ಸಂಜನಾ ಆಪ್ತ ರಾಹುಲ್​ ನಿಜಕ್ಕೂ ಶ್ರೀಲಂಕಾದ ಬ್ಯಾಲಿಸ್ ಕ್ಯಾಸಿನೋ ಮಾಲೀಕನಾ?

ಬೆಂಗಳೂರು: CCB ತನಿಖೆ ಬಳಿಕ ಬಂಧನಕ್ಕೆ ಒಳಗಾದ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್​ನ ಕುರಿತು ಸಾಕಷ್ಟು ವಿಚಾರಗಳು ಬೆಳಕಿಗೆ ಬಂದಿದೆ. ಅಸಲಿಗೆ, ಆರೋಪಿ ರಾಹುಲ್ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿರಲಿಲ್ಲ. ಶ್ರೀಲಂಕಾದ ಬ್ಯಾಲಿಸ್ ಕ್ಯಾಸಿನೋದಲ್ಲಿ ಈತ ಏಜೆಂಟ್ ಆಗಿದ್ದು ಭಾರತದಿಂದ ಜನರನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ತನ್ನ ಕೆಲಸಕ್ಕಾಗಿ ಪರ್ಸೆಂಟ್ ಲೆಕ್ಕದಲ್ಲಿ ಹಣ ಪಡೆಯುತ್ತಿದ್ದ ರಾಹುಲ್‌ಗೆ ಒಬ್ಬ ಗುರು ಇದ್ದಾನೆ. ಆತ BTM ಲೇಔಟ್‌ನ ನಿವಾಸಿ. ಈತನೇ ಶ್ರೀಲಂಕಾದ ಬ್ಯಾಲಿಸ್ ಕ್ಯಾಸಿನೋದ ಪ್ರಮುಖ […]

ಸಂಜನಾ ಆಪ್ತ ರಾಹುಲ್​ ನಿಜಕ್ಕೂ ಶ್ರೀಲಂಕಾದ ಬ್ಯಾಲಿಸ್ ಕ್ಯಾಸಿನೋ ಮಾಲೀಕನಾ?
Updated By: ಸಾಧು ಶ್ರೀನಾಥ್​

Updated on: Sep 04, 2020 | 5:03 PM

ಬೆಂಗಳೂರು: CCB ತನಿಖೆ ಬಳಿಕ ಬಂಧನಕ್ಕೆ ಒಳಗಾದ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್​ನ ಕುರಿತು ಸಾಕಷ್ಟು ವಿಚಾರಗಳು ಬೆಳಕಿಗೆ ಬಂದಿದೆ.

ಅಸಲಿಗೆ, ಆರೋಪಿ ರಾಹುಲ್ ಶ್ರೀಲಂಕಾದಲ್ಲಿ ಕ್ಯಾಸಿನೋ ನಡೆಸುತ್ತಿರಲಿಲ್ಲ. ಶ್ರೀಲಂಕಾದ ಬ್ಯಾಲಿಸ್ ಕ್ಯಾಸಿನೋದಲ್ಲಿ ಈತ ಏಜೆಂಟ್ ಆಗಿದ್ದು ಭಾರತದಿಂದ ಜನರನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ತನ್ನ ಕೆಲಸಕ್ಕಾಗಿ ಪರ್ಸೆಂಟ್ ಲೆಕ್ಕದಲ್ಲಿ ಹಣ ಪಡೆಯುತ್ತಿದ್ದ ರಾಹುಲ್‌ಗೆ ಒಬ್ಬ ಗುರು ಇದ್ದಾನೆ. ಆತ BTM ಲೇಔಟ್‌ನ ನಿವಾಸಿ. ಈತನೇ ಶ್ರೀಲಂಕಾದ ಬ್ಯಾಲಿಸ್ ಕ್ಯಾಸಿನೋದ ಪ್ರಮುಖ ಏಜೆಂಟ್ ಎಂದು ಹೇಳಲಾಗಿದೆ.

ರಾಹುಲ್ ಗುರುವಿನ ಬಳಿ ಏಜೆಂಟ್ ಕಾರ್ಡ್ ಇತ್ತು. ಹೀಗಾಗಿ, ಈತನ ಜೊತೆ ರಾಹುಲ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ತನ್ನ ಬಾಸ್ ಬಳಿ ಏಜೆಂಟ್ ಕಾರ್ಡ್‌ಗಳನ್ನ ಪಡೆದು ಅತಿಥಿಗಳನ್ನ ಕ್ಯಾಸಿನೋಗೆ ಕರೆದುಕೊಂಡು ಹೋಗುತ್ತಿದ್ದನಂತೆ. ಇವರು ಕ್ಯಾಸಿನೋಗೆ ಯಾರನ್ನಾದ್ರು ಕರೆದುಕೊಂಡು ಹೋಗಿ ಅಲ್ಲಿ ಆಡಲು ಹೋದವರು ಹಣ ಕಳೆದುಕೊಂಡಿದ್ದರಲ್ಲಿ 60-40 ಒಪ್ಪಂದದಂತೆ ಈತನಿಗೆ ಶೇಕಡಾ 40ರಷ್ಟು ಹಣ ಸಿಗುತ್ತಿತ್ತಂತೆ.

ಹೀಗಾಗಿ, ರಾಹುಲ್ ವಾರಕ್ಕೆ ಒಮ್ಮೆ ಶ್ರೀಲಂಕಾಗೆ ಹೋಗುತ್ತಿದ್ದು ತನ್ನೊಟ್ಟಿಗೆ ಪ್ರತಿ ವಾರ ಕಸ್ಟಮರ್‌ಗಳನ್ನು ಸಹ ಕರೆದುಕೊಂಡು ಹೋಗುತ್ತಿದ್ದ. ಜೊತೆಗೆ, ಇದೇ ಕ್ಯಾಸಿನೋದಲ್ಲಿ ರಾಹುಲ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದ.