AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಓವರ್​ನಲ್ಲಿ 2 ಸೂಪರ್ ಸಿಕ್ಸರ್, ಸರಣಿ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತ!

ವೆಲ್ಲಿ೦ಗ್ಟನ್: ಭಾರತ ತಂಡ ಚರಿತ್ರೆ ಸೃಷ್ಟಿಸಿದೆ. ನ್ಯೂಜಿಲೆಂಡ್ ನೆಲದಲ್ಲಿ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿದೆ. ನ್ಯೂಜಿಲೆಂಡ್ ನೆಲದಲ್ಲಿ ರಣರೋಚಕ ಆಟವಾಡಿದ ಟೀಮ್ ಇಂಡಿಯಾ ಕಪ್ಪುಕುದುರೆಗಳನ್ನ ಕಟ್ಟಿಹಾಕಿ ಮಹಾನ್ ದಾಖಲೆಯನ್ನ ಬರೆದಿದೆ. ಕಿವೀಸ್​ಗೆ 180ರನ್ ಗುರಿ: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ದುಕೊಳ್ಳುತ್ತೆ. ಟೀಮ್ ಇಂಡಿಯಾ ಪರ ಓಪನರ್ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮಾಡ್ತಾರೆ. ಮೊದಲೆರೆಡು ಪಂದ್ಯದಲ್ಲಿ ಮಂಕಾಗಿದ್ದ ರೋಹಿತ್, ಹ್ಯಾಮಿಲ್ಟನ್​ನಲ್ಲಿ ಹಿಟ್ ಮ್ಯಾನ್ ಅವತಾರ ತಾಳಿದ್ರು. 40 ಬಾಲ್​ನಲ್ಲಿ 6 ಬೌಂಡ್ರಿ ಹಾಗೂ 3 ಸಿಕ್ಸರ್ […]

ಸೂಪರ್ ಓವರ್​ನಲ್ಲಿ 2 ಸೂಪರ್ ಸಿಕ್ಸರ್, ಸರಣಿ ಗೆದ್ದು ಚರಿತ್ರೆ ಸೃಷ್ಟಿಸಿದ ಭಾರತ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jan 30, 2020 | 10:48 AM

Share

ವೆಲ್ಲಿ೦ಗ್ಟನ್: ಭಾರತ ತಂಡ ಚರಿತ್ರೆ ಸೃಷ್ಟಿಸಿದೆ. ನ್ಯೂಜಿಲೆಂಡ್ ನೆಲದಲ್ಲಿ ಕೊಹ್ಲಿ ಪಡೆ ಇತಿಹಾಸ ನಿರ್ಮಿಸಿದೆ. ನ್ಯೂಜಿಲೆಂಡ್ ನೆಲದಲ್ಲಿ ರಣರೋಚಕ ಆಟವಾಡಿದ ಟೀಮ್ ಇಂಡಿಯಾ ಕಪ್ಪುಕುದುರೆಗಳನ್ನ ಕಟ್ಟಿಹಾಕಿ ಮಹಾನ್ ದಾಖಲೆಯನ್ನ ಬರೆದಿದೆ.

