಾಳೆ. ಸಂತ್ರಸ್ತ ಮಹಿಳೆಯ ಪತಿ ಹಾಗೂ ಸ್ನೇಹಿತರು ಹಿಡಿಯಲು ಯತ್ನಿಸಿದಾಗ ಆರೋಪಿ ನೀಲಬ್ ಪರಾರಿಯಾಗಿದ್ದಾನೆ. ಬಳಿಕ ಬೆಳ್ಳಂದೂರು ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆಯ ಪತಿ ದೂರು ನೀಡಿದ್ದರು. ಈ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.