ರಾಗಿಣಿ, ರವಿಶಂಕರ್ ಹೆಸರು ಬಾಯ್ಬಿಟ್ಟಿದ್ದು ಇದೇ ಸಾಫ್ಟ್ವೇರ್ ಇಂಜಿನಿಯರ್!
ಬೆಂಗಳೂರು: ಚಾಮರಾಜಪೇಟೆಯಲ್ಲಿರುವ CCB ಕಚೇರಿಯಲ್ಲಿ ರಾಗಿಣಿಗೆ ಸುಮಾರು 40 ಪ್ರಶ್ನೆ ಸಿದ್ಧಪಡಿಸಿರುವ ಅಧಿಕಾರಿಗಳು ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಮೇಲೆ ಕೇಳುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ನೀವು ಕೇವಲ ಡ್ರಗ್ಸ್ ಗ್ರಾಹಕರಾಗಿದ್ದೀರಾ? ಸ್ನೇಹಿತರ ವಲಯಕ್ಕೆ ಡ್ರಗ್ಸ್ ಹಂಚಿಕೆ ಮಾಡುತ್ತಿದ್ದೀರಾ? ಎಂಬಂಥ ಪ್ರಶ್ನೆಗಳನ್ನ ಅಧಿಕಾರಿಗಳು ಕೇಳುತ್ತಿದ್ದಾರೆ. ಈ ಮಧ್ಯೆ ಲಂಚ್ ಬ್ರೇಕ್ ನೀಡಿದ್ದು, ಸಂಜೆಯೂ ಎನ್ಕ್ವೈರಿ ಮುಂದುವರಿಯಲಿದೆ ಎಂದು ತಿಳಿದುಬಂದಿದೆ. ರಾಗಿಣಿ ಆಪ್ತ ರವಿಶಂಕರ್ ಮಾಹಿತಿಯಂತೆ ಈಕೆ ಕೇವಲ ಡ್ರಗ್ಸ್ ಕನ್ಸ್ಯೂಮರ್. ಆದರೆ 2018ರಲ್ಲಿ ಡ್ರಗ್ ಪೆಡ್ಲರ್ ಪ್ರತೀಕ್ […]
ಬೆಂಗಳೂರು: ಚಾಮರಾಜಪೇಟೆಯಲ್ಲಿರುವ CCB ಕಚೇರಿಯಲ್ಲಿ ರಾಗಿಣಿಗೆ ಸುಮಾರು 40 ಪ್ರಶ್ನೆ ಸಿದ್ಧಪಡಿಸಿರುವ ಅಧಿಕಾರಿಗಳು ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಮೇಲೆ ಕೇಳುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ನೀವು ಕೇವಲ ಡ್ರಗ್ಸ್ ಗ್ರಾಹಕರಾಗಿದ್ದೀರಾ? ಸ್ನೇಹಿತರ ವಲಯಕ್ಕೆ ಡ್ರಗ್ಸ್ ಹಂಚಿಕೆ ಮಾಡುತ್ತಿದ್ದೀರಾ? ಎಂಬಂಥ ಪ್ರಶ್ನೆಗಳನ್ನ ಅಧಿಕಾರಿಗಳು ಕೇಳುತ್ತಿದ್ದಾರೆ. ಈ ಮಧ್ಯೆ ಲಂಚ್ ಬ್ರೇಕ್ ನೀಡಿದ್ದು, ಸಂಜೆಯೂ ಎನ್ಕ್ವೈರಿ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.
ರಾಗಿಣಿ ಆಪ್ತ ರವಿಶಂಕರ್ ಮಾಹಿತಿಯಂತೆ ಈಕೆ ಕೇವಲ ಡ್ರಗ್ಸ್ ಕನ್ಸ್ಯೂಮರ್. ಆದರೆ 2018ರಲ್ಲಿ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ಬೇರೆಯದ್ದೇ ಹೇಳಿಕೆ ನೀಡಿದ್ದಾನಂತೆ.
ರಾಗಿಣಿ ತಾನೂ ಮಾದಕ ವಸ್ತು ಸೇವಿಸುವುದಲ್ಲದೆ ಸ್ನೇಹಿತರ ವಲಯಕ್ಕೂ ಡ್ರಗ್ಸ್ ಹಂಚುತ್ತಿದ್ದಳು ಎಂದು ಪ್ರತೀಕ್ ಶೆಟ್ಟಿ ಹೇಳಿಕೆ ನೀಡಿದ್ದನಂತೆ. ಹೀಗಾಗಿ, ರಾಗಿಣಿಗೆ ಎರಡು ದಿಕ್ಕಿನಲ್ಲಿ ಪ್ರಶ್ನೆಗಳನ್ನ CCB ಅಧಿಕಾರಿಗಳು ಕೇಳುತ್ತಿರುವುದಾಗಿ ಹೇಳಲಾಗ್ತಿದೆ.