ಕಿವೀಸ್​ಗೆ 180ರನ್ ಗುರಿ: ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ದುಕೊಳ್ಳುತ್ತೆ. ಟೀಮ್ ಇಂಡಿಯಾ ಪರ ಓಪನರ್ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮಾಡ್ತಾರೆ. ಮೊದಲೆರೆಡು ಪಂದ್ಯದಲ್ಲಿ ಮಂಕಾಗಿದ್ದ ರೋಹಿತ್, ಹ್ಯಾಮಿಲ್ಟನ್​ನಲ್ಲಿ ಹಿಟ್ ಮ್ಯಾನ್ ಅವತಾರ ತಾಳಿದ್ರು. 40 ಬಾಲ್​ನಲ್ಲಿ 6 ಬೌಂಡ್ರಿ ಹಾಗೂ 3 ಸಿಕ್ಸರ್ ಸಹಿತ 65ರನ್​ಗಳನ್ನ ಗಳಿಸಿದ್ರು. ಇನ್ನು ನಾಯಕ ಕೊಹ್ಲಿ 38 ರನ್​ಗಳಿಸಿ ನಾಯಕನಾಗಿ ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಹೆಚ್ಚು ರನ್​ಗಳಿಸಿದ ದಾಖಲೆ ಬರೆದ್ರು. ಇನ್ನು ಕನ್ನಡಿಗ ಕೆ.ಎಲ್.ರಾಹುಲ್ 27 ರನ್​ಗಳಿಸಿದ್ರು. ಈ ಮೂಲಕ ಟೀಮ್ ಇಂಡಿಯಾ ನಿಗಧಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179ರನ್​ಗಳನ್ನ ಗಳಿಸುತ್ತೆ.

180ರನ್ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್: ಭಾರತ ನೀಡಿದ್ದ 180ರನ್ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡ ಪರ, ಕೇನ್ ವಿಲಿಯಮ್ಸನ್ ರನ್​ವೀರನಾಗಿ ಘರ್ಜಿಸಿದ್ರು 3ನೇ ಕ್ರಮಾಂಕದಲ್ಲಿ ಕ್ರೀಸ್​ಗಿಳಿದಿದ್ದ ವಿಲಿಯಮ್ಸನ್, ಕೊನೆ ಓವರ್​ತನಕ ಕ್ರೀಸ್​ನಲ್ಲಿದ್ದು ಬರೋಬ್ಬರಿ 95ರನ್​ಗಳಿಸಿದ್ರು. ಕೊನೆಯ ಓವರ್​ನಲ್ಲಿ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಔಟ್ ಮಾಡಿದ ಮೊಹಮ್ಮದ್ ಶಮಿ ಪಂದ್ಯವನ್ನ ಟೈ ಮಾಡಿಕೊಟ್ರು. ಈ ಮೂಲಕ ಹ್ಯಾಮಿಲ್ಟನ್ ಪಂದ್ಯ ಸೂಪರ್ ಓವರ್​ ಆಗಿ ಡಬಲ್ ಹೈವೋಲ್ಟೇಜ್ ಪಡೆದುಕೊಳ್ತು.

ಕ್ರೀಡಾಭಿಮಾನಿಗಳ ಕಿಕ್ ಹೆಚ್ಚಿಸಿದ ಸೂಪರ್ ಓವರ್! ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ ಹಾಗೂ ಕೇನ್ ವಿಲಿಯಮ್ಸನ್ ಕಣಕ್ಕಿಳೀತಾರೆ. ವಿಲಿಯಮ್ಸನ್ ಸಿಕ್ಸರ್ ಜೊತೆಗೊಂದು ಬೌಂಡ್ರಿ ಬಾರಿಸಿದ್ರೆ, ಗಪ್ಟಿಲ್ ಒಂದು ಬೌಂಡ್ರಿ ಬಾರಿಸ್ತಾರೆ. ಈ ಮೂಲಕ ನ್ಯೂಜಿಲೆಂಡ್ ತಂಡ ಭಾರತಕ್ಕೆ ಸೂಪರ್ ಓವರ್​ನಲ್ಲಿ 18ರನ್​ಗಳ ಗುರಿಯನ್ನ ನೀಡುತ್ತೆ.

