ಪುಟ್ಟ ಬ್ಯೂಟಿ ಕ್ವೀನ್ ಜಾನ್ ಬೆನೆಟ್ ರಾಮ್ಸೆಯ ಅತ್ಯಾಚಾರ ಮತ್ತು ಕೊಲೆ ನಡೆದು 26-ವರ್ಷ ಗತಿಸಿದರೂ ಪಾಪಿ ಹಂತಕ ಇನ್ನೂ ಸಿಕ್ಕಿಲ್ಲ!!

ಶವ ಪರೀಕ್ಷೆಯ ವರದಿ ಸಿಕ್ಕ ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದು ದೃಢಪಟ್ಟಿತ್ತು. ಆದರೆ ಅಪರಾಧ ನಡೆದ ಸ್ಥಳದಲ್ಲಿ ಪೊಲೀಸರು ಎಸಗಿದ ಪ್ರಮಾದಗಳು ರೇಪಿಸ್ಟ್ ಮತ್ತು ಹಂತಕನನ್ನು ಪತ್ತೆ ಹಚ್ಚುವುದು ದುಸ್ಸಾಧ್ಯವಾಗಿಸಿದವು.

ಪುಟ್ಟ ಬ್ಯೂಟಿ ಕ್ವೀನ್ ಜಾನ್ ಬೆನೆಟ್ ರಾಮ್ಸೆಯ ಅತ್ಯಾಚಾರ ಮತ್ತು ಕೊಲೆ ನಡೆದು 26-ವರ್ಷ ಗತಿಸಿದರೂ ಪಾಪಿ ಹಂತಕ ಇನ್ನೂ ಸಿಕ್ಕಿಲ್ಲ!!
ಪುಟ್ಟ ಸುಂದರಿ ಜಾನ್ ಬೆನೆಟ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 11, 2022 | 8:08 AM

ಅಮೆರಿಕ ಕೊಲ್ಯರಾಡೊ ಬೌಲ್ಡರ್ ಎಂಬಲ್ಲಿ ಸುಮಾರು 26 ವರ್ಷಗಳ ಹಿಂದೆ ನಡೆದ 6-ವರ್ಷ-ವಯಸ್ಸಿನ ಜಾನ್ ಬೆನೆಟ್ ರಾಮ್ಸೆಯ (Jon Benet Ramsey) ಕೊಲೆ ಪ್ರಕರಣ ಬೇಧಿಸಲು ಅಮೆರಿಕದ ಎಫ್ ಬಿ ಐಗೆ (FBI) ಬೇಧಿಸುವುದು ಸಾಧ್ಯವಾಗಲಿಲ್ಲ ಮತ್ತು ಅಮೆರಿಕದ ಜನರಲ್ಲಿ ವಿಪರೀತ ಕುತೂಹಲವನ್ನು ಸೃಷ್ಟಿಸಿದ ಪ್ರಕರಣವಿದು. ನೋಡಲು ಬಹಳ ಮುದ್ದು ಮುದ್ದಾಗಿದ್ದ ಮತ್ತು ಮಕ್ಕಳಿಗಾಗಿ ನಡೆಯುತ್ತಿದ್ದ ಸೌಂದರ್ಯ ಸ್ಪರ್ಧೆಗಳಲ್ಲಿ ಬ್ಯೂಟಿ ಕ್ವೀನ್ ಪಟ್ಟ ಮುಡಿಗೇರಿಸಿಕೊಳ್ಳುತ್ತಿದ್ದ ಜಾನ್ ಬೆನೆಟ್ ತನ್ನ ಅಮ್ಮ-ಅಪ್ಪ ಪೆಟ್ರೇಸಿಯಾ (Patricia) ಮತ್ತು ಜಾನ್ ರಾಮ್ಸೇ (John Ramsey), ಹಾಗೂ 9-ವರ್ಷದ ಅಣ್ಣ ಬುರ್ಕೆ ಜೊತೆ ವಾಸವಾಗಿದ್ದಳು.

ಸಾಕಷ್ಟು ಶ್ರೀಮಂತರಾಗಿದ್ದ ಮತ್ತು  ಬದುಕನ್ನು ವೈಭವ ಹಾಗೂ ಸಂತೋಷದಿಂದ ಕಳೆಯುತ್ತಿದ್ದ ರಾಮ್ಸೇ ಕುಟುಂಬಕ್ಕೆ 1996 ರ ಕ್ರಿಸ್ಮಸ್ ನಂತರದ ದಿನ ನಿಜಕ್ಕೂ ಕರಾಳವಾಗಿತ್ತು. ಹಬ್ಬದ ಮರುದಿನ ಬೆಳಗ್ಗೆ ಎದ್ದ ಪೆಟ್ರೆಸಿಯಾ ಮಗಳ ರೂಮಿನಲ್ಲಿ ಅಪಹರಣಕಾರ ಬಿಟ್ಟು ಹೋಗಿದ್ದ ಮೂರು ಪೇಜುಗಳ ಪತ್ರ ನೋಡಿ ಗರಬಡಿದವಳಂತಾದಳು.

