ಪುಣೆಯ ಹೊರವಲಯದಲ್ಲಿರುವ ಹೋಟೆಲ್‌ವೊಂದರಲ್ಲಿ ಶನಿವಾರ ರಾತ್ರಿ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಟೆಕ್ಕಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಿದ ಆರೋಪದಲ್ಲಿ ಮಹಿಳೆಯ ಗೆಳೆಯನನ್ನು ಬಂಧಿಸಲಾಗಿದ್ದು, ಆತನಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಪಿಂಪ್ರಿ ಚಿಂಚ್‌ವಾಡದ ಹಿಂಜೆವಾರಿ ಪ್ರದೇಶದ ಓಯೋ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹೋಟೆಲ್‌ಗೆ ಆಗಮಿಸಿ ಮಹಿಳೆಯ ಶವವನ್ನು ಹೊರತೆಗೆದರು. ಶವ ನೆಲದ ಮೇಲೆ ಬಿದ್ದಿದ್ದು, ಕೋಣೆಯಲ್ಲಿ ರಕ್ತದ ಕಲೆಗಳು ಕಂಡುಬಂದಿವೆ.
ಪೊಲೀಸರ ಪ್ರಕಾರ, ಮಹಿಳೆಯನ್ನು ವಂದನಾ ದ್ವಿವೇದಿ ಎಂದು ಗುರುತಿಸಲಾಗಿದೆ ಮತ್ತು ಆಕೆಯ ಗೆಳೆಯ ರಿಷಬ್ ನಿಗಮ್ ಎಂದು ಗುರುತಿಸಲಾಗಿದೆ. ಇಬ್ಬರೂ ಮೂಲತಃ ಉತ್ತರ ಪ್ರದೇಶದವರು. ಇವರಿಬ್ಬರ ನಡುವೆ ಪರಸ್ಪರ ಸಂಬಂಧವಿದ್ದು, ಜಗಳವೇ ಕೊಲೆಗೆ ಕಾರಣ ಎಂಬುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ಈ ದುರಂತ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಆರೋಪಿಯನ್ನು ಈಗ ವಿಚಾರಣೆ ನಡೆಸಲಾಗುತ್ತಿದೆ.
ಮತ್ತಷ್ಟು ಓದಿ: ಪೆರೋಲ್ ಮೇಲೆ ಹೊರ ಬಂದಿದ್ದ ಕೊಲೆ ಆರೋಪಿಯಿಂದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಅತ್ಯಾಚಾರ
ಹೋಟೆಲ್‌ನ ಸಿಸಿಟಿವಿ ಫೂಟೇಜ್‌ನಲ್ಲಿ ರಿಷಬ್ ತಡರಾತ್ರಿ ಕೋಣೆಯಿಂದ ಹೊರಬರುವುದನ್ನು ಕಾಣಬಹುದು.
ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸಿದರು ಬಳಿಕ ಆತ ಸಿಕ್ಕಿಬಿದ್ದಿದ್ದಾನೆ.
ಈ ಹೋಟೆಲ್ ರೂಂ ಬುಕಿಂಗ್ ಅನ್ನು ವಂದನಾ ಮತ್ತು ರಿಷಭ್ ಹೆಸರಿನಲ್ಲಿ ಮಾಡಲಾಗಿತ್ತು. ಆದ್ದರಿಂದ ಆತನ ಮೇಲೆ ಅನುಮಾನ ಹೆಚ್ಚಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಶಾಲ್ ಹಿರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