ಭಾರತದ ಪರ ಸೂಪರ್ ಓವರ್ ಚಾಲೆಂಜ್​ಗಿಳಿದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ರನ್​ ಪರಾಕ್ರಮ ತೋರಿಸಿದ್ರು. ಮೊದಲ ಬಾಲ್​ನಲ್ಲಿ 2ರನ್​ಗಳಿಸಿದ ರೋಹಿತ್, ಕೊನೆಯ 2 ಬಾಲ್​ನಲ್ಲಿ 10ರನ್ ಬೇಕಿದ್ದಾಗ ಬ್ಯಾಕ್ ಟು ಬ್ಯಾಕ್ ಸೂಪರ್ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ದೊರಕಿಸಿಕೊಟ್ರು. ಅಂದ್ಹಾಗೆ ಸೂಪರ್ ಓವರ್​ನಲ್ಲಿ ರೋಹಿತ್ ಸಿಕ್ಸರ್ ಸಿಡಿಸೋದಕ್ಕೆ ಸಾಥ್ ಕೊಟ್ಟಿದ್ದೇ ಕನ್ನಡಿಗ ರಾಹುಲ್.

ಚರಿತ್ರೆ ಸೃಷ್ಟಿಸಿದ ಟೀಂ ಇಂಡಿಯಾ: ಟಿಮ್ ಸೌಥಿ ಎಸೆದ 3ನೇ ಬಾಲ್​ ಅನ್ನ ಚಾಣಾಕ್ಷತನದಿಂದ ಬೌಂಡ್ರಿಗಟ್ಟಿದ ರಾಹುಲ್, ಪಂದ್ಯದ ಜೋಷ್ ಹೆಚ್ಚಿಸಿದ್ರು. ಕೊನೆಗೆ ರೋಹಿತ್ ಭರ್ಜರಿ 2 ಸಿಕ್ಸರ್​ನೊಂದಿಗೆ ಪಂದ್ಯವನ್ನ ಗೆಲ್ಲಿಸಿಕೊಟ್ಟು ಚರಿತ್ರೆ ಸೃಷ್ಟಿಸಿಯ ಅವತಾರ ತಾಳಿದ್ರು. ಈ ಗೆಲುವಿನ ಮೂಲಕ ಕೊಹ್ಲಿ ಸೈನ್ಯ, ನ್ಯೂಜಿಲೆಂಡ್ ನೆಲದಲ್ಲಿ ಚೊಚ್ಚಲ ಬಾರಿಗೆ ಟಿಟ್ವೆಂಟಿ ಸರಣಿ ಗೆದ್ದ ಸಾದನೆಯನ್ನ ಮಾಡಿ ಚರಿತ್ರೆ ಸೃಷ್ಟಿಸಿದೆ. ಟಿಟ್ವೆಂಟಿ ಇತಿಹಾಸದಲ್ಲೇ ಮೊದಲ ಬಾರಿಗೆ ಸೂಪರ್ ಓವರ್​ನಲ್ಲಿ ರಣರೋಚಕತೆಯಿಂದ ಗೆದ್ದ ಕೊಹ್ಲಿ ಗ್ಯಾಂಗ್ ಚರಿತ್ರೆ ಸೃಷ್ಟಿಸಿದ ಅವತಾರಕ್ಕೆ ಕ್ರೀಡಾಭಿಮಾನಿಗಳು ಸಲಾಂ ಹೊಡೀತಿದ್ದಾರೆ.

Published On - 9:51 am, Thu, 30 January 20

Follow Us
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಹೈಕೋರ್ಟ್​ನಲ್ಲಿ ದರ್ಶನ್ ಪರ ಆದೇಶ ಬಂದಿದ್ದು ಹೇಗೆ? ವಿವರ ನೀಡಿದ ವಕೀಲರು
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಡಿಕೆಶಿ ಸರ್ಕಾರಕ್ಕೆ 100 ದಿನ: ದಿಲ್ಲಿಗೆ ಬರುವಂತೆ ಹೈಕಮಾಂಡ್ ಆಹ್ವಾನ
ಡಿಕೆಶಿ ಸರ್ಕಾರಕ್ಕೆ 100 ದಿನ: ದಿಲ್ಲಿಗೆ ಬರುವಂತೆ ಹೈಕಮಾಂಡ್ ಆಹ್ವಾನ