ನಿಮ್ಮ ಮಗಳು ಸುರಕ್ಷಿತ ಮತ್ತು ಜೀವಂತವಾಗಿ ಬೇಕು ಅಂತಾದರೆ ಕೆಳಗೆ ನಮೂದಿಸಿರುವ ವಿಳಾಸಕ್ಕೆ 1,18,000 ಡಾಲರ್ ಗಳನ್ನು ತಲುಪಿಸಬೇಕೆಂದು ಅದರಲ್ಲಿ ಬರೆದಿತ್ತು. ಪೆಟ್ರೇಸಿಯಾ ನಡುಗುತ್ತಿದ್ದ ಕೈಗಳಿಂದ 911 ಗೆ ಡಯಲ್ ಮಾಡಿದಳು.

ಆದರೆ ಅಸಲಿಗೆ ಜಾನ್ ಬೆನೆಟ್ ಳ ಅಪಹರಣ ನಡೆದಿರಲೇ ಇಲ್ಲ. ಕೆಲಗಂಟೆಗಳ ನಂತರ ಅವಳ ಮೃತದೇಹ ಮನೆಯ ಮತ್ತೊಂದು ಕೋಣೆಯಲ್ಲಿ ಸಿಕ್ಕಿತ್ತು. ಅವಳ ಮರಣೋತ್ತರ ಪರೀಕ್ಷೆ ನಡೆದಾಗ ಲೈಂಗಿಕ ಅತ್ಯಾಚಾರ ನಡೆದಿದ್ದು ಮತ್ತು ಮಗುವಿನ ಬುರುಡೆ ಒಡೆದಿದ್ದು ಪತ್ತೆಯಾಯಿತು. ಪುಟ್ಟ ಸೌಂದರ್ಯ ದೇವತೆಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿತ್ತು.

ಶವ ಪರೀಕ್ಷೆಯ ವರದಿ ಸಿಕ್ಕ ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದು ದೃಢಪಟ್ಟಿತ್ತು. ಆದರೆ ಅಪರಾಧ ನಡೆದ ಸ್ಥಳದಲ್ಲಿ ಪೊಲೀಸರು ಎಸಗಿದ ಪ್ರಮಾದಗಳು ರೇಪಿಸ್ಟ್ ಮತ್ತು ಹಂತಕನನ್ನು ಪತ್ತೆ ಹಚ್ಚುವುದು ದುಸ್ಸಾಧ್ಯವಾಗಿಸಿದವು.

ಕುಟುಂಬದ ಸದಸ್ಯರ ಭಿನ್ನ ಹೇಳಿಕೆಗಳು ಮತ್ತು ಮನೆಯಲ್ಲಿದ್ದ ಪೇಪರ್ ಮೇಲೆಯೇ ಬರೆದು ಹಣದ ಬೇಡಿಕೆಯಿಟ್ಟಿದ್ದರಿಂದ ಪೊಲೀಸರು ರಾಮ್ಸೇ ಕುಟುಂಬದ ಸದಸ್ಯರನ್ನು ವಿಚಾರಣೆಗೊಳಪಡಿಸಿದರು. ಜಾನ್ ಮತ್ತು ಪೆಟ್ರೇಸಿಯ ವಿರುದ್ಧ ಪೊಲೀಸರು ಯಾವುದೇ ಚಾರ್ಜ್ ವಿಧಿಸಲಿಲ್ಲ. ಮಗಳ ಕೊಲೆಯಲ್ಲಿ ಅವರ ಕೈವಾಡವೇನೂ ಕಾಣಲಿಲ್ಲ. (ಆದರೆ ಬುರ್ಕೆಯನ್ನು ಕೆಲವು ಜನ ಸಂಶಯಿಸಿದ್ದರು).

ಪೊಲೀಸರು ಇನ್ನೂ ಹಲವಾರು ಜನರ ವಿಚಾರಣೆ ನಡೆಸಿದರು ಆದರೆ ಕೊಲೆಗಾರನ ಸುಳಿವು ಮಾತ್ರ ಸಿಗಲೇ ಇಲ್ಲ. ಅವಳ ರೇಪ್ ಮತ್ತು ಕೊಲೆ ನಡೆದು 26 ವರ್ಷಗಳು ಗತಿಸಿವೆ, ಆದರೆ ಪ್ರಕರಣ ಇವತ್ತಿನವರೆಗೆ ಇತ್ಯರ್ಥಗೊಳ್ಳದೆ ಹಾಗೆಯೇ ಉಳಿದುಬಿಟ್ಟಿದೆ!!!

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