ದಾಂಪತ್ಯ ಜೀವನ ಬಿರುಕು ಬಿಟ್ಟಿತ್ತು. ದಂಪತಿ ಇಬ್ಬರೂ ತೋಟದ ಜಾಗದಲ್ಲಿ ಅನೇಕ ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ನೂರಾರು ಹಾವುಗಳ ಜೀವ ರಕ್ಷಣೆಗೆ ಮಾಡಿದ ಉರಗ ತಜ್ಞ ಪತಿಯು ಕಳೆದ ವಾರ ಪತ್ನಿಯನ್ನು ಹತ್ಯೆ ಮಾಡಿದ್ದನು. ಈ ಕೊಲೆಗೆ ಕಾರಣ ಆಸ್ತಿ ಅಂದುಕೊಂಡಿದ್ದ ಕುಟುಂಬಸ್ಥರಿಗೆ ಈಗ ಬಿಗ್ ಶಾಕ್. ಪೊಲೀಸ್ ತನಿಖೆಯಿಂದ ಮಹಿಳೆಯ ಅನೈತಿಕ ಸಂಬಂಧಕ್ಕೆ ಕೊಲೆ ನಡೆದಿರುವುದು ಬಹಿರಂಗವಾಗಿದೆ.
ನವೆಂಬರ್ 5 ರಂದು ಶಿವಮೊಗ್ಗ ತಾಲೂಕಿನ ದುಮ್ಮಳ್ಳಿ ಗ್ರಾಮದ ಪ್ರಕಾಶ್ ಎನ್ನುವ ವ್ಯಕ್ತಿಯ ತೋಟದಲ್ಲಿ ಒಂದು ಮರ್ಡರ್ ಆಗಿತ್ತು. ಕೊಲೆಯಾಗಿದ್ದು ಬೇರೆ ಯಾರದ್ದು ಅಲ್ಲ. ಪ್ರಕಾಶ್ ಪತ್ನಿ ಶೋಭಳದ್ದು. ಶವದ ಪಕ್ಕದಲ್ಲಿ ಚಾಕು, ಖಾರಪುಡಿ, ಇಟ್ಟಿಗೆಗಳಿದ್ದವು. ಈ ಕೊಲೆ ಮಾಡಿದ್ದು ಬೇರೆ ಯಾರೂ ಅಲ್ಲ. ಆತನ ಪತಿ ಪ್ರಕಾಶ್ ಎನ್ನುವುದು ಗ್ರಾಮಸ್ಥರಿಗೆ ಗೊತ್ತಾಗಿ ಹೋಗಿತ್ತು. ಅಷ್ಟಕ್ಕೂ ಪ್ರಕಾಶ್ ಓರ್ವ ಉರಗ ತಜ್ಞ. ಶಿವಮೊಗ್ಗ ತಾಲೂಕಿನ ಗ್ರಾಮಗಳಲ್ಲಿ ಹಾವುಗಳು ಬಂದ್ರೆ ಅಲ್ಲಿ ಪ್ರಕಾಶ್ ಪ್ರತ್ಯಕ್ಷವಾಗುತ್ತಿದ್ದನು. ಹೀಗ ಹಾವುಗಳ ರಕ್ಷಣೆ ಮಾಡಿ ಅವುಗಳನ್ನು ಕಾಡಿಗೆ ಬಿಡುತ್ತಿದ್ದ ಉರಗ ತಜ್ಷ ಪ್ರಕಾಶನ್ ಕಾಯಕವಾಗಿತ್ತು.
ಇಂತಹ ಉತ್ತಮ ಕೆಲಸ ಮಾಡುವ ಮೂಲಕ ಗ್ರಾಮಸ್ಥರೆಲ್ಲರ ಪ್ರೀತಿ ವಿಶ್ವಾಸಕ್ಕೆ ಪ್ರಕಾಶ್ ಪಾತ್ರನಾಗಿದ್ದನು. ನ. 5 ರಂದು ಬೆಳಗ್ಗೆ ಪ್ರಕಾಶ್ ಪತ್ನಿ ಶೋಭಾಳನ್ನು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದನು. ಹೀಗೆ ಕೊಲೆ ನಡೆದಿದ್ದು ಮೂರು ಎಕರೆ ಅಡಿಕೆ ತೋಟಕ್ಕಾಗಿ ಅಂತಾ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಅಂದುಕೊಂಡಿದ್ದರು. ಮದುವೆಯಾಗಿ ಐದಾರು ವರ್ಷ ದಂಪತಿ ಚೆನ್ನಾಗಿ ಇದ್ದರು. ಮದುವೆಯಾಗಿ 30 ವರ್ಷವಾಗಿತ್ತು… ಗಂಡು ಮತ್ತು ಹೆಣ್ಣು ಎರಡು ಮಕ್ಕಳಿದ್ದರು. 9 ತಿಂಗಳ ಹಿಂದೆ ಮಗ ಮಧು, ಶಿವಮೊಗ್ಗದ ವಿದ್ಯಾನಗರದಲ್ಲಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದನು.
