AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಟ್ ಗುಂಡಿ ವಿಚಾರಕ್ಕೆ ಜಗಳ: ಪಕ್ಕದ ಮನೆಯವನಿಂದ ಯುವಕನಿಗೆ ಚಾಕು ಇರಿತ

ನೆಲಮಂಗಲ: ಪಿಟ್ ಗುಂಡಿ ತೆಗೆಯೋ ವಿಚಾರದಲ್ಲಿ ಗಲಾಟೆಯಾಗಿ, ಯುವಕನಿಗೆ ಪಕ್ಕದ ಮನೆಯಾತ ಚಾಕು ಇರಿದಿರುವ ಘಟನೆ ಹೆಸರಘಟ್ಟ ರಸ್ತೆಯ ಗಣಪತಿ ನಗರದಲ್ಲಿ ನಡೆದಿದೆ. ಪ್ರದೀಪ್​(22) ಚಾಕು ಇರಿತಕ್ಕೊಳಗಾದ ಯುವಕ. ಗಣಪತಿ ನಗರದಲ್ಲಿ ಮನೆ ನಿರ್ಮಾಣ ಮಾಡಿ ಪಿಟ್ ಗುಂಡಿ ತೆಗೆಯೋ ವಿಚಾರಕ್ಕೆ ಗಲಾಟೆಯಾಗಿದೆ. ಜಗಳ ತಾರಕ್ಕಕೇರಿ ನೆರೆಮನೆಯಾತ ಪ್ರದೀಪ್​ಗೆ ಚಾಕು ಇರಿದಿದ್ದಾನೆ. ಜ.26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ […]

ಪಿಟ್ ಗುಂಡಿ ವಿಚಾರಕ್ಕೆ ಜಗಳ: ಪಕ್ಕದ ಮನೆಯವನಿಂದ ಯುವಕನಿಗೆ ಚಾಕು ಇರಿತ
ಸಾಧು ಶ್ರೀನಾಥ್​
|

Updated on:Jan 30, 2020 | 11:14 AM

Share

ನೆಲಮಂಗಲ: ಪಿಟ್ ಗುಂಡಿ ತೆಗೆಯೋ ವಿಚಾರದಲ್ಲಿ ಗಲಾಟೆಯಾಗಿ, ಯುವಕನಿಗೆ ಪಕ್ಕದ ಮನೆಯಾತ ಚಾಕು ಇರಿದಿರುವ ಘಟನೆ ಹೆಸರಘಟ್ಟ ರಸ್ತೆಯ ಗಣಪತಿ ನಗರದಲ್ಲಿ ನಡೆದಿದೆ. ಪ್ರದೀಪ್​(22) ಚಾಕು ಇರಿತಕ್ಕೊಳಗಾದ ಯುವಕ.

ಗಣಪತಿ ನಗರದಲ್ಲಿ ಮನೆ ನಿರ್ಮಾಣ ಮಾಡಿ ಪಿಟ್ ಗುಂಡಿ ತೆಗೆಯೋ ವಿಚಾರಕ್ಕೆ ಗಲಾಟೆಯಾಗಿದೆ. ಜಗಳ ತಾರಕ್ಕಕೇರಿ ನೆರೆಮನೆಯಾತ ಪ್ರದೀಪ್​ಗೆ ಚಾಕು ಇರಿದಿದ್ದಾನೆ. ಜ.26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿ ನಾರಾಯಣಸ್ವಾಮಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Published On - 11:12 am, Thu, 30 January 20