ಅಶ್ಲೀಲ ವಿಡಿಯೋ ಕರೆ​ ಮಾಡಿ.. ಇನ್ಸ್​​ಪೆಕ್ಟರ್​​ಗೆ ಬ್ಲ್ಯಾಕ್​ಮೇಲ್ ಮಾಡಿದ ಅಪರಿಚಿತ ಯುವತಿ

| Updated By: ಸಾಧು ಶ್ರೀನಾಥ್​

Updated on: Dec 18, 2020 | 9:46 AM

ಅಶ್ಲೀಲ ವಿಡಿಯೋ ಕರೆ​ ಮಾಡಿ ಇನ್ಸ್​​ಪೆಕ್ಟರ್​​ಗೆ ಯುವತಿ ಬ್ಲ್ಯಾಕ್​ಮೇಲ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವಿಡಿಯೋ ಕಾಲ್ ಸ್ಕ್ರೀನ್​ಶಾಟ್ ಕಳುಹಿಸಿ ಸಿ. ದಯಾನಂದ್ ಬಳಿ 11 ಸಾವಿರ ರೂಪಾಯಿಗೆ ಬೇಡಿಕೆ ನೀಡಿದ್ದಾಳೆ.

ಅಶ್ಲೀಲ ವಿಡಿಯೋ ಕರೆ​ ಮಾಡಿ.. ಇನ್ಸ್​​ಪೆಕ್ಟರ್​​ಗೆ ಬ್ಲ್ಯಾಕ್​ಮೇಲ್ ಮಾಡಿದ ಅಪರಿಚಿತ ಯುವತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ವಿಡಿಯೋಗಳನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಯಾಮಾರಿಸುವುದು ಇತ್ತೀಚೆಗೆ ಒಂದು ರೀತಿಯ ಬಿಸ್​ನೆಸ್ ಆಗಿದೆ. ಸದ್ಯ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಅಶ್ಲೀಲ ವಿಡಿಯೋ ಕರೆ​ ಮಾಡಿ ಇನ್ಸ್​​ಪೆಕ್ಟರ್​​ಗೆ ಯುವತಿ ಬ್ಲ್ಯಾಕ್​ಮೇಲ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಡಿಸೆಂಬರ್ 8ರಂದು ಅಪರಿಚಿತ ಯುವತಿ ಎಸಿಬಿ ಸಿ. ದಯಾನಂದ್​ಗೆ ಅಶ್ಲೀಲ ವಿಡಿಯೋ ಕರೆ​ ಮಾಡಿದ್ದಳು. ಇದು ಅಶ್ಲೀಲ ಕರೆ ಎಂದು ತಿಳಿಯುತ್ತಿದ್ದಂತೆ ಎಸಿಬಿ ಕರೆಯನ್ನು ಸ್ಥಗಿತಗೊಳಿಸಿದ್ದರು. ಆದರೆ ಅಪರಿಚಿತ ಯುವತಿ ವಿಡಿಯೋ ಕಾಲ್ ಸ್ಕ್ರೀನ್​ಶಾಟ್ ಕಳುಹಿಸಿ ಸಿ. ದಯಾನಂದ್ ಬಳಿ 11 ಸಾವಿರ ರೂಪಾಯಿಗೆ ಬೇಡಿಕೆ ನೀಡಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಆಕೆ ಹಣ ನೀಡದಿದ್ದರೆ ಫೇಸ್‌ಬುಕ್‌ನಲ್ಲಿ ವಿಡಿಯೋ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ. ಸದ್ಯ ಸೆಂಟ್ರಲ್ ಸಿಇಎನ್ (CEN) ಠಾಣೆಯಲ್ಲಿ‌ ಎಸಿಬಿ ದಯಾನಂದ್ ದೂರು ದಾಖಲಿಸಿದ್ದಾರೆ

ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್..

 

 

Published On - 5:01 pm, Fri, 11 December 20