ಇದನ್ನೂ ಓದಿ: ಐಷಾರಾಮಿ ಹೋಟೆಲ್ owner ನಿಶೆಯಲ್ಲಿ drug ಪೆಡ್ಲರ್! ಅಂದು ತಪ್ಪಿಸ್ಕೊಂಡ.. ಇಂದು ಸಿಕ್ಕಿಬಿದ್ದ
ಸಿನಿ ಗಾಂಜಾ ಘಾಟು ಮೊದಲು ಹೊರಸೂಸಿದ್ದು 2018ರಲ್ಲಿ.. ಅಂದ ಹಾಗೆ, ಸ್ಯಾಂಡಲವುಡ್ ಡ್ರಗ್ಸ್ ದಂಧೆ ಬಯಲಾಗಿದ್ದು ಎರಡು ವರ್ಷಗಳ ಹಿಂದೆ. ಹೌದು, 2018ರಲ್ಲಿ ಬಯಲಿಗೆ ಬಂದ ಪ್ರಕರಣವನ್ನೇ ಈಗ ಅಧಿಕಾರಿಗಳು ತನಿಖೆ ಶುರು ಮಾಡಿರುವುದು.
ಇಂದ್ರಜಿತ್ ಲಂಕೇಶ್ ಹೇಳಿಕೆಗೂ ಮುನ್ನವೇ CCB ಬಳಿ ಈ 15 ಜನ ಸೆಲಬ್ರೆಟಿಗಳ ಲಿಸ್ಟ್ ಇತ್ತಂತೆ. ಅದರಲ್ಲಿ ರಾಗಿಣಿ ಮತ್ತು ರವಿಶಂಕರ್ ಹೆಸರು ಸಹ ಇತ್ತೆಂದು ತಿಳಿದುಬಂದಿದೆ. ಅಂದರೆ, 2018ರಲ್ಲೇ ರಾಗಿಣಿ- ರವಿಶಂಕರ್ ಹೆಸರು ಹೊರಗೆ ಬಂದಿತ್ತು.
ಏನಿದು ಪ್ರಕರಣ? 2018ನವೆಂಬರ್ 2 ರಂದು ಬಾಣಸವಾಡಿ ಠಾಣೆಯಲ್ಲಿ ಒಂದು FIR ದಾಖಲಾಗಿತ್ತು. ಆ ವೇಳೆ ನೈಜೀರಿಯಾದ ಇಬ್ಬರು ಪ್ರಜೆಗಳು ಹಾಗೂ ಪ್ರತೀಕ್ ಶೆಟ್ಟಿ ಎಂಬ ಮೂವರನ್ನ CCB ಬಂಧಿಸಿತ್ತು. ಜೊತೆಗೆ, ಒಂದು ಕೋಟಿ ಎಪ್ಪತ್ತು ಲಕ್ಷ ಮೌಲ್ಯದ ಡ್ರಗ್ಸ್ ಸಹ CCB ವಶಪಡಿಸಿಕೊಂಡಿತ್ತು.
ಈ ವೇಳೆ ಸಾಫ್ಟ್ವೇರ್ ಇಂಜನೀಯರ್ ಸಹ ಆಗಿದ್ದ ಡ್ರಗ್ ಪೆಡ್ಲರ್ ಪ್ರತೀಕ್ ಶೆಟ್ಟಿ ರಾಗಿಣಿ ಮತ್ತು ರವಿಶಂಕರ್ ಸೇರಿ ಸ್ಯಾಂಡಲವುಡ್ನ 15 ಜನರ ಹೆಸರನ್ನ ಬಾಯ್ಬಿಟ್ಟಿದ್ದ. ಅಂದು ಪ್ರತೀಕ್ ಶೆಟ್ಟಿ ಹೇಳಿಕೆಯನ್ನ ದಾಖಲು ಮಾಡಿದ್ದ CCB ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಆಗ ಯಾರಿಗೂ ನೋಟಿಸ್ ನೀಡಿರಲಿಲ್ಲ. ಈಗ ಅದೇ FIR ಆಧಾರದ ಮೇಲೆ ತನಿಖೆಗಿಳಿದಿರುವ CCB, ರವಿಶಂಕರ್ ಬಂಧನದ ಬಳಿಕ ರಾಗಿಣಿ ಮನೆ ಮೇಲಿನ ದಾಳಿಯನ್ನೂ ನಡೆಸಿದೆ.