ಈ ನಡುವೆ ಪತಿ ಪತ್ನಿ ಇಬ್ಬರ ನಡುವೆ ಸಂಬಂಧ ಹಾಳಾಗಿತ್ತು. ಹೀಗಾಗಿ ಇಬ್ಬರು ಅವರದ್ದೇ ಅಡಿಕೆ ತೋಟದಲ್ಲಿ ಪ್ರತ್ಯೇಕವಾಗಿ 14 ವರ್ಷಗಳಿಂದ ಎರಡು ಮನೆಯಲ್ಲಿ ವಾಸವಾಗಿದ್ದರು. ಈ ನಡುವೆ ನ. 5 ರಂದು ಪತ್ನಿಯ ಮರ್ಡರ್ ಮಾಡಿ ಪತಿಯು ಎಸ್ಕೇಪ್ ಆಗಿದ್ದನು. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಆಗಿತ್ತು. ಆರೋಪಿ ಪತಿಯನ್ನು ಕೊನೆಗೂ ತುಂಗಾ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆಯಲ್ಲಿ ಕೊಲೆಗೆ ಅಡಿಕೆ ತೋಟವಲ್ಲ.. ಪತ್ನಿಯ ಅನೈತಿಕ ಸಂಬಂಧ ಎನ್ನುವ ಶಾಕಿಂಗ್ ಮಾಹಿತಿ ಹೊರಬಿದ್ದಿತ್ತು. ಮಗ ಮೃತಪಟ್ಟ ಬಳಿಕವಾದ್ರೂ ಪತ್ನಿ ಬದಲಾಗುತ್ತಾಳೆ ಎನ್ನುವ ನಿರೀಕ್ಷೆಯು ಹುಸಿಯಾಗಿತ್ತು. ಇದರಿಂದ ಪ್ರಕಾಶ್ ತುಂಬಾ ಆಘಾತಕ್ಕೊಳಗಾಗಿದ್ದನು.
ಹೀಗೆ ಪತಿ ಪತ್ನಿಯರ ನಡುವೆ ಆಸ್ತಿಯ ವಿಚಾರವಾಗಿ ಸಣ್ಣ ಪುಟ್ಟ ಗಲಾಟೆ ಆಗುತ್ತಿದ್ದವು. ಈ ನಡುವೆ 7 ಎಕೆರೆ ಅಡಿಕೆ ತೋಟ ಇತ್ತು. ಅದರಲ್ಲಿ ಮೂರೂವರೆ ಎಕರೆ ಪತ್ನಿ ಹೆಸರಿನಲ್ಲಿತ್ತು. ಈ ಆಸ್ತಿ ವಿಚಾರವಾಗಿ ಪತಿ ಪತ್ನಿಯರ ನಡುವೆ ಗಲಾಟೆಯಾಗುತ್ತಿತ್ತು. ಇದೇ ವಿಚಾರಕ್ಕೆ ನ. 5 ರಂದು ದಂಪತಿಗಳ ನಡುವೆ ಗಲಾಟೆಯಾಗಿತ್ತೆಂದು ಎಲ್ಲರೂ ಅಂದು ಕೊಂಡಿದ್ದರು. ಆದ್ರೆ ಆತನ ಬಂಧನದ ಬಳಿಕ ಅಸಲಿ ವಿಷಯ ಹೊರಬಿದ್ದಿದೆ. ಪತಿಯ ಜೊತೆ ಗಲಾಟೆ ಮಾಡಿಕೊಂಡು ಪತ್ನಿಯು ಪ್ರತ್ಯೇಕವಾಗಿ ವಾಸವಾಗಿದ್ದಳು.
