ಬೇರೊಬ್ಬಳ ಜೊತೆ ಸಂಬಂಧ, ಪತ್ನಿಯನ್ನು ಕೊಂದು ಕುಟುಂಬ ಸಹಿತ ಪತಿ ಪರಾರಿ

ಐದು ವರ್ಷಗಳ ಹಿಂದೆ ಮದುವೆಯಾಗಿದ್ದಾಕೆ ಇದೀಗ ಪತಿಯ ವರದಕ್ಷಿಣ ಕಿರುಕುಳ ಹಾಗೂ ಅಕ್ರಮ ಸಂಬಂಧಕ್ಕೆ ಜೀವ ಕಳೆದುಕೊಂಡಿದ್ದಾಳೆ. ಪ್ರಕರಣ ಸಂಬಂಧ ದಾವಣಗೆರೆಯ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇರೊಬ್ಬಳ ಜೊತೆ ಸಂಬಂಧ, ಪತ್ನಿಯನ್ನು ಕೊಂದು ಕುಟುಂಬ ಸಹಿತ ಪತಿ ಪರಾರಿ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಗೃಹಿಣಿಯ ಅನುಮಾನಸ್ಪದ ಸಾವು

Updated on: May 18, 2023 | 5:27 PM

ದಾವಣಗೆರೆ: ತನ್ನನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಭಾವಿಸಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದಾಕೆ ಇದೀಗ ಪತಿಯ ಅಕ್ರಮ ಸಂಬಂಧ (Immoral relationship) ಹಾಗೂ ವರದಕ್ಷಿಣೆ ಕಿರುಕುಳದಿಂದ (Dowry harassment) ದಾರುಣ ಅಂತ್ಯಕಂಡಿದ್ದಾಳೆ. ಹೌದು, ಪತಿಮಹಾಶಯನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ತನ್ನ ಕುಟುಂಬಸ್ಥರೊಂದಿಗೆ ಪರಾರಿಯಾದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿ ನಡೆದಿದೆ. ಅನಿತಾ (28) ಹತ್ಯೆಯಾದ ಗೃಹಿಣಿ.

ಐದು ವರ್ಷಗಳ ಹಿಂದೆಯಷ್ಟೇ ಅನಿತಾ ಅಶೋಕ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಆದರೆ ಅಶೋಕನಿಗೆ ಬೇರೆ ಯುವತಿ ಜೊತೆ ಅನೈತಿಕ ಸಂಬಂಧವಿತ್ತು. ಇದೇ ಕಾರಣಕ್ಕೆ ವರದಕ್ಷಿಣೆ ಕಿರುಕುಳ ನೀಡಿ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಅನಿತಾಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಸದ್ಯ ಘಟನೆ ನಂತರ ಎಸ್ಕೇಪ್ ಆಗಿರುವ ಅಳಿಯ ಮತ್ತು ಅವರ ಕುಟುಂಬಸ್ಥರು ವಿರುದ್ಧ ಪೋಷಕರು ಬಸವಪಟ್ಟಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: Viral Video: ವರದಕ್ಷಿಣೆ ಕೇಳ್ತೀಯಾ… ಮಗಳು, ನೆಂಟರಿಷ್ಟರ ಎದುರೇ ಅಳಿಯನಿಗೆ ಬಿತ್ತು ಮಾವನಿಂದ ಚಪ್ಪಲಿ ಏಟು!

ಅನಿತಾ ಕುಟುಂಬಸ್ಥರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇತ್ತ ಇಬ್ಬರು ಪುಟ್ಟ ಮಕ್ಕಳು ಅಮ್ಮನ ಪ್ರೀತಿಯಿಂದ ವಂಚಿತರಾಗಿದ್ದಾರೆ.

ಮತ್ತಷ್ಟು ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