
ವೆಲ್ಲಿ೦ಗ್ಟನ್: ಭಾರತ ತಂಡ ಚರಿತ್ರೆ ಸೃಷ್ಟಿಸಿದೆ. ನ್ಯೂಜಿಲೆಂಡ್ ನೆಲದಲ್ಲಿ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿದೆ. ನ್ಯೂಜಿಲೆಂಡ್ ನೆಲದಲ್ಲಿ ರಣರೋಚಕ ಆಟವಾಡಿದ ಟೀಮ್ ಇಂಡಿಯಾ ಕಪ್ಪುಕುದುರೆಗಳನ್ನ ಕಟ್ಟಿಹಾಕಿ ಮಹಾನ್ ದಾಖಲೆಯನ್ನ ಬರೆದಿದೆ.
ಕಿವೀಸ್ಗೆ 180ರನ್ ಗುರಿ:
ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ದುಕೊಳ್ಳುತ್ತೆ. ಟೀಮ್ ಇಂಡಿಯಾ ಪರ ಓಪನರ್ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮಾಡ್ತಾರೆ. ಮೊದಲೆರೆಡು ಪಂದ್ಯದಲ್ಲಿ ಮಂಕಾಗಿದ್ದ ರೋಹಿತ್, ಹ್ಯಾಮಿಲ್ಟನ್ನಲ್ಲಿ ಹಿಟ್ ಮ್ಯಾನ್ ಅವತಾರ ತಾಳಿದ್ರು. 40 ಬಾಲ್ನಲ್ಲಿ 6 ಬೌಂಡ್ರಿ ಹಾಗೂ 3 ಸಿಕ್ಸರ್ ಸಹಿತ 65ರನ್ಗಳನ್ನ ಗಳಿಸಿದ್ರು. ಇನ್ನು ನಾಯಕ ಕೊಹ್ಲಿ 38 ರನ್ಗಳಿಸಿ ನಾಯಕನಾಗಿ ಟಿಟ್ವೆಂಟಿ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳಿಸಿದ ದಾಖಲೆ ಬರೆದ್ರು. ಇನ್ನು ಕನ್ನಡಿಗ ಕೆ.ಎಲ್.ರಾಹುಲ್ 27 ರನ್ಗಳಿಸಿದ್ರು. ಈ ಮೂಲಕ ಟೀಮ್ ಇಂಡಿಯಾ ನಿಗಧಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179ರನ್ಗಳನ್ನ ಗಳಿಸುತ್ತೆ.
180ರನ್ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್:
ಕ್ರೀಡಾಭಿಮಾನಿಗಳ ಕಿಕ್ ಹೆಚ್ಚಿಸಿದ ಸೂಪರ್ ಓವರ್!
ಭಾರತದ ಪರ ಸೂಪರ್ ಓವರ್ ಚಾಲೆಂಜ್ಗಿಳಿದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ರನ್ ಪರಾಕ್ರಮ ತೋರಿಸಿದ್ರು. ಮೊದಲ ಬಾಲ್ನಲ್ಲಿ 2ರನ್ಗಳಿಸಿದ ರೋಹಿತ್, ಕೊನೆಯ 2 ಬಾಲ್ನಲ್ಲಿ 10ರನ್ ಬೇಕಿದ್ದಾಗ ಬ್ಯಾಕ್ ಟು ಬ್ಯಾಕ್ ಸೂಪರ್ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ದೊರಕಿಸಿಕೊಟ್ರು. ಅಂದ್ಹಾಗೆ ಸೂಪರ್ ಓವರ್ನಲ್ಲಿ ರೋಹಿತ್ ಸಿಕ್ಸರ್ ಸಿಡಿಸೋದಕ್ಕೆ ಸಾಥ್ ಕೊಟ್ಟಿದ್ದೇ ಕನ್ನಡಿಗ ರಾಹುಲ್.
ಚರಿತ್ರೆ ಸೃಷ್ಟಿಸಿದ ಟೀಂ ಇಂಡಿಯಾ:
ಟಿಮ್ ಸೌಥಿ ಎಸೆದ 3ನೇ ಬಾಲ್ ಅನ್ನ ಚಾಣಾಕ್ಷತನದಿಂದ ಬೌಂಡ್ರಿಗಟ್ಟಿದ ರಾಹುಲ್, ಪಂದ್ಯದ ಜೋಷ್ ಹೆಚ್ಚಿಸಿದ್ರು. ಕೊನೆಗೆ ರೋಹಿತ್ ಭರ್ಜರಿ 2 ಸಿಕ್ಸರ್ನೊಂದಿಗೆ ಪಂದ್ಯವನ್ನ ಗೆಲ್ಲಿಸಿಕೊಟ್ಟು ಚರಿತ್ರೆ ಸೃಷ್ಟಿಸಿಯ ಅವತಾರ ತಾಳಿದ್ರು. ಈ ಗೆಲುವಿನ ಮೂಲಕ ಕೊಹ್ಲಿ ಸೈನ್ಯ, ನ್ಯೂಜಿಲೆಂಡ್ ನೆಲದಲ್ಲಿ ಚೊಚ್ಚಲ ಬಾರಿಗೆ ಟಿಟ್ವೆಂಟಿ ಸರಣಿ ಗೆದ್ದ ಸಾದನೆಯನ್ನ ಮಾಡಿ ಚರಿತ್ರೆ ಸೃಷ್ಟಿಸಿದೆ. ಟಿಟ್ವೆಂಟಿ ಇತಿಹಾಸದಲ್ಲೇ ಮೊದಲ ಬಾರಿಗೆ ಸೂಪರ್ ಓವರ್ನಲ್ಲಿ ರಣರೋಚಕತೆಯಿಂದ ಗೆದ್ದ ಕೊಹ್ಲಿ ಗ್ಯಾಂಗ್ ಚರಿತ್ರೆ ಸೃಷ್ಟಿಸಿದ ಅವತಾರಕ್ಕೆ ಕ್ರೀಡಾಭಿಮಾನಿಗಳು ಸಲಾಂ ಹೊಡೀತಿದ್ದಾರೆ.
Published On - 9:51 am, Thu, 30 January 20