ಎರಡು ಮಕ್ಕಳ ತಾಯಿ ಆಗಿದ್ದ ಶೋಭಾಗೆ ಕಳೆದೆ ಕೆಲವು ವರ್ಷದಿಂದ ಅನೈತಿಕ ಸಂಬಂಧಗಳಿದ್ದವು. ಪತಿಯು ಉರಗ ತಜ್ಞನಾಗಿ ಹಾವುಗಳನ್ನು ಹಿಡಿದು ಸಮಾಜ ಸೇವೆಯಲ್ಲಿ ತೊಡಗಿದ್ದನು. ಈ ನಡುವೆ 7 ಎಕರೆ ಅಡಿಕೆ ತೋಟದಲ್ಲಿ ಪತ್ನಿಗೆ ಮೂರೂವರೆ ಎಕರೆ ಆಸ್ತಿಯನ್ನು ಪತಿಯು ಬಿಟ್ಟುಕೊಟ್ಟಿದ್ದ. ಪತ್ನಿಯು ಅಡಿಕೆ ತೋಟ ಮತ್ತು ಅದರಿಂದ ಬರುವ ಆದಾಯ ಹಾಗೂ ಗ್ರಾಮದಲ್ಲಿ ಹಾಲಿನ ಡೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ಹೀಗೆ ಉಪಜೀವನ ನಡೆಸುತ್ತಿದ್ದ ಪತ್ನಿ ಶೋಭಾ ಪತಿ ಇದ್ದರೂ ಮತ್ತೊಬ್ಬರ ಜೊತೆ ಅನೈತಿಕ ಸಂಬಂಧ ಇರುವುದು ಪತಿಗೆ ಗೊತ್ತಾಗಿದೆ. ಎಷ್ಟೇ ವಾರ್ನ್ ಮಾಡಿದರು ಪತ್ನಿ ಕೇಳಿಲ್ಲ.
ಹೀಗಾಗಿ ಪತ್ನಿ ಮಾಡಿದ ಮೋಸ ನೋಡಿ ಸಹಿಸಿಕೊಳ್ಳಲು ಆಗದೇ ನ. 5 ರಂದು ಪತ್ನಿ ಮನೆಯಲ್ಲಿ ಒಬ್ಬಳೇ ಇದ್ದಾಗ ಬರ್ಬರವಾಗಿ ಹತ್ಯೆ ಮಾಡಿ ಬಿಟ್ಟಿದ್ದನು. ಈ ಘಟನೆಯಿಂದ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿತ್ತು.
ಪತ್ನಿಯಿಂದ ಪ್ರತ್ಯೇಕವಾಗಿ ವಾಸವಿದ್ದರೂ ಸಂಬಂಧ ಮಾತ್ರ ಹಾಗೇ ಇತ್ತು. ಪತ್ನಿಗೆ ವಿಚ್ಛೇದನ ಕೊಟ್ಟಿರಲಿಲ್ಲ ಪತಿ. ಇಂದಿಲ್ಲ ನಾಳೆ ಎಲ್ಲವೂ ಸರಿ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಪತಿ ನಿರೀಕ್ಷೆ ಹುಸಿಯಾಗಿತ್ತು. ಸಿಟ್ಟಿನ ಭರದಲ್ಲಿ ಪತ್ನಿಯನ್ನು ಮರ್ಡರ್ ಮಾಡಿ ಪತಿಯು ಜೈಲು ಸೇರಿದ್ದರೆ ಪತ್ನಿಯು ಅನೈತಿಕ ಸಂಬಂಧಕ್ಕೆ ತನ್ನ ಜೀವ ಕಳೆದುಕೊಂಡು ಮಗಳನ್ನು ಅನಾಥವಾಗಿಸಿದ್ದಾಳೆ.
