AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಯುವಕನ ರುಂಡ-ಮುಂಡ ಬೇರ್ಪಟ್ಟಿದ್ದ ನಿಗೂಢ ಕೇಸ್ ಭೇದಿಸಿದ ಖಾಕಿ

ಕಲಬುರಗಿಯಲ್ಲಿ ರುಂಡ ಮುಂಡ ಬೇರ್ಪಟ್ಟ ಯುವಕನ ಶವ ಪತ್ತೆ ಪ್ರಕರಣವನ್ನು ಗಾಣಗಾಪುರ ಪೊಲೀಸರು ಕೇವಲ 48 ಗಂಟೆಗಳಲ್ಲಿ ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಗಾಣಗಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊದಲಿಗೆ ಇದು ಕೊಲೆನಾ ಅಥವಾ ಅಪಘಾತನಾ ಎನ್ನುವುದು ನಿಗೂಢವಾಗಿತ್ತು.‌ ಆದರೆ ಖಾಕಿ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ.

ಕಲಬುರಗಿ: ಯುವಕನ ರುಂಡ-ಮುಂಡ ಬೇರ್ಪಟ್ಟಿದ್ದ ನಿಗೂಢ ಕೇಸ್ ಭೇದಿಸಿದ ಖಾಕಿ
ಬಂಧಿತರು Image Credit source: tv9 kannada
ದತ್ತಾತ್ರೇಯ ಪಾಟೀಲ್​
| Edited By: |

Updated on: Sep 28, 2026 | 9:08 PM

Share

ಕಲಬುರಗಿ, ಸೆಪ್ಟೆಂಬರ್​​ 28: ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬರು (ಬಿ) ಗ್ರಾಮದ ಜಮೀನಿನಲ್ಲಿ ರುಂಡ-ಮುಂಡ ಬೇರೆಯಾಗಿದ್ದ ಯುವಕನ ಶವವೊಂದು ಪತ್ತೆಯಾಗಿತ್ತು. ನಿಗೂಢ ಪ್ರಕರಣವನ್ನು ಬೆನ್ನಟ್ಟಿದ ಗಾಣಗಾಪುರ ಪೊಲೀಸರು ಕೇವಲ 48 ಗಂಟೆಗಳಲ್ಲಿ ಭೇದಿಸಿದ್ದಾರೆ. ಅಪಘಾತವೋ ಅಥವಾ ಕೊಲೆಯೋ ಎಂಬ ಗೊಂದಲ ಮೂಡಿಸಿದ್ದ ಈ ಕೇಸ್​, ಹಣಕಾಸಿನ ವಿಚಾರಕ್ಕೆ ಬರ್ಬರ ಹತ್ಯೆ ನಡೆದಿದೆ ಎಂಬುದು ಇದೀಗ ಬಯಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ಸೆಪ್ಟೆಂಬರ್ 25ರಂದು ಕಲಬುರಗಿ ಜಿಲ್ಲೆ‌ಯ ಅಫಜಲಪುರ ತಾಲೂಕಿನ ಗೊಬ್ಬರು (ಬಿ) ಗ್ರಾಮದ ಜಮೀನಿನಲ್ಲಿ ಓರ್ವ ಯುವಕನ ಶವ ಸಿಕ್ಕಿತ್ತು.‌ ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಗಾಣಗಾಪುರ ಪೊಲೀಸರು ರುಂಡ-ಮುಂಡ ಬೇರೆ ಬೇರೆ ಆಗಿ ಬಿದ್ದಿದ್ದ ಯುವಕನ ಶವ ನೋಡಿ ಹೌಹಾರಿದ್ದರು.‌ ಏಕೆಂದರೆ ರಾಜ್ಯ ಹೆದ್ದಾರಿ ಪಕ್ಕದ ಜಮೀನಿನಲ್ಲೇ ಶವ ಬಿದ್ದಿತ್ತು.‌ ಹೆಚ್ಚು ಕಡಿಮೆ ಡಿಕಂಪೋಸ್​​ ಆಗಿತ್ತು.‌

ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿತ್ತು ಶವ

ಇನ್ನು ಗ್ರಾಮದಲ್ಲಿ ಯಾರಾದರೂ ನಾಪತ್ತೆ ಆಗಿದ್ದಾರಾ ಎಂದು ಪೊಲೀಸರು ವಿಚಾರಿಸಿದ್ದಾರೆ. ಆಗ ಗೊಬ್ಬರು ಗ್ರಾಮದ 22 ವರ್ಷದ ಖಲೀಂ ಸಾಬ್ ನಾಪತ್ತೆಯಾಗಿದ್ದ‌ ಎಂಬ ಮಾಹಿತಿ ಸಿಕ್ಕಿತ್ತು.‌ ತಕ್ಷಣ ಕುಟುಂಬಸ್ಥರನ್ನ ಸ್ಥಳಕ್ಕೆ‌ ಕರೆಸಿದ ಪೊಲೀಸರಿಗೆ ಮತ್ತೊಂದು ಶಾಕ‌್ ಕಾದಿತ್ತು. ಅದೇನೆಂದರೆ ಅಲ್ಲಿ ಶವವಾಗಿ ಬಿದ್ದಿದ್ದು ಖಲೀಂ ಸಾಬ್​​ ಎನ್ನುವುದು ಗೊತ್ತಾಗಿದೆ. ಅಲ್ಲಿಗೆ ಶವದ ಗುರುತು ಪತ್ತೆಯಾಗಿತ್ತು.‌ ಆದರೆ ಅದು ಕೊಲೆನಾ ಅಥವಾ ಅಪಘಾತದಿಂದ ರಸ್ತೆ ಮೇಲೆ ಬಿದ್ದಿದ್ದ ಶವವನ್ನ‌ ಪ್ರಾಣಿಗಳು ಎಳೆದು ತಂದಿದ್ದ ಒಂದು ಗೊತ್ತಾಗಿರಲ್ಲ.‌ ಈ ಮಧ್ಯೆ ಶವ ಡಿಕಂಪೋಸ್​​ ಆಗಿರುವುದರಿಂದ ಪೊಲೀಸರು ಕೂಡ ಫುಲ್‌ ಗೊಂದಲ ಆಗಿದ್ದರು.‌

ಇದನ್ನೂ ಓದಿ: ರೇಷನ್ ಕಾರ್ಡ್ ವಿಚಾರಕ್ಕೆ ತಮ್ಮನಿಗೆ ಅಣ್ಣನೇ ಚಾಕು ಹಾಕಿದ್ನಾ? ಒಡವಟ್ಟಿದವರ ದ್ವೇಷದ ಹಿಂದಿರುವ ಕಥೆ ಇಲ್ಲಿದೆ

ಇತ್ತ ಖಲೀಂ‌ ಸಾಬ್‌ ಮನೆಯವರು ಕೊಲೆ‌ ಕೇಸ್ ದಾಖಲಿಸಿದ್ದರು.‌ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಸದ್ಯ ಸ್ಫೋಟಕ ವಿಚಾರ ಗೊತ್ತಾಗಿದೆ.‌ ಅದು ಅಪಘಾತ ಅಲ್ಲ, ಅದೊಂದು ಬರ್ಬರ ಹತ್ಯೆ ಎನ್ನುವುದು ಬಯಲಾಗಿದೆ. ಹಣದ ವಿಚಾರವಾಗಿ ನಂದಿಕೂರ ತಾಂಡಾದ ಸಂದೀಪ್‌ ಪವಾರ್ ಮತ್ತು ಸಂದೀಪ್‌ ಚವ್ಹಾಣ್ ಕೊಲೆ‌ ಮಾಡಿ ಯಾವುದೇ ಸುಳಿವು ನೀಡದೇ ಪರಾರಿ ಆಗಿದ್ದರು ಎನ್ನುವುದು ಗೊತ್ತಾಗಿದೆ.‌ ಸದ್ಯ ಪೊಲೀಸರು ಇಬ್ಬರನ್ನ ಬಂಧಿ‌ಸಿ ನ್ಯಾಯಂಗ ಬಂಧನಕ್ಕೊಪ್ಪಿಸಿದ್ದಾರೆ.

