ನಟಿ ರಾಗಿಣಿ ಆಪ್ತ ರವಿಶಂಕರ್ ವಿರುದ್ಧ ಶಿಸ್ತುಕ್ರಮ.. ಅಮಾನತು ಆಗುವ ಸಾಧ್ಯತೆ
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಮಾಫಿಯಾ ನಂಟಿನ ಪ್ರಕರಣದಲ್ಲಿ CCB ವಿಚಾರಣೆಗೆ ಒಳಪಡಿಸಲಾಗಿರುವ ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ರವಿಶಂಕರ್ ಜಯನಗರ RTO ಕಚೇರಿಯಲ್ಲಿ ಕೆಲಸ ಮಾಡ್ತಿದ್ದು ಡ್ರಗ್ಸ್ ಜಾಲದಲ್ಲಿ ಈತನ ಹೆಸರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರವಿಶಂಕರ್ ವಿರುದ್ಧ ಶಿಸ್ತುಕ್ರಮಕ್ಕೆ ಸಾರಿಗೆ ಸಚಿವರಿಂದ ಸೂಚನೆ ನೀಡಲಾಗಿದೆ. ಜೊತೆಗೆ, ಇಂದು ಸಂಜೆಯೊಳಗೆ ರವಿಶಂಕರ್ ಅಮಾನತು ಆಗುವ ಸಾಧ್ಯತೆಯಿದೆ ಎಂದು ಸಹ ಹೇಳಲಾಗಿದೆ. ಪೊಲೀಸ್ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಮಾಫಿಯಾ ನಂಟಿನ ಪ್ರಕರಣದಲ್ಲಿ CCB ವಿಚಾರಣೆಗೆ ಒಳಪಡಿಸಲಾಗಿರುವ ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ರವಿಶಂಕರ್ ಜಯನಗರ RTO ಕಚೇರಿಯಲ್ಲಿ ಕೆಲಸ ಮಾಡ್ತಿದ್ದು ಡ್ರಗ್ಸ್ ಜಾಲದಲ್ಲಿ ಈತನ ಹೆಸರು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರವಿಶಂಕರ್ ವಿರುದ್ಧ ಶಿಸ್ತುಕ್ರಮಕ್ಕೆ ಸಾರಿಗೆ ಸಚಿವರಿಂದ ಸೂಚನೆ ನೀಡಲಾಗಿದೆ.
ಜೊತೆಗೆ, ಇಂದು ಸಂಜೆಯೊಳಗೆ ರವಿಶಂಕರ್ ಅಮಾನತು ಆಗುವ ಸಾಧ್ಯತೆಯಿದೆ ಎಂದು ಸಹ ಹೇಳಲಾಗಿದೆ. ಪೊಲೀಸ್ ತನಿಖಾ ವರದಿ ಆಧರಿಸಿ ಶಿಸ್ತುಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಚಿವ ಲಕ್ಷ್ಮಣ ಸವದಿ ಸೂಚನೆ ನೀಡಿದ್ದಾರಂತೆ.
ಇದನ್ನೂ ಓದಿ:ರಾಗಿಣಿ-ನಾನು ಪಾರ್ಟಿಯಲ್ಲಿ ಗಾಂಜಾ ಸೇವಿಸ್ತಿದ್ವಿ.. ಇದೇ ತುಪ್ಪದ ರಾಣಿಗೆ ಮುಳುವಾಗಿದ್ದು!
ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಹಿನ್ನೆಲೆ ಏನು ಗೊತ್ತಾ? ಈತನಿಗಿದೆ ಹೈಲೆವೆಲ್ ಕಾಂಟ್ಯಾಕ್ಟ್
Published On - 3:27 pm, Fri, 4 September 20