ಪ್ರಕಾಶ್ ಗೆ ಮಕ್ಕಳ ಭವಿಷ್ಯ ಹಿನ್ನೆಯಲ್ಲಿ ಪತ್ನಿಗೆ ಡೈವೊರ್ಡ್ ಕೊಟ್ಟಿರಲಿಲ್ಲ. ಮಗಳ ಮದುವೆಯಾಗಿತ್ತು. ಮಗನು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದನು. ಮಗ ಓಡಿಸುತ್ತಿದ್ದ ಬೈಕ್ ಇನ್ನೂ ಮನೆಯಲ್ಲಿ ಹಾಗೇ ಇದೆ. ಮಗನ ನೆನಪಿಗಾಗಿ ತಾಯಿ ಬೈಕ್ ಮನೆ ಒಳಗೆ ಜೋಪಾನವಾಗಿ ಇಟ್ಟಿದ್ದಾರೆ. ಮಕ್ಕಳಿಗೂ ತಂದೆ ಮೇಲೆ ಹೆಚ್ಚು ಪ್ರೀತಿ ಮತ್ತು ಒಲವು ಇತ್ತು. ತಾಯಿಯು ತನ್ನ ನಡತೆಯನ್ನು ಸರಿಪಡಿಸಿಕೊಳ್ಳದೇ ಇರುವುದು ಕುಟುಂಬಸ್ಥರಿಗೆ ದೊಡ್ಡ ತಲೆಬಿಸಿಯಾಗಿತ್ತು.
ಮಗಳು ಮದುವೆಯಾದ ಬಳಿಕ ತಾಯಿ ಜೊತೆ ಸಂಬಂಧ ಅಷ್ಟಕಷ್ಟೆಯಾಗಿತ್ತು. ಕೊಲೆ ನಡೆಯುವ ಒಂದು ವಾರದ ಮೊದಲು ಪ್ರಕಾಶ್ ಮನೆಯ ಹೆಂಚು ತೆಗೆದು ನಾಲ್ವರು ಮನೆ ಒಳಗೆ ನುಗ್ಗಿದ್ದರು. ಅಕ್ಕಪಕ್ಕದವರು ಬಂದ ಹಿನ್ನಲೆಯಲ್ಲಿ ನಾಲ್ವರೂ ಪ್ರಕಾಶ್ ಮನೆಯಿಂದ ಎಸ್ಕೇಪ್ ಆಗಿದ್ದರು. ಈ ಘಟನೆ ನಡೆದ ಬಳಿಕ ಪತ್ನಿಯೇ ಪತಿಯ ವಿರುದ್ದ ತನ್ನ ಕೊಲೆಗೆ ಪ್ರಕಾಶ್ ನಾಲ್ವರನ್ನು ಕಳುಹಿಸಿದ್ದ ಎನ್ನುವ ಸುಳ್ಳು ದೂರು ನೀಡಿದ್ದಳು. ತುಂಗಾ ಠಾಣೆಗೆ ಇಬ್ಬರನ್ನೂ ಕರೆದು ಬುದ್ದಿವಾದ ಹೇಳಿದ್ದರು.
ಈ ನಡುವೆ ಶೋಭಾ ಆ ನಾಲ್ವರೂ ನಮ್ಮ ಹುಡುಗರೇ ಅಂತಾ ಪೊಲೀಸರಿಗೆ ವಿಚಾರಣೆ ವೇಳೆ ಹೇಳಿದ್ದಳು. ಸುಳ್ಳು ದೂರು ಕೊಟ್ಟಿದ್ದಕ್ಕೆ ಶೋಭಾಗೆ ಬುದ್ದಿ ಹೇಳಿ ಪೊಲೀಸರು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ಈ ಘಟನೆಯ ಬಳಿಕ ಪ್ರಕಾಶ್ ಗೆ ದೊಡ್ಡ ಆಘಾತವಾಗಿತ್ತು. ಪತ್ನಿಯೇ ತನ್ನ ಕೊಲೆಗೆ ಯತ್ನಿಸಿದ್ದು ಗೊತ್ತಾಯಿತು. ಇದರ ಜೊತೆಗೆ ಪತ್ನಿಯ ಅನೈತಿಕ ಸಂಬಂಧವೂ ಮುಂದುವರೆದಿತ್ತು. ಈ ಹಿನ್ನೆಲೆಯಲ್ಲಿ ಪತ್ನಿಗೆ ಒಂದು ಬುದ್ದಿ ಕಲಿಸಬೇಕೆಂದು ಉರಗ ತಜ್ಞ ಪ್ರಕಾಶ್ ಡಿಸೈಡ್ ಮಾಡಿದ್ದನು. ಹೀಗಾಗಿ ಶೋಭಾಳನ್ನು ಅವಳ ಮನೆಯ ಬಳಿಯೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ತನ್ನ ದಶಕಗಳ ಸಿಟ್ಟು ದ್ವೇಷ ಸೇಡು ತೀರಿಸಿಕೊಂಡಿದ್ದನು.