LIVE TV

ಪೆಟ್ರೋಲ್ ತಂದುಕೊಟ್ಟ ಹಣಕ್ಕಾಗಿ ಜಗಳ: ಹತ್ಯೆ

ಇನ್ನು ಬಂಧಿತರ ವಿಚಾರಣೆ ನಡೆಸಿರುವ ಖಾಕಿಗೆ ಅದೊಂದು ಹಣಕಾಸಿನ ವಿಚಾರಕ್ಕೆ ನಡೆದ ಕೊಲೆ ಎನ್ನುವುದು ಗೊತ್ತಾಗಿದೆ. ಸೆಪ್ಟೆಂಬರ್​ 25ರಂದು ಆರೋಪಿಗಳು ತಮ್ಮೂರಿನಿಂದ ಗಾಣಗಾಪುರಕ್ಕೆ ಹೋಗಿ ವಾಪಸ್ ಬರುವಾಗ ಬೈಕ್ ಪೆಟ್ರೋಲ್ ಖಾಲಿಯಾಗಿದ್ದು ತಳ್ಳಿಕೊಂಡು ಬರುತ್ತಿದ್ದರು. ಆಗ ಈ ಖಲೀಂ ಸಾಬ್ ಎದುರಾಗಿದ್ದಾನೆ. ಈ ವೇಳೆ ತಳ್ಳಿಕೊಂಡು ಬರುತ್ತಿದ್ದವರನ್ನ ಮಾತನಾಡಿಸಿದ್ದಾನೆ. ಅವಾಗ ಪೆಟ್ರೋಲ್ ತಂದು ಕೊಡುತ್ತೇನೆ ನನಗೆ ಹಣ ಕೊಡಬೇಕು ಎಂದಿದ್ದನಂತೆ. ಅದರಂತೆ ಪೆಟ್ರೋಲ್ ತಂದು ಕೊಟ್ಟಿದ್ದು, ಆರೋಪಿಗಳು 200 ರೂ ನೀಡಿದ್ದಾರೆ. ಆದರೆ ಇದು ಸಾಕಗಲ್ಲ ಇನ್ನು ಬೇಕು ಎಂದು ಪೀಡಿಸಿದ್ದನಂತೆ.

48 ಗಂಟೆಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು

ಈ ವೇಳೆ ಖಲೀಂ ಮತ್ತು ಹಂತಕರ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಖಲೀಂನ ಕೊಲೆ ಮಾಡಿದ್ದಾರೆ. ಅಲ್ಲದೇ ಡೆಡ್​ ಬಾಡಿಯನ್ನ ತೊಗರಿ ಬೆಳೆದ ಜಮೀನನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಎಸೆದು ಪರಾರಿ ಆಗಿದ್ದಾರೆ. ಹೀಗಾಗಿ ಯಾರಿಗೂ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಅಲ್ಲದೇ ಖಲೀಂ ಮೊಬೈಲ್ ಬಳಕೆ ಮಾಡದಿರುವುದರಿಂದ ಕೇಸ್ ಪತ್ತೆ ಹಚ್ಚುವುದು ಬಹಳ ಸವಾಲಿನ ಕೆಲಸವಾಗಿತ್ತು. ಆದರೂ ಸ್ಥಳೀಯರು ನೀಡಿದ ಸುಳಿವಿನ ಮೇರೆಗೆ ಇಬ್ಬರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ದತ್ತಾತ್ರೇಯ ಪಾಟೀಲ್​
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More