ಹೀಗೆ ಮಹಿಳೆಯ ಅನೈತಿಕ ಸಂಬಂಧ ಹಾವಳಿ ಮಾಡುತ್ತಿತ್ತು. ಇತ್ತೀಚೆಗೆ ವಿದ್ಯಾನಗರದ ಓರ್ವನ ಜೊತೆ ಮಹಿಳೆಯು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳಂತೆ. ಮಗ ಸತ್ತ ಬಳಿಕ ಹಿರಿಯರು ಇನ್ನು ಮುಂದೆಯಾದರೂ ಚೆನ್ನಾಗಿರಬೇಕೆಂದು ಬುದ್ದಿವಾದ ಹೇಳಿದ್ದರು. ಆದ್ರೆ ಮಹಿಳೆ ಮಾತ್ರ ಬುದ್ಧಿ ಕಲಿಯಲಿಲ್ಲ. ಪತ್ನಿಯ ಕಾಟಕ್ಕೆ ಪ್ರಕಾಶ್ ತುಂಬಾ ನೊಂದಿಕೊಂಡಿದ್ದನಂತೆ. ಪ್ರಕಾಶ್ ನೊಂದಿಕೊಂಡಿರುವುದು ಇಡೀ ಊರಿನ ಜನರಿಗೆ ಮತ್ತು ಕುಟುಂಬಸ್ಥರಿಗೆ ಗೊತ್ತಿದೆ.
ಪತ್ನಿ ಮಾಡಿದ ವಂಚನೆಗೆ ಸಿಟ್ಟಿನಲ್ಲಿ ಅಚಾತುರ್ಯ ನಡೆದು ಹೋಗಿದೆ ಎಂದು ಪ್ರಕಾಶ್ ನ ಮಗಳ ಗಂಡನ ಬೇಸರದ ಮಾತುಗಳು. ಹೀಗೆ ಮಾವ ಮರಿಯಪ್ಪ ಇದ್ದಾಗ್ಲೆ ಶೋಭಾಗೆ ಮೂರೂವರೆ ಎಕರೆ ಅಡಿಕೆ ತೋಟ ಸಿಕ್ಕಿತ್ತು. ಹೀಗೆ ಆಸ್ತಿ ಬಂದ ಬಳಿಕ ಶೋಭಾಳ ದುರಂಕಾರ ಹೆಚ್ಚಾಗಿತ್ತು. ಇಷ್ಟು ವರ್ಷಗಳ ಕಾಲ ತೋಟದ ಮನೆಯಲ್ಲಿದ್ದ ಶೋಭಾ. ಕಳೆದ ಒಂದು ವಾರದ ಹಿಂದೆ ವಿದ್ಯಾನಗರದಲ್ಲಿ ಮನೆ ಮಾಡಿಕೊಂಡಿದ್ದಳು. ನ. 5 ರಂದು ಬೆಳಗ್ಗೆ ತೋಟದ ಮನೆಗೆ ಬಂದಾಗ ಶೋಭಾಳ ಮರ್ಡರ್ ಆಗಿತ್ತೆನ್ನುವುದು ಸಂಬಂಧಿಕರು ಹೇಳುತ್ತಾರೆ. ಅನೇಕ ಬಾರಿ ಪತ್ನಿಯ ನಡತೆ ಕುರಿತು ಸಂಬಂಧಿಕರ ಜೊತೆ ಚರ್ಚೆ ಮಾಡಿಕೊಂದು ಕಣ್ಣೀರು ಹಾಕಿದ್ದನು. ಪ್ರಕಾಶ್ ತನ್ನ ಮನಸ್ಸನ್ನು ಇತ್ತೀಚೆಗೆ ಕಠೋರ ಮಾಡಿಕೊಂಡಿದ್ದನು. ಯಾವುದೇ ದುಶ್ಚಟಗಳು ಪ್ರಕಾಶ್ ಗೆ ಇರಲಿಲ್ಲ. ಒಳ್ಳೆಯ ವ್ಯಕ್ತಿತ್ವ ಹೊಂದಿದ್ದನು ಅನ್ನುತ್ತಾರೆ ಸಂಬಂಧಿಕರು. (ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ)